Wednesday, August 27, 2025
Google search engine
HomeUncategorized‘ದಂಗಲ್ ಗರ್ಲ್’ ಸುಹಾನಿ ಬಲಿ ಪಡೆದ ಆ ಅಪರೂಪದ ಕಾಯಿಲೆ ಯಾವುದು? ಇಲ್ಲಿದೆ ಮಾಹಿತಿ

‘ದಂಗಲ್ ಗರ್ಲ್’ ಸುಹಾನಿ ಬಲಿ ಪಡೆದ ಆ ಅಪರೂಪದ ಕಾಯಿಲೆ ಯಾವುದು? ಇಲ್ಲಿದೆ ಮಾಹಿತಿ

ಹರಿಯಾಣ: 19ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ‘ದಂಗಲ್ ಗರ್ಲ್’ ಸುಹಾನಿ ಭಟ್ನಾಗರ್ ಅವರ ಸಾವಿಗೆ ಕಾರಣವಾದ ಕಾಯಿಲೆ ಯಾವುದು..? ಲಕ್ಷಣಗಳೇನು ಇಲ್ಲಿದೆ ಸಂಪೂರ್ಣ ಮಾಹಿತಿ

2016ರಲ್ಲಿ ತೆರೆಕಂಡ ‘ದಂಗಲ್’ ಚಿತ್ರದಲ್ಲಿ ಸುಹಾನಿ ಅಮೀರ್ ಖಾನ್ ಮಗಳ ಪಾತ್ರದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಳು. ಕಳೆದ ಮಂಗಳವಾರ ಸುಹಾನಿ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಫೆಬ್ರವರಿ 16 ರಂದು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದರು.

ಆ್ಯಕ್ಸಿಡೆಂಟ್​​ ಬಳಿಕ ಇದೆಲ್ಲ

‘ಕೆಲವು ತಿಂಗಳ ಹಿಂದೆ ಸುಹಾನಿಗೆ ಅಪಘಾತವಾಗಿತ್ತು. ಇದರಿಂದ ಆಕೆಯ ಕಾಲಿಗೆ ಗಂಭೀರ ಗಾಯವಾಗಿತ್ತು.

ಈ ವೇಳೆ ಸುಹಾನಿ ಸೇವಿಸಿದ ಔಷಧಿಯಿಂದ ಸೋಂಕು ತಗುಲಿತ್ತು. ಪರಿಣಾಮ ಕೈಕಾಲುಗಳು ಊದಿಕೊಳ್ಳಲಾರಂಭಿಸಿದ್ದವು. ದೇಹದಲ್ಲಿ ನೀರು ತುಂಬಿಕೊಳ್ಳಲು ಶುರುವಾಗಿತ್ತು.

ವೈದ್ಯಕೀಯ ಪರೀಕ್ಷೆಯಿಂದ ಖಾಯಿಲೆ ಪತ್ತೆ: 

2 ತಿಂಗಳ ಹಿಂದೆ ಸುಹಾನಿ ಎಡಗೈನಲ್ಲಿ ಊತ ಶುರುವಾಗಿತ್ತು. ಆರಂಭದಲ್ಲಿ ಇದನ್ನು ನಾವು ಅಷ್ಟೊಂದು ಗಂಭೀರವಾಗಿ ಪರಿಗಣಿಸಲಿಲ್ಲ. ನಂತರದ ದಿನಗಳಲ್ಲಿ ಇಡೀ ದೇಹವನ್ನ ಊತ ಆವರಿಸಿತ್ತು. ಅನೇಕ ವೈದ್ಯರನ್ನು ಸಂಪರ್ಕಿಸಿದೆವು. ಆದರೆ ಯಾವ ವೈದ್ಯರೂ ರೋಗವನ್ನು ಗುರುತಿಸಲಿಲ್ಲ. 11 ದಿನಗಳ ಹಿಂದಷ್ಟೇ ಸುಹಾನಿಯನ್ನು ದೆಹಲಿಯ ಏಮ್ಸ್‌ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

‘ಡರ್ಮಟೊಮಿಯೊಸಿಟಿಸ್’ ಎಂಬ ಕಾಯಿಲೆ ಸಾವಿಗೆ ಕಾರಣ

ಮಗಳ ಪರೀಕ್ಷೆ ಮಾಡಿದ ಏಮ್ಸ್‌ ವೈದ್ಯರು ಆಕೆಗೆ ‘ಡರ್ಮಟೊಮಿಯೊಸಿಟಿಸ್’ ಎಂಬ ಕಾಯಿಲೆ ಇದೆ. ಇದು ಅತ್ಯಂತ ಅಪರೂಪದ ಕಾಯಿಲೆ. ಈ ರೋಗದಲ್ಲಿ ಸ್ನಾಯುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ. ಕ್ರಮೇಣ ಇಡೀ ದೇಹದಲ್ಲಿ ಊತ ಶರುವಾಗುತ್ತದೆ. ಇದೇ ಕಾರಣಕ್ಕೆ ಸುಹಾನಿ ತನ್ನ ದೇಹದಲ್ಲಿ ತ್ರಾಣ (ಶಕ್ತಿ) ಕಳೆದುಕೊಂಡಿದ್ದಾಳೆ ಎಂದು ವೈದ್ಯರು ತಿಳಿಸಿದರು.

ಚೇತರಿಸಿಕೊಳ್ಳಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ದೇಹದಲ್ಲಿ ತ್ರಾಣ ಇಲ್ಲದಿರೋದ್ರಿಂದ ದೇಹಕ್ಕೆ ಸೋಂಕು ಉಂಟಾಗಿದೆ. ಕೊನೆ ದಿನಗಳಲ್ಲಿ ಶ್ವಾಸಕೋಶದಲ್ಲಿ ನೀರು ತುಂಬಿತ್ತು. ಇದರಿಂದ ಆಕೆಗೆ ಉಸಿರಾಟದಲ್ಲಿ ತೊಂದರೆ ಆಗಿತ್ತು ಎಂದು ತಿಳಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments