ಬೆಂಗಳೂರು : ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ವಿಶ್ವ ಟೆಸ್ಟ್ ಕ್ರಿಕೆಟ್ನ ನಂಬರ್ 1 ಬೌಲರ್ ಆಗಿ ಹೊರಹೊಮ್ಮಿದ್ದಾರೆ.
ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 9 ವಿಕೆಟ್ ಕಬಳಿಸುವ ಮೂಲಕ 881 ಅಂಕಗಳೊಂದಿಗೆ ರ್ಯಾಂಕಿಂಗ್ನಲ್ಲಿ ನಂ.1 ಪಟ್ಟಕ್ಕೇರಿಸಿದ್ದಾರೆ.
ಅಲ್ಲದೆ, ನಂ.1 ಸ್ಥಾನಕ್ಕೆ ಏರಿದ ಭಾರತದ ಮೊದಲ ವೇಗದ ಬೌಲರ್ ಹಾಗೂ 4ನೇ ಆಟಗಾರ ಎಂಬ ಶ್ರೇಯಕ್ಕೆ ಬುಮ್ರಾ ಪಾತ್ರರಾಗಿದ್ದಾರೆ. ಈ ಹಿಂದೆ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಬಿಶನ್ ಬೇಡಿ ಈ ಸಾಧನೆ ಮಾಡಿದ್ದರು. ರ್ಯಾಂಕಿಂಗ್ನಲ್ಲಿ ಅಶ್ವಿನ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಜಡೇಜಾ 6ನೇ ಸ್ಥಾನದಲ್ಲಿದ್ದಾರೆ.
ಪ್ರಸ್ತುತ ಐಸಿಸಿ ಟೆಸ್ಟ್ ಬೌಲರ್ಗಳ ಶ್ರೇಯಾಂಕ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ (881 ಅಂಕಗಳು) ಅಗ್ರಸ್ಥಾನದಲ್ಲಿದ್ದರೆ, ಸೌತ್ ಆಫ್ರಿಕಾದ ಕಗಿಸೊ ರಬಾಡ (851 ಅಂಕಗಳು) ದ್ವಿತೀಯ ಸ್ಥಾನದಲ್ಲಿದ್ದಾರೆ. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ (841 ಅಂಕಗಳು) ತೃತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಆಸ್ಟ್ರೇಲಿಯಾ ವೇಗಿಗಳಾದ ಪ್ಯಾಟ್ ಕಮಿನ್ಸ್ (828 ಅಂಕಗಳು) ಹಾಗೂ ಜೋಶ್ ಹ್ಯಾಜಲ್ವುಡ್ (818 ಅಂಕಗಳು) ಕ್ರಮವಾಗಿ 4ನೇ ಮತ್ತು 5ನೇ ಸ್ಥಾನಗಳಲ್ಲಿದ್ದಾರೆ.
??? ????? ??????? ?????? ???? N̶O̶T̶ ?????! ?
Say hello to ICC Men’s No. 1 Ranked Bowler in Tests ?
Our very own – Jasprit Bumrah ??#TeamIndia | @Jaspritbumrah93 pic.twitter.com/pxMYCGgj3i
— BCCI (@BCCI) February 7, 2024