ರಾಯಚೂರು: ಡಿ ಬಾಸ್ ದರ್ಶನ್ ನಟನೆಯ ಕಾಟೇರ ಸಿನಿಮಾ ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದ್ದು ಇದೀಗ ಪೈರಸಿ ಕಾಟ ಶುರುವಾಗಿದೆ. ಚಿತ್ರದ ಪೈರಸಿ ಲಿಂಕ್ ಮಾರಾಟ ಮಾಡುತ್ತಿದ್ದ ಮೌನೇಶ್ ಎಂಬಾತನನ್ನು ಬಂಧಿಸಲಾಗಿದೆ. ಕಿಂಗ್ ಪಿನ್ ಆಗಿರುವ ಉಪೇಂದ್ರ ಎಂಬ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ರಾಯಚೂರಿನ ಸದರ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೇವದುರ್ಗ ತಾಲೂಕಿನ ಗಂಗಾನಾಯಕ್ ತಾಂಡದ ಮೌನೇಶ್ ಎಂಬ ಯುವಕ 40 ರೂಪಾಯಿಗೆ ‘ಕಾಟೇರ’ ಸಿನಿಮಾದ ಪೈರಸಿ ಲಿಂಕ್ ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಂಧನಕ್ಕೆ ಒಳಗಾಗಿದ್ದಾನೆ. ಕಾಪಿ ರೈಟ್ ಆ್ಯಕ್ಟ್ ಮತ್ತು ಐಪಿಸಿ ಸೆಕ್ಷನ್ 420 ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಎಲ್ಗರ್ ಔಟಾದಾಗ ಸಂಭ್ರಮಿಸದಂತೆ ಮನವಿ; ಕೊಹ್ಲಿ ನಡೆಗೆ ಅಭಿಮಾನಿಗಳು ಫಿದಾ
ಪೈರಸಿಯಿಂದಾಗಿ ನಿರ್ಮಾಪಕರಿಗೆ ಮತ್ತು ವಿತರಕರಿಗೆ ನಷ್ಟ ಆಗಿದೆ. ಈ ಹಿನ್ನೆಲೆಯಲ್ಲಿ ವಾದಿರಾಜ ಎಂಬುವವರು ದೂರು ದಾಖಲಿಸಿದ್ದಾರೆ. ‘ವಾಟ್ಸ್ ಆಪ್’ ಮೂಲಕ ಚಾಟ್ ಮಾಡಿ 40 ರೂಪಾಯಿ ಫೋನ್ ಪೇ ಮಾಡಿ ಸಿನಿಮಾದ ಲಿಂಕ್ ಪಡೆದಿದ್ದ ವಾದಿರಾಜ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
‘ಕಾಟೇರ’ ಸಿನಿಮಾಗೆ ತರುಣ್ ಸುಧೀರ್ ನಿರ್ದೇಶನ ಮಾಡಿದ್ದಾರೆ. ದರ್ಶನ್ ಜೊತೆ ಆರಾಧನಾ, ಶ್ರುತಿ, ಕುಮಾರ್ ಗೋವಿಂದ್, ಜಗಪತಿ ಬಾಬು, ವಿನೋದ್ ಆಳ್ವಾ, ವೈಜನಾಥ ಬೀರಾದರ, ಅವಿನಾಶ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.



Pinco slot maşınları çox maraqlıdır. Mobil tətbiq rahatlığı ilə mərclər et — https://pinkoaz.website.yandexcloud.net/. Pinco oyunçular üçün çoxlu seçim təklif edir.
Pinco kazino bonusları daim artırılır.