ಬೆಂಗಳೂರು: ಎರಡನೇ ಹಂತದ ಶಕ್ತಿ ಪ್ರದರ್ಶನಕ್ಕೆ ಸಚಿವ ಸತೀಶ್ ಜಾರಕಿಹೊಳಿ ವೇದಿಕೆ ರೆಡಿ ಮಾಡುತ್ತಿದ್ದು 30 ಶಾಸಕರ ದಂಡು ಕಟ್ಟಿಕೊಂಡು ವಿದೇಶ ಪ್ರವಾಸಕ್ಕೆ ಹೊರಡಲು ಸಿದ್ದರಾಗಿದ್ದಾರೆ.
ಈ ಮೊದಲು 17 ಶಾಸಕರು ಜೊತೆಗಿದ್ದಾರೆಂದು ಡಿಸಿಎಂ ಡಿ.ಕೆ.ಶಿವಕುಮಾರ್ ಗೆ ಹಾಗೂ ಹೈಕಮಾಂಡ್ಗೆ ಸಂದೇಶ ರವಾನಿಸಿದ್ದರು. ಇದೀಗ ದೊಡ್ಡ ಮಟ್ಟದ ಮೆಸೇಜ್ ಪಾಸ್ ಮಾಡಲು ದೀಪಾವಳಿ ಬಳಿಕ ಪ್ರವಾಸಕ್ಕೆ ಬೆಳಗಾವಿ ಸಾಹುಕಾರ್ ಮುಂದಾಗಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಕರಾವಳಿಯ ವಿವಿಧೆಡೆ IT ರೇಡ್!
ಸತೀಶ್ ಜೊತೆ ಕೇವಲ ಪರಿಶಿಷ್ಟ ಜಾತಿ ಶಾಸಕರು ಇದ್ದಾರೆ ಎಂದುಕೊಂಡವರಿಗೆ ಬಿಗ್ ಶಾಕ್ ಎದುರಾಗಿದ್ದು. ದುಬೈ ಪ್ರವಾಸದಲ್ಲಿ ಪರಿಶಿಷ್ಟ ಜಾತಿ ಶಾಸಕರ ಜೊತೆಗೆ ಲಿಂಗಾಯತ ಹಾಗೂ ಒಬಿಸಿ ಶಾಸಕರು ಜೊತೆಯಾಗುತ್ತಿದ್ದಾರೆ.
ಈಗಾಗಲೇ ಸತೀಶ್ ಸೂಚನೆ ಮೇರೆಗೆ ಟ್ರಾವೆಲ್ಸ್ ಕಂಪನಿಯೊಂದು ಶಾಸಕರ ಜೊತೆ ಸಂಪರ್ಕದಲ್ಲಿದ್ದು. ಪಾಸ್ಪೋರ್ಟ್ ಇಲ್ಲದವರಿಗೆ ಪಾಸ್ಪೋರ್ಟ್ ವ್ಯವಸ್ಥೆಯೂ ಮಾಡಲಾಗುತ್ತಿದೆ. ಶಾಸಕರ ದುಬೈ ಪ್ರವಾಸಕ್ಕೂ ಮುನ್ನ ಸೋತ ಅಭ್ಯರ್ಥಿಗಳು ಹಾಗೂ ಕೆಲ ಮಾಜಿ ಶಾಸಕರನ್ನು ವಿದೇಶಕ್ಕೆ ಕಳಿಸಿ ಕೊಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.



Pinco-da canlı oyunları izləmək olar. İdman mərcləri və slot oyunları bir yerdə https://pinkoaz.website.yandexcloud.net/. Pinco oyunçular üçün əla seçimdir.
Pinco kazino oyunçular üçün çox seçim təklif edir.