ಚಂದನ ವನದ ನಟ-ನಿರ್ದೇಶಕ ರಮೇಶ್ ಅರವಿಂದ್ ವ್ಯಾಲೆಂಟೈನ್ಸ್ ಡೇ ಪ್ರಯುಕ್ತ ತನ್ನ ಪತ್ನಿ ಅರ್ಚನಾ ಅವರೊಂದಿಗಿನ ಸ್ಪೆಷಲ್ ಫೋಟೋ ಹಂಚಿಕೊಂಡು, ಪ್ರೇಮಿಗಳಿಗೆ ಒಂದು ವಿಶೇಷ ಸಂದೇಶವನ್ನು ತಿಳಿಸಿದ್ದಾರೆ.
ಹ್ಯಾಂಡ್ಸಮ್ ಹೀರೋ ರಮೇಶ್ ಅರವಿಂದ್ ತಮ್ಮ ಮತ್ತು ಪತ್ನಿ ಅರ್ಚನಾ ಜೊತೆಗಿನ ಅಪರೂಪದ ಫೋಟೋಗಳನ್ನ ಹಂಚಿಕೊಡು ಪ್ರೇಮಿಗಳ ದಿನದ ಶುಭಾಷಯಗಳನ್ನ ಎಲ್ಲರ ಪ್ರೇಮಿಗಳಿಗೆ ತಿಳಿಸಿದ್ದಾರೆ. ಪ್ರೀತಿ ಮತ್ತು ಅದರ ಶಕ್ತಿ ಏನೂ ಅನ್ನೋದನ್ನ ಕೂಡ ಹೇಳಿಕೊಂಡಿದ್ದಾರೆ.
ನಿಮ್ಮ ಒಳ್ಳೆ ಗೆಳತಿ ನಿಮ್ಮ ಅತಿ ದೊಡ್ಡ ಶಕ್ತಿ ಆಗಿದ್ದರೇ ಹೇಗೆ? ಹೌದು, ಇವರ ಮಾತು ತಮ್ಮ ಪತ್ನಿ ಅರ್ಚನಾ ಅವರ ಕುರಿತೇ ಆಗಿದೆ. ಪ್ರೇಮಿಗಳ ದಿನದಂದು ಈ ಒಂದು ಮಾತನ್ನು ಹೇಳಿದ್ದಾರೆ.
When your Biggest strength is also your Best friend.ಪ್ರೀತಿಸಿದ ಹುಡುಗಿ ಇಲ್ವೇ ಬೆಸ್ಟ್ ಫ್ರೆಂಡ್ ಪ್ರೀತಿಸಿದ್ರೆ ಸಿಗೋ ಪ್ರೀತಿ ಮತ್ತು ಶಕ್ತಿನೇ ಬೇರೆ ಅಲ್ವೇ..? ಎಂದು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಅವರು ಬರೆದುಕೊಂಡಿದ್ದಾರೆ.

ರಮೇಶ್ ಅರವಿಂದ್ ಮತ್ತು ಅರ್ಚನಾ ಅವರು ಪ್ರೀತಿಸಿ ಮದುವೆ ಆಗಿದ್ದಾರೆ. ಸಿನಿಮಾ ನಟನಾಗೋ ಮೊದಲೇ ಪ್ರೀತಿ ಇತ್ತು. ಆ ದಿನಳಿಂದಲೂ ಲವ್ಲಿ ಲವರ್ಸ್ ಆಗಿಯೇ ಇದ್ದವರು, ಲವ್ಲಿ ಅಪ್ಪ ಅಮ್ಮ ಕೂಡ ಆಗಿದ್ದಾರೆ. ಲವ್ಲಿ ಪೇರ್ ಅಂತಲೂ ಅನಿಸಿಕೊಂಡಿದ್ದಾರೆ.