Saturday, September 13, 2025
HomeUncategorizedಇಶಾನಿಯ ಉಸ್ತುವಾರಿಯ ಮೇಲೆ ಮೈಖಲ್​ಗೆ ಅಸಮಾಧಾನ

ಇಶಾನಿಯ ಉಸ್ತುವಾರಿಯ ಮೇಲೆ ಮೈಖಲ್​ಗೆ ಅಸಮಾಧಾನ

ಬೆಂಗಳೂರು: ಬಿಗ್​ ಬಾಸ್ ಮನೆಯಲ್ಲಿ ಮೈಖಲ್ ಎಲ್ಲಾ ಟಾಸ್ಕ್​​ಗಳನ್ನು ಒಹಳ ಪ್ರಮಾಣಿಕನ್ನಾಗಿ ಆಡುತ್ತಿದ್ದರು. ಇವರು ದೊಡ್ಮನೆಯಲ್ಲಿ ಜಂಟಲ್​ಮ್ಯಾನ್ ಎಂದೇ ಬಿಂಬಿತರಾಗಿದ್ದರು. ಆದರೆ ಗುರುವಾರದ ಸಂಚಿಕೆಯಲ್ಲಿ  ಅವರು ಆಡಿದ ರೀತಿ ಅವರನ್ನು ವಂಚಕನನ್ನಾಗಿ ಮಾಡಿದೆ.

ವಜ್ರಕಾಯ ಹಾಗೂ ಗಂಧದ ಗುಡಿ ತಂಡಕ್ಕೆ ಇಂದು ಸೊಂಟಕ್ಕೆ ಟಬ್​ ಕಟ್ಟಿಕೊಂಡು ಪೋಲ್​ಗೆ ಕಟ್ಟಿದ್ದ ಬಲೂನ್ ಅನ್ನು ಕೈ ಬಳಸದೆ ಒಡೆದು ಅದರಲ್ಲಿನ ನೀರನ್ನು ಸೊಂಟಕ್ಕೆ ಕಟ್ಟಿದ್ದ ಟಬ್​ನಲ್ಲಿ ಸಂಗ್ರಹಿಸಿ ಅದನ್ನು ತಂಡಕ್ಕೆ ಮೀಸಲಾಗಿರಿಸಿದ್ದ ದೊಡ್ಡ ಬೌಲ್​ನಲ್ಲಿ ಹಾಕುವ ಟಾಸ್ಕ್​ ಅನ್ನು ಆಡಿಸಿದರು. ಈ ಟಾಸ್ಕ್​ಗೆ ಉಸ್ತುವಾರಿಯನ್ನು ಗಂಧದ ಗುಡಿ ತಂಡದಿಂದ ಮೈಖಲ್ ಹಾಗೂ ವಜ್ರಕಾಯ ತಂಡದಿಂದ ಇಶಾನಿಯನ್ನು ವಹಿಸಿದ್ದರು.

ಆಟ ಆಡುತ್ತಿದಂತೆ ಕಷ್ಟಕರವಾಗುತ್ತಿತ್ತು. ಸಣ್ಣ-ಪುಟ್ಟ ನಿಯಮಗಳನ್ನು ಎರಡೂ ತಂಡಗಳ ಸದಸ್ಯರು ಅಲ್ಲಲ್ಲಿ ಉಲ್ಲಂಘನೆ ಮಾಡುತ್ತಲೇ ಇದ್ದರು. ಮೊದಲಿನಿಂದಲೂ ಪ್ರತಾಪ್ ನಾಯಕತ್ವದ ಗಂಧದ ಗುಡಿ ತಂಡ ಮುನ್ನಡೆಯಲ್ಲಿತ್ತು, ಆಟದ ನಡುವೆ ಬ್ರೇಕ್ ಸಿಕ್ಕಾಗ, ಮೈಖಲ್, ಎದುರಾಳಿ ತಂಡದೊಂದಿಗೆ ಕೂತು ಅವರಿಗೆ ಗೇಮ್ ಪ್ಲ್ಯಾನ್ ಹೇಳಿಕೊಡುತ್ತಿದ್ದರು.

ಇಶಾನಿ ತನ್ನ ತಂಡವನ್ನು ಗೆಲ್ಲಿಸಿಕೊಳ್ಳಲು ಪ್ರಯತ್ನ ಮಾಡಿದರಾದರೂ ಅದಕ್ಕೆ ಸೂಕ್ತ ಅವಕಾಶ ಸಿಗದೆ ಒಲ್ಲದ ಮನಸ್ಸಿನಿಂದ ಸರಿಯಾದ ನಿರ್ಣಯಗಳನ್ನೇ ತೆಗೆದುಕೊಂಡರು.ಆದರೆ ಅಂತಿಮ ರೌಂಡ್​ನಲ್ಲಿ ಗಂಧದ ಗುಡಿ ತಂಡದ ತನಿಷಾ ನೇರವಾಗಿ ನಿಯಮ ಉಲ್ಲಂಘಿಸಿ, ಕೈನಿಂದ ಬಲೂನು ಒಡೆದರು. ಅದರಿಂದ ಸಂಗ್ರಹಿಸಿದ ನೀರನ್ನು ತಮ್ಮ ತಂಡದ ಟಬ್​ಗೆ ಹಾಕಿದರು. ಅಲ್ಲಿಗೆ ಗಂಧದ ಗುಡಿ ತಂಡ ಹೆಚ್ಚು ನೀರು ಸಂಗ್ರಹಿಸಿ ಗೆದ್ದಿತ್ತು. ಆದರೆ ತನಿಷಾ ಕೈಯಿಂದ ಬಲೂನ್ ಒಡೆದಿದ್ದನ್ನು ಒಪ್ಪಲಿಲ್ಲ, ಆದರೆ ಎರಡೂ ತಂಡಗಳು ಎಷ್ಟು ಬಾರಿ ನಿಯಮ ಉಲ್ಲಂಘನೆ ಮಾಡಿವೆ ಎಂದು ಲೆಕ್ಕ ಹಾಕಿ ಮೈಖಲ್, ಗಂಧದ ಗುಡಿ ತಂಡ ಗೆದ್ದಿದೆ ಎಂದು ಘೋಷಿಸಿದರು.

ಆದರೆ ಇದು ಇಶಾನಿಗೆ ಒಪ್ಪಿಗೆ ಆಗಲಿಲ್ಲ, ಬಳಿಕ ನೀರು ತುಂಬಿದ್ದ ಬಲೂನ್ ಅನ್ನು ತಾವೇ ಹೋಗಿ ತಮ್ಮದೇ ತಂಡದ ಟಬ್​ಗೆ ಹಾಕಿ, ಎರಡೂ ತಂಡಗಳ ಟಬ್​ನಲ್ಲಿ ನೀರು ಸಮವಾಗಿವೆ ಎಂದು ಹೇಳಿ, ಮೈಖಲ್ ಅನ್ನೂ ವಾದದ ಮೂಲಕ ಒಪ್ಪಿಸಿ, ಟಾಸ್ಕ್ ಡ್ರಾ ಆಗಿದೆ ಎಂದು ಘೋಷಿಸುವಂತೆ ಒತ್ತಾಯಿಸಿದರು. ಅಂತಿಮವಾಗಿ ಇಶಾನಿ ಒತ್ತಡಕ್ಕೆ ಸಿಲುಕಿ ಮೈಖಲ್ ಸಹ ಟಾಸ್ಕ್ ಡ್ರಾ ಆಗಿದೆ ಎಂದರು.

ಉಸ್ತುವಾರಿಗಳ ಈ ಇಬ್ಬಗೆ ನೀತಿಯ ಬಗ್ಗೆ ಬಿಗ್​ಬಾಸ್ ಅಸಮಾಧಾನ ವ್ಯಕ್ತಪಡಿಸಿದರು.ಇದರಿಂದ ಗಂಧದ ಗುಡಿ ತಂಡವು ಮೈಖಲ್​ ಮೇಲೆ ಅಸಮಾಧಾನಗೊಂಡಿತು.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments