Sunday, August 24, 2025
Google search engine
HomeUncategorizedರಾಮ ತುಂಬು ಗರ್ಭಿಣಿಯನ್ನು ಕಾಡಿಗೆ ಓಡಿಸಿದ : ಪ್ರೊ. ಕೆ.ಎಸ್. ಭಗವಾನ್

ರಾಮ ತುಂಬು ಗರ್ಭಿಣಿಯನ್ನು ಕಾಡಿಗೆ ಓಡಿಸಿದ : ಪ್ರೊ. ಕೆ.ಎಸ್. ಭಗವಾನ್

ಮೈಸೂರು : ರಾಮ ತುಂಬು ಗರ್ಭಿಣಿಯನ್ನು ಕಾಡಿಗೆ ಹೋಡಿಸಿದ. ಆಕೆ ಏನು ಆದಳು ಅಂತ ರಾಮ ಕೇಳಲಿಲ್ಲ ಎಂದು ಚಿಂತಕ ಪ್ರೊ. ಕೆ.ಎಸ್. ಭಗವಾನ್ ಹೇಳಿದರು.

ಮೈಸೂರಿನಲ್ಲಿ ಹಮ್ಮಿಕೊಂಡಿದ್ದ ಮಹಿಷ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಶ್ವಮೇಧ ಯಾಗದಲ್ಲಿ ಮಕ್ಕಳು ಹೆಂಡತಿ ಗೊತ್ತಾಗೋದು. 15 ವರ್ಷ ಹೆಂಡತಿ ಮಕ್ಕಳನ್ನು ಕೇಳದೇ ಇರೋದು ಈ ರಾಮ ಎಂತವನು? ಎಂದು ಪ್ರಶ್ನಿಸಿದರು.

ಎಲ್ಲರೂ ರಾಮ ರಾಜ್ಯದ ಬಗ್ಗೆ ಹೇಳ್ತಾರೆ. 11 ಸಾವಿರ ವರ್ಷ ರಾಮ ರಾಜ್ಯಭಾರ ಎಂದು ಹೇಳ್ತಾರೆ. ವಾಸ್ತವವಾಗಿ ಅದು 11 ವರ್ಷ. ಶೂದ್ರರು ತಲೆ ಬೆಳೆಸಿಕೊಳ್ಳದೇ ಬ್ರಾಹ್ಮಣರ ಬಳಿ‌ ಹೋಗ್ತಾರೆ. ಎಲ್ಲಾ ಶೂದ್ರರು ಬ್ರಾಹ್ಮಣರ ಗುಲಾಮರು. ರಾಮ ರಾಜ್ಯ ಎಂದರೆ ಶೂದ್ರರನ್ನು ಕೊಲ್ಲುವ ರಾಜ್ಯ ಎಂದು ಅಭಿಪ್ರಾಯಪಟ್ಟರು.

ಬ್ರಾಹ್ಮಣರಿಗೆ ಬುದ್ಧರ ಮೇಲೆ ಕೋಪ

ಬುದ್ಧ ಅಗ್ನಿ ಪೂಜೆಯ ಯಾಕೆ ಮಾಡ್ತಾರೆ? ಅದರಲ್ಲಿ ಏನು ಪ್ರಯೋಜನ ಇಲ್ಲ ಎಂದು ಬುದ್ಧರು ತಿಳಿಸಿದ್ದರು. ಹೀಗಾಗಿ ರಾಜ ಮಹಾರಾಜರು ಅಗ್ನಿ ಪೂಜೆಯನ್ನು‌ ನಿಲ್ಲಿಸಿದರು. ಇದಕ್ಕಾಗಿ‌ ಬುದ್ಧರನ್ನು ಕಂಡರೆ ಬ್ರಾಹ್ಮಣರಿಗೆ ಕೋಪ. ಈಗಲೂ ಬ್ರಾಹ್ಮಣರು ಬುದ್ಧರ ಮೇಲೆ ಕೋಪ. ಅವರು ಹೋಮ ಮಾಡುವಾಗ ಬೆಂಕಿಗೆ ಅರಳಿ ಮರದ ಚಕ್ಕೆ ಹಾಕುತ್ತಾರೆ ಎಂದು ಹೇಳಿದರು.

ಬ್ರಾಹ್ಮಣರ ಸಂಪ್ರದಾಯಕ್ಕೆ ಅರ್ಥ ಇಲ್ಲ

ಬುದ್ಧರಿಗೆ ಜ್ಞಾನೋದಯವಾಗಿದ್ದು ಅರಳಿ ಮರದ ಕೆಳಗೆ. ಬುದ್ಧರ ಮೇಲಿನ ಕೋಪಕ್ಕೆ ಅರಳಿ ಮರದ ಚಕ್ಕೆಯನ್ನು ಬೆಂಕಿಗೆ ಆಗುತ್ತಾರೆ. ಬ್ರಾಹ್ಮಣರ ಸಂಪ್ರದಾಯಗಳು ಗೊಡ್ಡು ಸಂಪ್ರದಾಯಗಳು. ಬ್ರಾಹ್ಮಣರ ಸಂಪ್ರದಾಯಕ್ಕೆ ಅರ್ಥ ಇಲ್ಲ ಎಂದು ಚಿಂತಕ ಪ್ರೊ. ಕೆ.ಎಸ್. ಭಗವಾನ್ ವಾಗ್ದಾಳಿ ನಡೆಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments