Sunday, August 24, 2025
Google search engine
HomeUncategorized50 ರೂಪಾಯಿಗಾಗಿ ಹುಟ್ಟಿದ ಜಗಳ; ಕೊಲೆಯಲ್ಲಿ ಅಂತ್ಯ

50 ರೂಪಾಯಿಗಾಗಿ ಹುಟ್ಟಿದ ಜಗಳ; ಕೊಲೆಯಲ್ಲಿ ಅಂತ್ಯ

ಹಾಸನ: ಮದ್ಯಪಾನದ ವೇಳೆ 50 ರೂ.ಗೆ ಹುಟ್ಟಿದ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳ ಹೋಬಳಿಯ ಅರುವನಹಳ್ಳಿ ಗ್ರಾಮದಲ್ಲಿ ನಡೆದಿದೆ.

ರಾಮಚಂದ್ರ ಸಂಜೀವಪ್ಪನವರ (42) ಕೊಲೆಯಾದ ವ್ಯಕ್ತಿ. ರುದ್ರಯ್ಯ ಕೊಂಗವಾಡ ರಾಮಚಂದ್ರನನ್ನು ಕೊಲೆಗೈದ ಆರೋಪಿ.

 ಘಟನೆಯ ವಿವರ:

ರುದ್ರಯ್ಯ ಹಾಗೂ ರಾಮಚಂದ್ರ ಬಾಗಲಕೋಟೆ ಜಿಲ್ಲೆ, ಬಾದಾಮಿ ಪಟ್ಟಣದ, ಕಳ್ಳಿಪೇಟೆ ಓಣಿಯ ನಿವಾಸಿಗಳು. ಅವರಿಬ್ಬರೂ ಎರಡು ವಾರಗಳ ಹಿಂದೆ ಇಟ್ಟಿಗೆ ಕಾರ್ಖಾನೆಯಲ್ಲಿ ಕೂಲಿ ಕೆಲಸಕ್ಕೆ ಬಂದಿದ್ದರು. ಜತೆಯಾಗಿಯೇ ಕೆಲಸ ಮಾಡುವ ಉತ್ಸಾಹದಿಂದ ಅವರಿಬ್ಬರೂ ಅರುವನಹಳ್ಳಿ ಗ್ರಾಮದ ಕೆಪಿಐ ಇಟ್ಟಿಗೆ ಕಾರ್ಖಾನೆಗೆ ಬಂದಿದ್ದರು. ಕೆಲಸವನ್ನೂ ಮಾಡುತ್ತಿದ್ದರು.

ಈ ನಡುವೆ, ಬುಧವಾರ ರಾತ್ರಿ ಅವರಿಬ್ಬರೂ ಜತೆಯಾಗಿ ಕುಳಿತು ಕುಡಿಯಲು ಆರಂಭ ಮಾಡಿದ್ದಾರೆ. ಹಿಂದಿನಿಂದಲೂ ಗೆಳೆಯರಾಗಿದ್ದರಿಂದ ಹಲವಾರು ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಈ ನಡುವೆ, ಕುಡಿದ ಮತ್ತಿನಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರ ನಡುವೆ ಜಗಳ ಆರಂಭವಾಗಿದೆ. ಯಾವತ್ತೋ ತೆಗೆದುಕೊಂಡ 50 ರೂ. ವಿಚಾರದಲ್ಲಿ ಅವರಿಬ್ಬರೂ ಜಗಳ ಶುರು ಮಾಡಿದ್ದಾರೆ.

ಜಗಳ ವಿಕೋಪಕ್ಕೆ ರಾಮಚಂದ್ರನ ಮೇಲೆ ರುದ್ರಯ್ಯ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ರಾಮಚಂದ್ರ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಶ್ರವಣಬೆಳಗೊಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments