Wednesday, August 27, 2025
Google search engine
HomeUncategorizedನಿಫಾ ವೈರಸ್ ಜ್ವರದಿಂದ ಇಬ್ಬರು ಬಲಿ ; ಆರೋಗ್ಯಧಿಕಾರಿ ಡಾ.ಸುದರ್ಶನ್

ನಿಫಾ ವೈರಸ್ ಜ್ವರದಿಂದ ಇಬ್ಬರು ಬಲಿ ; ಆರೋಗ್ಯಧಿಕಾರಿ ಡಾ.ಸುದರ್ಶನ್

ಮಂಗಳೂರು : ನಿಫಾ ವೈರಸ್ ಜ್ವರದ ಹಿನ್ನಲೆ ಇಬ್ಬರು ಸಾವನ್ನಪ್ಪಿರುವ ಘಟನೆ ಕುರಿತು ಗಡಿಭಾಗದ ಜಿಲ್ಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮವಹಿಸಲು ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಧಿಕಾರಿ ಡಾ.ಸುದರ್ಶನ್ ಹೇಳಿದ್ದಾರೆ.

ಕೇರಳದಲ್ಲಿ ನಿಫಾ ವೈರಸ್ ಜ್ವರಕ್ಕೆ ಇಬ್ಬರು ಸಾವನ್ನಪ್ಪಿರುವ ಹಿನ್ನೆಲೆ ಮಾಧ್ಯಮಗಳ ಜೊತೆ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಧಿಕಾರಿ ಡಾ.ಸುದರ್ಶನ್ ಮಾತನಾಡಿದ್ದು, ಕೇರಳದ ಗಡಿಭಾಗದ ಆಸ್ಪತ್ರೆಗಳಿಗೆ ಹಲರ್ಟ್​ ಇರಲು ಜಿಲ್ಲಾಡಳಿತ ಸೂಚನೆಯನ್ನು ನೀಡಿದ್ದಾರೆ.

ಇದನ್ನು ಓದಿ : ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಧಿಕಾರಿ ಡಾ.ಸುದರ್ಶನ್ ಹೇಳಿಕೆ

ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಐಸೋಲೇಶನ್ ವಾರ್ಡ್ ಕೂಡ ತೆರೆದಿದ್ದೇವೆ. ಈ ನಿಫಾ ವೈರಸ್ ಜ್ವರ ಬಾವಲಿಯಿಂದ ಜ್ವರ ಹರಡುತ್ತಿರುವ ಹಿನ್ನೆಲೆ ಯಾವುದೇ ಹಣ್ಣುಗಳನ್ನು ತಿನ್ನುವಾಗ ಜಾಗ್ರತೆಯಿಂದ ಇರಬೇಕು, ಹಾಗೂ ಯಾವುದೇ ಪ್ರಾಣಿಗಳು ತಿಂದು ಬಿಟ್ಟಿರುವ ಹಣ್ಣುಗಳನ್ನು ಜನರು ತಿನ್ನಬಾರದು ಎಂದು ತಿಳಿಸಿದ್ದಾರೆ.  ಹಾಗೆಯೇ ಜ್ವರದ ಲಕ್ಷಣ ಕಂಡಿಬಂದಲ್ಲಿ ವೈದ್ಯರಲ್ಲಿ ಹೋಗಿ ತಕ್ಷಣ ಚಿಕಿತ್ಸೆ ಪಡೆದುಕೊಳ್ಳಬೇಕು.

ಇನ್ನೂ ಈವರೆಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿಫಾ ವೈರಸ್ ಕಂಡುಬಂದಿಲ್ಲ, ಈ ಜ್ವರ ಇಬ್ಬರಿಂದ ಇನ್ನೊಬ್ಬರಿಗೆ ಸೋಂಕು ಸುಲಭವಾಗಿ ಹರಡುವುದರಿಂದ ಅಪಾಯ ಹೆಚ್ಚಾಗಿ ಇರುತ್ತದೆ. ಅಷ್ಟೇ ಅಲ್ಲ ನಿಮಗೆ ಕೊನೆಯ ಸಂದರ್ಭದಲ್ಲಿ ಸೋಂಕು ಪತ್ತೆಯಾದರೆ ಮರಣ ಸಾಧ್ಯತೆ ಹೆಚ್ಚಾಗಿರುತ್ತದೆ ಅದರಿಂದ ಎಲ್ಲರೂ ಹೆಚ್ಚರಿಕೆಯಿಂದ ಇರುವುದು ಉತ್ತಮ.

ಅಷ್ಟೇ ಅಲ್ಲ ಸೋಂಕು ಇರುವ ಪ್ರಾಣಿಗಳ ಮಲ, ಮೂತ್ರ ಹಾಗೂ ಅವುಗಳ ಎಂಜಲಿನಿಂದ ಕೂಡ ನಿಫಾ ವೈರಸ್ ಹರಡುತ್ತದೆ. ಹಾಗೆಂದು ಜನರು ಗಾಬರಿಗೊಳ್ಳುವ ಅಗತ್ಯವಿಲ್ಲ, ಎಲ್ಲಾರು ಮುನ್ನಚ್ಚೇರಿಕೆ ಕ್ರಮ ವಹಿಸಿಕೊಂಡು ಇದ್ದಾರೆ ಯಾವುದೇ ವೈರಸ್ ನಿಮ್ಮ ಹತ್ತಿರ ಬರುವುದಿಲ್ಲ ಎಂದು ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಆರೋಗ್ಯಧಿಕಾರಿ ಡಾ.ಸುದರ್ಶನ್ ಹೇಳಿಕೆ ಕೊಟ್ಟಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments