ಬೆಂಗಳೂರು : ಸೆ.10 ಸ್ಯಾಂಡಲ್ವುಡ್ಗೆ ಸೈಕ್ ಡೇ. ಯಾಕಂದ್ರೆ, ಸ್ಯಾಂಡಲ್ವುಡ್ ಬ್ಲಾಕ್ ಕೋಬ್ರಾ ದುನಿಯಾ ವಿಜಯ್ ಗೌರಿ ಗಣೇಶ ಹಬ್ಬಕ್ಕೆ ಸ್ಪೆಷಲ್ ಟ್ರೀಟ್ ಕೊಡೋಕೆ ಸಜ್ಜಾಗಿದ್ದಾರೆ.
ಭೀಮ.. ಸೆಟ್ಟೇರಿದಾಗಿನಿಂದಲೂ ದೊಡ್ಡ ಮಟ್ಟದ ಹೈಪ್, ಕ್ರೇಜ್ ಹುಟ್ಟಿಸಿರುವ ಸಿನಿಮಾ. ಸ್ಯಾಂಡಲ್ವುಡ್ ಸಲಗ ವಿಜಯ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಮತ್ತೊಂದು ಮಾಸ್ ಸಿನಿಮಾ.
ಸಲಗದಂತಹ ಬ್ಲಾಕ್ ಬಸ್ಟರ್ ಕೊಟ್ಮೇಲೆ ದುನಿಯಾ ವಿಜಯ್ ಮತ್ತೆ ಆಕ್ಷನ್ ಕಟ್ ಹೇಳೋದ್ರೊಂದಿಗೆ ಲೀಡ್ ರೋಲ್ ಪ್ಲೇ ಮಾಡಿರೋ ಸಿನಿಮಾ. ಪ್ರಚಂಡ ಪ್ರತಿಭಾವಂತರ ದಂಡುಕಟ್ಟಿಕೊಂಡು ವಿಜಯ್ ಈ ಸಲ ಮತ್ತೊಂದು ಔಟ್ ಅಂಡ್ ಔಟ್ ಎಂಟ್ರಟೈನ್ಮೆಂಟ್ ಪ್ಯಾಕೇಜ್ ಮಾಡಿದ್ದಾರೆ. ಕೃಷ್ಣ ಸಾರ್ಥಕ್, ಜಗದೀಶ್ ಗೌಡ ಜಂಟಿಯಾಗಿ ನಿರ್ಮಿಸಿರೋ ಈ ಚಿತ್ರಕ್ಕೆ ಶಿವಸೇನಾ ಕ್ಯಾಮೆರಾ ವರ್ಕ್ ಇದೆ. ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ನ ಕೊನೆಯ ಹಂತದಲ್ಲಿರೋ ಚಿತ್ರತಂಡ, ಇದೀಗ ಒಂದೊಂದೇ ಹಾಡನ್ನ ರಿಲೀಸ್ ಮಾಡೋದಕ್ಕೆ ಸಜ್ಜಾಗಿದೆ.
ಅದರಂತೆ ‘ಬ್ಯಾಡ್ ಬಾಯ್ಸ್’ ಎಂಬ ಫಸ್ಟ್ ಸಾಂಗ್ ಅನ್ನು ಸೆ.18ರಂದು ಸೋಮವಾರ ಗೌರಿ ಗಣೇಶ ಹಬ್ಬದ ಪ್ರಯುಕ್ತ ರಿಲೀಸ್ ಮಾಡ್ತಿದ್ದಾರೆ. ಸಂಗೀತ ನಿರ್ದೇಶಕ ಚರಣ್ ರಾಜ್ ಜೊತೆಗೆ ವಿಜಯ್ ಸಲಗಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ರು. ಆದಾದ ಮೇಲೆ ಭೀಮ ಮೂಲಕ ಮತ್ತೆ ಸಂಚಲ ಸೃಷ್ಟಿಸೋದಕ್ಕೆ ಸಜ್ಜಾಗಿದ್ದಾರೆ. ಈಗಾಗ್ಲೇ ರಿಲೀಸ್ ಆಗಿರೋ ಟೀಸರ್ ಬಿಟ್ ನಲ್ಲೇ ವಿಜಯ್ ಚರಣ್ ಮ್ಯೂಸಿಕ್ ಝಲಕ್ ನ ಬಿಟ್ಟು ಕುತೂಹಲ ಹುಟ್ಟಿಸಿದ್ರು. ಈಗ ಗೌರಿ ಗಣೇಶನ ಹಬ್ಬಕ್ಕೆ ರಿಲೀಸ್ ಆಗ್ತಿರೋ ಈ ಹಾಡಿನ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇದೆ.



Pinco kazino sevilən oyun platformasıdır. Qazanmaq istəyirsənsə, indi başla pinco. Pinco slotları yüksək RTP ilə gəlir.
Pinco kazino bonusları daim artırılır.