Saturday, August 23, 2025
Google search engine
HomeUncategorized2,000 ಸಿಗದವರಿಗೆ ಗುಡ್ ನ್ಯೂಸ್ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್

2,000 ಸಿಗದವರಿಗೆ ಗುಡ್ ನ್ಯೂಸ್ ಕೊಟ್ಟ ಲಕ್ಷ್ಮಿ ಹೆಬ್ಬಾಳ್ಕರ್

ಬೆಂಗಳೂರು : ಹೊಸದಾಗಿ ನೋಂದಣಿ ಆದವರಿಗೂ ಗೃಹಲಕ್ಷ್ಮಿ ಯೋಜನೆ ಲಾಭ ಸಿಗುತ್ತದೆ ಎಂದು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಗೃಹಲಕ್ಷ್ಮಿ ಯೋಜನೆಯಡಿ ನೋಂದಣಿ ಮಾಡಿಕೊಂಡಿರುವ ಎಲ್ಲರಿಗೂ ನಾವು 2,000 ರೂ. ಸಹಾಯಧನ ಪಾವತಿಸಿದ್ದೇವೆ. ಆದರೆ, ಬ್ಯಾಂಕ್ ಕಡೆಯಿಂದ ತಡವಾಗುತ್ತಿದ್ದು, ಮುಂದಿನ ನಾಲ್ಕೈದು ದಿನಗಳಲ್ಲಿ ಎಲ್ಲ ಖಾತೆಗಳಿಗೂ ಹಣ ಜಮಾ ಆಗಲಿದೆ ಎಂದರು.

ಗೃಹಲಕ್ಷ್ಮಿ ಯೋಜನೆ ಸ್ಥಗಿತ ವಿಚಾರ ನನಗೆ ಆಶ್ಚರ್ಯ ಆಯ್ತು. ನಮ್ಮ ಸೆಕ್ರೆಟರಿ, ಡೈರೆಕ್ಟರ್ ಕರೆದು ಮಾತನಾಡಿದೆ. ಅದು ಯಾಕೆ ಹಾಗಾಯ್ತು ಅಂತ ಗೊತ್ತಾಗಲಿಲ್ಲ. ಈಗ ಸ್ಲೋ ಆಗಿ‌ ನೋಂದಣಿ ಆಗುತ್ತಿದೆ. ಒಂದು ಕೋಟಿ ಹತ್ತು ಲಕ್ಷ ಡಿಬಿಟಿ ಆಗಿದೆ. ನಮ್ಮ ಇಲಾಖೆಯಿಂದ ಹಣ ಕಳುಹಿಸಿದ್ದೇವೆ. 1.28 ಕೋಟಿ ಯಜಮಾನಿಯರಿಗೆ ಹಣ ಹೋಗುತ್ತೆ. ನಮ್ಮ ಇಲಾಖೆಯಿಂದ ಅಚಾತುರ್ಯ ಆಗಿ ಟ್ವೀಟ್ ಆಗಿದೆ. ಅದನ್ನು ಸರಿ ಮಾಡಿದ್ದೇವೆ ಎಂದು ತಿಳಿಸಿದರು.

ಸರ್ಕಾರದ ಖಜಾನೆಯಲ್ಲಿ ಹಣ ಇದೆ

ಇದು ನಿರಂತರವಾಗಿ ನಡೆಯುವ ಯೋಜನೆ. ಸಂಬಂಧಿಸಿದ ಎಲ್ಲರಿಗೂ ನೋಟಿಸ್ ಜಾರಿ ಮಾಡಿದ್ದೇವೆ. ಬಹಳ ಸೀರಿಯಸ್ ಆಗಿ ನಾವು ತೆಗೆದುಕೊಂಡಿದ್ದೇವೆ. ಇದು ಸಣ್ಣ ವಿಚಾರ ಅಲ್ಲ. ಯಾರು ಸೋಶಿಯಲ್ ಮಿಡೀಯಾ ಹ್ಯಾಂಡಲ್ ಮಾಡ್ತಾ ಇದ್ದಾರೆ, ಅವರ ಮೇಲೆ ಕ್ರಮ ಆಗುತ್ತೆ. ನಿನ್ನೆ ರಾತ್ರಿ ತನಕ 1.8 ಕೋಟಿ ಅಕೌಂಟ್ ಗೆ ಇಲ್ಲಿಯವರೆಗೆ ಹಣ ಡಿಬಿಟಿ ಪ್ರೊಸೆಸ್ ಆಗಿದೆ. ಅದರಲ್ಲಿ 63 ಲಕ್ಷ ಅಕೌಂಟ್ ಗೆ ಹಣ ತಲುಪಿ ಆಗಿದೆ. ಬ್ಯಾಂಕ್ ನಿಂದ ಸ್ಲೋ ಆಗಿದೆ. ಸರ್ಕಾರದಿಂದ ಯಾವುದೇ ತೊಂದರೆ ಆಗಿಲ್ಲ. ಸರ್ಕಾರದ ಖಜಾನೆಯಲ್ಲಿ ಹಣ ಇದೆ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments