Sunday, September 14, 2025
HomeUncategorizedಹಸಿರು ಪಟಾಕಿಗೆ ಮಾತ್ರ ಅವಕಾಶ: ಪಟಾಕಿ ಸಿಡಿಸಲು ಇರುವ ಕಡ್ಡಾಯ ನಿಯಮಗಳೇನು? ಇಲ್ಲಿದೆ ಮಾಹಿತಿ

ಹಸಿರು ಪಟಾಕಿಗೆ ಮಾತ್ರ ಅವಕಾಶ: ಪಟಾಕಿ ಸಿಡಿಸಲು ಇರುವ ಕಡ್ಡಾಯ ನಿಯಮಗಳೇನು? ಇಲ್ಲಿದೆ ಮಾಹಿತಿ

ಮೈಸೂರು: ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶವನ್ನು ಮೈಸೂರು ಜಿಲ್ಲಾಡಳಿತ ನೀಡಿದೆ.

ದೀಪಾವಳಿ ಹಬ್ಬ ಹತ್ರ ಬರುತ್ತಿದೆ ನಾಡಿನೆಲ್ಲೆಡೆ ಬೆಳಕಿನ ಹಬ್ಬವನ್ನು ಆಚರಿಸಲು ಜನರು ಕಾತುರದಿಂದ ಕಾಯುತ್ತಿದ್ದಾರೆ. ಈ ಹಿನ್ನೆಲೆ ಹಬ್ಬದಲ್ಲಿ ಪಟಾಕಿ ಹಚ್ಚಿ ಸಂಭ್ರಮಿಸುತ್ತಾರೆ. ಇದರಿಂದ ನಮ್ಮ ಪರಿಸರಕ್ಕೆ ಯಾವುದೇ ರೀತಿಯ ಹಾನಿಯಾಗಬಾರದು ಎಂದು ಮೈಸೂರು ಜಿಲ್ಲಾಡಳಿತ ಜಿಲ್ಲಾಧಿಕಾರಿ ಡಾ ಕೆವಿ ರಾಜೇಂದ್ರ ವಿಶೇಷ ಆದೇಶವನ್ನ ಹೊರಡಿಸಿದ್ದಾರೆ..

ಪಟಾಕಿ ಮಾರಾಟ ಮತ್ತು ಬಳಕೆ ನಿಯತ್ರಿಸುವ ಕುರಿತು ಜಿಲ್ಲಾಡಳಿತ ಸುತ್ತೋಲೆ ಹೊರಡಿಸಿದ್ದು, ಪಟಾಕಿಗಳ ಸಿಡಿತದಿಂದ ಉಂಟಾಗುವ ಶಬ್ಧ ಹಾಗು ಸಾರ್ವಜನಿಕ ಆಸ್ತಿ ಹಾಗೂ ಆರೋಗ್ಯ ಸಂರಕ್ಷಣೆ ಹಿನ್ನೆಲೆಯಲ್ಲಿ ಹಲವು ನಿಯಮ ಜಾರಿ ಮಾಡಿದೆ.

ವಿಶೇಷ ನಿಯಮಗಳು ಹೀಗಿವೆ 

  • ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಅವಕಾಶ
  • ಹಸಿರು ಪಟಾಕಿಗಳ ಮೇಲೆ ಹಾಗೂ ಪಟಾಕಿ ಪ್ಯಾಕೆಟ್ ಗಳ ಮೇಲೆ ಹಸಿರು ಚಿಹ್ನೆ ಇರುತ್ತದೆ. ಉಳಿದ ಯಾವುದೇ ಪಟಾಕಿಗಳು ಹಸಿರು ಪಟಾಕಿ ಎನಿಸುವುದಿಲ್ಲ.
  • ಹಸಿರು ಪಟಾಕಿ ಹೊರತುಪಡಿಸಿ ಇತರೆ ಪಟಾಕಿ ಮಾರಾಟಕ್ಕೆ ಮುಂದಾದರೆ ಮುಟ್ಟುಗೊಲು ಹಾಕಿಕೊಳ್ಳಲಾಗುತ್ತದೆ.
  • ರಾತ್ರಿ 8ರಿಂದ 10ಗಂಟೆ ತನಕ ಪಟಾಕಿ ಸಿಡಿಸುವುದಕ್ಕೆ ಅನುಮತಿ.
  • ಪಟಾಕಿ ಸಿಡಿಯುವ ಜಾಗದಿಂದ 4 ಮೀಟರ್ ದೂರದಲ್ಲಿ 125 ಅಥವಾ 145 ಡೆಸಿಬಲ್ ಗಿಂತ ಅಧಿಕ ಶಬ್ದ ಉಂಟು ಮಾಡುವ ಪಟಾಕಿಗಳ ತಯಾರಿಕೆ ಮತ್ತು ಮಾರಾಟ ನಿಷೇಧ.
  • ಆಸ್ಪತ್ರೆ,ಶಾಲೆ,ಪ್ರಾರ್ಥನಾ ಸೇರಿದಂತೆ ನಿಶ್ಯಬ್ದ ವಲಯಗಳಲ್ಲಿ ಪಟಾಕಿ ಅಥವಾ ಸಿಡಿಮದ್ದು ನಿಷೇದ.
  • ‘ಪಟಾಕಿ ಮಾರಾಟಗಾರರು,ಸಾರ್ವಜನಿಕರು ಜಿಲ್ಲಾಡಳಿತ ಆದೇಶ ಉಲ್ಲಂಘನೆ ಮಾಡಿದ್ದಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments