Saturday, September 13, 2025
HomeUncategorizedದೀಪಾವಳಿ ಜಾತ್ರಾ ಹಿನ್ನಲೆ : ಮಾದಪ್ಪನ ಬೆಟ್ಟಕ್ಕೆ ದ್ವಿಚಕ್ರ ವಾಹನಗಳ ನಿರ್ಬಂಧ

ದೀಪಾವಳಿ ಜಾತ್ರಾ ಹಿನ್ನಲೆ : ಮಾದಪ್ಪನ ಬೆಟ್ಟಕ್ಕೆ ದ್ವಿಚಕ್ರ ವಾಹನಗಳ ನಿರ್ಬಂಧ

ಚಾಮರಾಜನಗರ: ಪ್ರಸಿದ್ಧ ಯಾತ್ರಸ್ಥಳದಲ್ಲೊಂದು ಆದ ಚಾಮರಾಜನಗರದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಶುಕ್ರವಾರದಿಂದ ದೀಪಾವಳಿ ಜಾತ್ರೆ ಆರಂಭವಾಗುತ್ತಿದೆ.

ಚಾಮರಾಜನಗರ, ನಂಜನಗೂಡು, ಮಂಡ್ಯ ಸೇರಿದಂತೆ ಹತ್ತಾರು ಜಿಲ್ಲೆಗಳಿಂದ ಮಲೆ ಮಹದೇಶ್ವರ ಬೆಟ್ಟಕ್ಕೆ ನೂರಾರು ಕಿಲೋ ಮೀಟರ್‌ ಪಾದಯಾತ್ರೆ ಮೂಲಕ ಭಕ್ತರು ಬರುತ್ತಿದ್ದಾರೆ. ಈಗಾಗಲೇ ಬೆಟ್ಟದಲ್ಲಿ ಭಕ್ತ ಸಾಗರವೇ ಸೇರಿದೆ. ಶುಕ್ರವಾರದಿಂದ ದೀಪಾವಳಿ ಜಾತ್ರೆ ಆರಂಭವಾಗಲಿದ್ದು, 14ರ ಮಂಗಳವಾರದಂದು ಬೆಳಗ್ಗೆ 8:50ಕ್ಕೆ ರಥೋತ್ಸವ ನಡೆಯಲಿದೆ.

ಈ ಹಿನ್ನಲೆಯಲ್ಲಿ ಮಲೈಮಹದೇಶ್ವರ ಬೆಟ್ಟಕ್ಕೆ ದೀಪಾವಳಿ ಜಾತ್ರಾ ಹಿನ್ನೆಲೆ ದ್ವಿಚಕ್ರ ಹಾಗೂ ಆಟೋಗಳಿಗೆ ನಿರ್ಬಂಧ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಆದೇಶ ಹೊರಡಿಸಿದ್ದಾರೆ. ಮಲೆ ಮಹದೇಶ್ವರ ಬೆಟ್ಟಕ್ಕೆ ನವೆಂಬರ್ 11ರ ಸಂಜೆ 6 ಗಂಟೆಯಿಂದ ನವೆಂಬರ್ 14ರ ಸಂಜೆ 7 ಗಂಟೆಯವರೆಗೆ ನಿರ್ಬಂಧ ಏರಿದ್ದಾರೆ.

ಜಾತ್ರೆಗೆ ದ್ವಿಚಕ್ರ ವಾಹನಗಳು ಹಾಗೂ ಆಟೋ ರಿಕ್ಷಾ ವಾಹನಗಳಲ್ಲಿ ತೆರಳವುದನ್ನು ತಾತ್ಕಾಲಿಕವಾಗಿ ನಿರ್ಬಂಧಿಸಿರುವ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಮಲೆ ಮಹದೇಶ್ವರ ಬೆಟ್ಟದಲ್ಲಿ ನವೆಂಬರ್‌ 11 ರಿಂದ 14ರವರೆಗೆ ಜರುಗಲಿರುವ ದೀಪಾವಳಿ ಜಾತ್ರೆ.
ಜಿಲ್ಲೆ,ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಂದ ಬರುವ ಲಕ್ಷಾಂತರ ಭಕ್ತಾಧಿಗಳು. ವಾಹನ ದಟ್ಟಣೆ ಅರಣ್ಯ ಪ್ರದೇಶ ಹಾಗೂ ತುಂಬಾ ಕಡಿದಾದ ತಿರುವುಗಳ ಇವೆ. ಇಂದಿನಿಂದಲೇ ಸಹಸ್ರಾರು ಮಂದಿ ಪಾದಯಾತ್ರೆ ಮೂಲಕ ಬೆಟ್ಟಕ್ಕೆ ತೆರಳುತ್ತಿದ್ದಾರೆ.

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments