Thursday, August 28, 2025
HomeUncategorizedಅಲ್ಲು ಅರ್ಜುನ್​ ಬಂಧನ : ಜಾಮೀನಿಗೆ ಅರ್ಜಿ ಸಲ್ಲಿಸಿದ ಪುಷ್ಪ !

ಅಲ್ಲು ಅರ್ಜುನ್​ ಬಂಧನ : ಜಾಮೀನಿಗೆ ಅರ್ಜಿ ಸಲ್ಲಿಸಿದ ಪುಷ್ಪ !

ಹೈದರಾಬಾದ್​​ : ಕಾಲಿವುಡ್​ ನಟ ಅಲ್ಲು ಅರ್ಜುನ್​ ಬಂಧನವಾಗಿದ್ದು. ಸಂಧ್ಯಾ ಟಾಕೀಸಿನಲ್ಲಿ ಕಾಲ್ತುಲಿತದಲ್ಲಿ 35 ವರ್ಷದ ರೇವತಿ ಎಂಬ ಮಹಿಳೆಯೊಬ್ಬರು ಸಾವನ್ನಪ್ಪಿದ ಪ್ರಕರಣದಲ್ಲಿ ನಟನನ್ನು ಬಂಧಿಸಲಾಗಿದೆ.

ಈ ಪ್ರಕರಣದಲ್ಲಿ ಇಂದು ಚಿಕ್ಕಡಪಲ್ಲಿ ಪೋಲಿಸರು,​ ಕಮಿಷನರ್​ ಅವರ ನೇತೃತ್ವದಲ್ಲಿ ಅಲ್ಲು ಅರ್ಜುನ್​ ಮನೆಗೆ ಬಂಧಿಸಲು ಬಂದಿದ್ದು. ಮನೆಯಿಂದಲೆ ಅಲ್ಲು ಅರ್ಜುನ್​ರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿಸುತ್ತಲೆ ಪೋಲಿಸರು ನಟನನ್ನು ಸಿಕಂದರ್​ಬಾದ್​ನ  ಗಾಂಧಿ ಆಸ್ಪತ್ರೆಯಲ್ಲಿ ಮೆಡಿಕಲ್​ ಟೆಸ್ಟ್​ಗೆ ಒಳಪಡಿಸಿದ್ದಾರೆ.

ಅಲ್ಲು ಅರ್ಜುನ್​ರನ್ನು ವಶಕ್ಕೆ ಪಡೆಯುತ್ತಿದ್ದಂತೆ ತೆಲಂಗಾಣದ ಬಿಆರ್​ಎಸ್​ ಪಕ್ಷದ ಕೆ.ಟಿ ರಾಮ್​ರಾವ್​ ಸೇರಿದಂತೆ ಅನೇಕ ಚಿತ್ರನಟರು ಟ್ವಿಟರ್​ನಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು. ಮಹಿಳೆಯ ಸಾವಿಗು, ಅಲ್ಲು ಅರ್ಜುನಗೂ ಯಾವುದೇ ಸಂಬಂಧವಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಅಲ್ಲು ಅರ್ಜುನ್​ ಪತ್ನಿ ಬಂಧನವನ್ನು ಖಂಡಿಸಿ ನ್ಯಾಯಾಲಯದ ಮೊರೆ ಹೋಗಿದ್ದು. ತ್ವರಿತವಾಗಿ ಜಾಮೀನು ವಿಚಾರಣೆ ನಡೆಸಬೇಕು ಎಂದು ಕೋರಿದ್ದಾರೆ. ಇಂದು ಮಧ್ಯಹ್ನಾವೇ ನಾಂಪಲ್ಲಿ ನ್ಯಾಯಾಲಯದಲ್ಲಿ ಜಾಮೀನು ಅರ್ಜಿಯನ್ನು ವಿಚಾರಣೆ ನಡೆಸುತ್ತಾರೆ ಎಂದು ತಿಳಿದುಬಂದಿದೆ. ಒಂದು ವೇಳೆ ಇಂದು ಜಾಮೀನು ಸಿಗದೆ ಇದ್ದರೆ ಪುಷ್ಪ ಸೋಮವಾರದವರೆಗೆ ಕಸ್ಟಡಿಯಲ್ಲಿಯೆ ಇರುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments