ಬೆಂಗಳೂರು : ಮುಂಗಾರು ಮಳೆ ಸಿನಿಮಾ ಮೂಲಕ ಕನ್ನಡಿಗರ ಮನ ಗೆದ್ದಿರುವ ನಟಿ ಪೂಜಾ ಗಾಂಧಿ ಅವರು ಬುಧವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

ತಮ್ಮ ಗೆಳೆಯ ಹಾಗೂ ಉದ್ಯಮಿ ವಿಜಯ್ ಘೋರ್ಪಡೆಯನ್ನು ಅವರು ಕುವೆಂಪು ಅವರ ಆಶಯದ ಮಂತ್ರಮಾಂಗಲ್ಯ ಪದ್ಧತಿಯ ಮೂಲಕ ಬೆಂಗಳೂರಿನಲ್ಲಿ ವಿವಾಹವಾದರು.

ಪತಿ ವಿಜಯ್ ಲಾಜಿಸ್ಟಿಕ್ ಕಂಪನಿಯ ಮಾಲೀಕರಾಗಿದ್ದು, ಹಲವು ವರ್ಷಗಳಿಂದ ಪೂಜಾ ಗಾಂಧಿ ಜೊತೆ ಸ್ನೇಹವಿತ್ತು. ಇದೀಗ ತಮಗೆ ಕನ್ನಡ ಕಲಿಸಿದ ಗೆಳೆಯ ವಿಜಯ್ ಘೋರ್ಪಡೆ ಅವರನ್ನು ಸರಳ ಸಮಾರಂಭದಲ್ಲಿ ವರಿಸಿದರು.

ಗೋಧೂಳಿ ಮಹೂರ್ತದಲ್ಲಿ ಹಾರ ಬದಲಾಯಿಸಿಕೊಳ್ಳುವ ಮೂಲಕ ಮುಂದಿನ ಜೀವನವನ್ನು ಆರಂಭಿಸಿದ್ದಾರೆ. ಪೂಜಾ ಗಾಂಧಿ ವಿವಾಹಕ್ಕೆ ತೀರಾ ಆಪ್ತ ಸಿನಿಮಾ ತಾರೆಯರು ಮಾತ್ರವೇ ಆಗಮಿಸಿದ್ದರು. ಮುಂಗಾರು ಮಳೆ ಚಿತ್ರದ ನಿರ್ದೇಶಕ ಯೋಗರಾಜ್ ಬಟ್ ನೂತನ ದಂಪತಿಗೆ ಶುಭ ಹಾರೈಸಿದರು.
ಮುಂಗಾರು ಮಳೆ ಮೂಲಕ ಚಂದನವನಕ್ಕೆ ಎಂಟ್ರಿ
ನಟಿ ಪೂಜಾ ಗಾಂಧಿ ಮೂಲತಃ ಬೆಂಗಾಲಿಯವರಾಗಿದ್ದು, ಉತ್ತರಪ್ರದೇಶದ ಮೀರತ್ ನಲ್ಲಿ ಜನಿಸಿದ್ದರು. ಮುಂಗಾರು ಮಳೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಇವರು ಇಲ್ಲಿ ಸಕ್ಸಸ್ ಪಡೆದುಕೊಂಡು ನೆಲೆ ನಿಂತರು. ಬಳಿಕ ಹಲವು ವರ್ಷಗಳ ಕಾಲ ಬೇಡಿಕೆಯಲ್ಲಿದ್ದು ಹತ್ತಾರು ಸಿನಿಮಾಗಳಲ್ಲಿ ನಟಿಸಿದರು.



Pinco Azərbaycanda ən sevilən brenddir. Canlı mərclərdə iştirak et və nəticəni dərhal gör, https://pinkoaz.website.yandexcloud.net/. Pinco oyunları çox real hiss olunur.
Pinco oyun dünyasına xoş gəlmisən.