Wednesday, August 27, 2025
Google search engine
HomeUncategorizedಐಪಿಎಲ್​ನಿಂದ ಪಾಂಡ್ಯ ಔಟ್ : ಮತ್ತೆ ರೋಹಿತ್ ಶರ್ಮಾ ಕ್ಯಾಪ್ಟನ್?

ಐಪಿಎಲ್​ನಿಂದ ಪಾಂಡ್ಯ ಔಟ್ : ಮತ್ತೆ ರೋಹಿತ್ ಶರ್ಮಾ ಕ್ಯಾಪ್ಟನ್?

ಬೆಂಗಳೂರು : ಪಾದದ ಗಾಯದಿಂದ ಬಳಲುತ್ತಿರುವ ಹಾರ್ದಿಕ್ ಪಾಂಡ್ಯ ಅವರು ಐಪಿಎಲ್​-2024ರಲ್ಲಿ ಆಡುವುದು ಬಹುತೇಕ ಅನುಮಾನವಾಗಿದೆ. ಹೀಗಾಗಿ, ಮತ್ತೆ ರೋಹಿತ್ ಶರ್ಮಾ ಅವರೇ ಮುಂಬೈ ನಾಯಕನಾಗಿ ಮುಂದುವರಿಯುವ ಸಾಧ್ಯತೆಯಿದೆ.

ವಿಶ್ವಕಪ್​ನಲ್ಲಿ ಹಾರ್ದಿಕ್ ಪಾಂಡ್ಯ ಗಾಯದಿಂದ ಟೂರ್ನಿಯಿಂದಲೇ ಹೊರಗುಳಿದಿದ್ದರು. ಮುಂಬರುವ ಭಾರತ ಹಾಗೂ ಅಫ್ಘಾನಿಸ್ತಾನ ವಿರುದ್ಧದ ಟಿ-20 ಸರಣಿಯಲ್ಲಿ ಪಾಂಡ್ಯ ಆಡುವುದೂ ಅನುಮಾನವಾಗಿದೆ. ಈ ನಡುವೆಯೇ ಪಾಂಡ್ಯ ಐಪಿಎಲ್-2024ನಲ್ಲಿ ಆಡುವುದಿಲ್ಲ ಎಂದು ವರದಿಯಾಗಿದೆ.

ಭಾರತ ತಂಡಕ್ಕೆ ಇಂಜುರಿ ಸಮಸ್ಯೆ ಬಿಟ್ಟು ಬಿಡದಂತೆ ಕಾಡುತ್ತಿದೆ. ಹಾರ್ದಿಕ್ ಪಾಂಡ್ಯ ಬಳಿಕ ಸೂರ್ಯಕುಮಾರ್ ಯಾದವ್ ಸಹ ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರು. ಇದೀಗ, ಯುವ ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಸಹ ಇಂಜುರಿಗೆ ಒಳಗಾಗಿದ್ದಾರೆ. ಪರಿಣಾಮ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್​ ಸರಣಿಯಿಂದ ಗಾಯಕ್ವಾಡ್ ತಂಡದಿಂದ ಹೊರಗುಳಿದಿದ್ದಾರೆ.

ಐಪಿಎಲ್-2024 (ಇಂಡಿಯನ್ ಪ್ರೀಮಿಯರ್ ಲೀಗ್) ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಮುಂಬೈ ಇಂಡಿಯನ್ಸ್ ತಂಡದ ನಾಯಕರಾಗಿ ನೇಮಕವಾಗಿದ್ದಾರೆ.

ಐಪಿಎಲ್-2024ರಲ್ಲಿ ಹಾರ್ದಿಕ್ ಪಾಂಡ್ಯ ಕೈಯಲ್ಲಿ ಮುಂಬೈ ನಾಯಕತ್ವ ಇರಲಿದೆ. ಇದಕ್ಕೆ ಹಲವು ಕಡೆ ಟೀಕೆ ವ್ಯಕ್ತವಾಗಿದ್ದು, ಇದೀಗ ಪಾಂಡ್ಯ ಐಪಿಎಲ್-2024ರಿಂದ ಹೊರಗುಳಿಯುವ ಸಾಧ್ಯತೆಯಿದೆ ಎಂಬ ಸುದ್ದಿ ಹರಡಿದೆ.

ಇತ್ತೀಚೆಗಷ್ಟೇ ಹಾರ್ದಿಕ್ ಪಾಂಡ್ಯ ಅವರನ್ನು ಗುಜರಾತ್ ಟೈಟಾನ್ಸ್​ನಿಂದ ಟ್ರೇಡ್ ಮೂಲಕ ಸ್ವಾಧೀನಪಡಿಸಿಕೊಂಡ ಮುಂಬೈ ತಂಡ ತಕ್ಷಣವೇ ಅವರಿಗೆ ನಾಯಕತ್ವದ ಜವಾಬ್ದಾರಿಯನ್ನು ನೀಡಿತ್ತು.

ಹಾರ್ದಿಕ್ ಪಾಂಡ್ಯ ಪುಣೆಯಲ್ಲಿ ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಪಂದ್ಯದ ವೇಳೆ ತಮ್ಮ ಪಾದಕ್ಕೆ ಗಾಯ ಮಾಡಿಕೊಂಡಿದ್ದರು. ಬಳಿಕ ತಂಡದಿಂದ ಹೊರಗುಳಿದಿದ್ದರು.

ಹಾರ್ದಿಕ್ ಪಾಂಡ್ಯ ಐಪಿಎಲ್-2022ರ ಟೂರ್ನಿಗೂ ಮೊದಲು ಮುಂಬೈ ತಂಡದಲ್ಲಿದ್ದರು. ಏಳು ಸೀಸನ್‌ಗಳನ್ನು ಆಡಿದ್ದರು. ಗುಜರಾತ್ ಟೈಟಾನ್ಸ್‌ ತಂಡದ ನಾಯಕನಾದ ಬಳಿಕ ಸತತ ಎರಡು ಬಾರಿ ಪಾಂಡ್ಯ ತಂಡವನ್ನು ಫೈನಲ್‌ಗೆ ತೆಗೆದುಕೊಂಡಿದ್ದರು. ಒಮ್ಮೆ ಐಪಿಎಲ್​ ಟ್ರೋಫಿ ಗೆದ್ದುಕೊಟ್ಟಿದ್ದರು.

ಹಾರ್ದಿಕ್ ಪಾಂಡ್ಯ ಮುಂಬರುವ ಅಫ್ಘಾನಿಸ್ತಾನ ವಿರುದ್ಧದ ಟಿ-20 ಸರಣಿಯಲ್ಲಿ ಆಡುವುದಿಲ್ಲ. ಈ ಸರಣಿಯಿಂದ ಪಾಂಡ್ಯ ಹೊರಗುಳಿಯಲ್ಲಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments