Saturday, August 23, 2025
Google search engine
HomeUncategorizedಲಿವ್‌ಇನ್‌ನಿಂದ ವೈವಾಹಿಕ ವ್ಯವಸ್ಥೆ ನಾಶ : ಹೈಕೋರ್ಟ್​​​ ಕೆಂಡಾಮಂಡಲ

ಲಿವ್‌ಇನ್‌ನಿಂದ ವೈವಾಹಿಕ ವ್ಯವಸ್ಥೆ ನಾಶ : ಹೈಕೋರ್ಟ್​​​ ಕೆಂಡಾಮಂಡಲ

ಅಲಹಾಬಾದ್: ಭಾರತದಲ್ಲಿ ಹೆಚ್ಚುತ್ತಿ ರುವ ಲಿವ್ ಇನ್ ಸಂಬಂಧಗಳಿಂದ ಮದುವೆ ಎಂಬ ವ್ಯವಸ್ಥೆನಾಶವಾಗುತ್ತಿದೆ. ಪ್ರತಿ ಋತುವಿಗೊಂದು ಸಂಗಾತಿಯನ್ನು ಬದಲಿಸುವ ಲಿವ್ ಇನ್ ರಿಲೇಶನ್‌ ಶಿಪ್ ಅನ್ನು ಸುಸ್ಥಿರ ಹಾಗೂ ಆರೋಗ್ಯಕರ ಸಮಾಜದ ಲಕ್ಷಣವೆಂದು ಪರಿಗಣಿಸಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್‌ ತೀಕ್ಷ್ಮವಾಗಿ ಹೇಳಿದೆ.

ಇದನ್ನೂ ಓದಿ: ರಜನಿಕಾಂತ್​ಗೆ ಹೊಸ BMW ಕಾರ್ ಗಿಫ್ಟ್ ಕೊಟ್ಟ ಜೈಲರ್ ಪ್ರೊಡ್ಯೂಸರ್

ಮದುವೆಯೆಂಬ ವ್ಯವಸ್ಥೆಯು ನೀಡುವ ಭದ್ರತೆ, ಸಾಮಾಜಿಕ ಸ್ವೀಕಾರಾರ್ಹತೆ ಹಾಗೂ ಸ್ಥಿರತೆಯನ್ನು ಲಿವ್ ಇನ್ ಸಂಬಂಧಗಳು ಒದಗಿಸಲು ಸಾಧ್ಯವಿಲ್ಲ. ಭಾರತದಲ್ಲಿ ಮಧ್ಯಮ ವರ್ಗಕ್ಕಿರುವ ನೈತಿಕ ದೃಷ್ಟಿಕೋನವನ್ನು ನಾವು ಕಡೆಗಣಿ ಸಬಾರದು. ದೇಶದಲ್ಲಿ ಮದುವೆಯೆಂಬ ವ್ಯವಸ್ಥೆ ಸಂಪೂರ್ಣ ನಾಶವಾದ ಮೇಲೆ ಬೇಕಾದರೆ ನಾವು ಲಿವ್ ಇನ್ ಸಂಬಂಧಗಳನ್ನು ಸಹಜ ಎಂದು ಪರಿಗಣಿಸಬ ಹುದು.

ಸೋಕಾಲ್ಡ್ ಅಭಿವೃದ್ಧಿಹೊಂದಿದ ದೇಶಗಳಲ್ಲಿ ಈಗಾಗಲೇ ಮದುವೆಯೆಂಬ ವ್ಯವಸ್ಥೆಯನ್ನು ರಕ್ಷಿಸಿಕೊಳ್ಳಲು ಆಗದೆ ದೊಡ್ಡ ಸಮಸ್ಯೆ ಸೃಷ್ಟಿಯಾಗಿದೆ. ಅಂತಹುದೇ ಟ್ರೆಂಡ್ ಈಗ ಭಾರತದಲ್ಲೂ ಶುರುವಾಗಿದ್ದು, ಭವಿಷ್ಯದಲ್ಲಿ ಇದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಲಿದೆ’ ಎಂದು ಕೋರ್ಟ್ ಲಿವ್ ಇನ್ ವಿವಾದ ವೊಂದರ ವಿಚಾರಣೆ ವೇಳೆ ಹೇಳಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments