Thursday, September 11, 2025
HomeUncategorizedಚಂದ್ರನ ಅಂಗಳ ಸ್ಪರ್ಶ ಸ್ಥಳಕ್ಕೆ ಶಿವಶಕ್ತಿ ನಾಮಕರಣ : ವಿಜ್ಞಾನ, ಆಧ್ಯಾತ್ಮದ ಸಮ್ಮಿಲನ : ಬೊಮ್ಮಾಯಿ

ಚಂದ್ರನ ಅಂಗಳ ಸ್ಪರ್ಶ ಸ್ಥಳಕ್ಕೆ ಶಿವಶಕ್ತಿ ನಾಮಕರಣ : ವಿಜ್ಞಾನ, ಆಧ್ಯಾತ್ಮದ ಸಮ್ಮಿಲನ : ಬೊಮ್ಮಾಯಿ

ಬೆಂಗಳೂರು : ಚಂದ್ರನ ಅಂಗಳದಲ್ಲಿ ಅಂತರೀಕ್ಷ ಸ್ಪರ್ಶ ಮಾಡಿದ ಸ್ಥಳಕ್ಕೆ ಶಿವಶಕ್ತಿ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ನಾಮಕರಣ ಮಾಡುವ ಮೂಲಕ ವಿಜ್ಞಾ‌ನ ಮತ್ತು ಆಧ್ಯಾತ್ಮವನ್ನು ಒಗ್ಗೂಡಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.

ನಗರದಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಚಂದ್ರಯಾನ 3 ಯಶಸ್ವಿ ಉಡಾವಣೆಗೆ ಕಾರಣರಾದ ವಿಜ್ಞಾನಿಗಳಿಗೆ ಸನ್ಮಾನ ಮಾಡಿ  ಮಾತನಾಡಿದ ಅವರು, ಇಸ್ರೊ ವಿಜ್ಞಾನಿಗಳ ನಿರಂತರ ದನಿವಿಲ್ಲದ ಶ್ರಮದ ಫಲವಾಗಿ ಭಾರತ ವಿಶ್ವ ಮಟ್ಟದಲ್ಲಿ ಮುಂಚೂಣಿ ರಾಷ್ಟ್ರಗಳ ಸಾಲಿನಲ್ಲಿ ನಿಲ್ಲುವಂತಾಗಿದೆ ಎಂದರು.

ಇದನ್ನೂ ಓದಿ: ಸೌಜನ್ಯ ಅತ್ಯಾಚಾರ ಪ್ರಕರಣ ಮರುತನಿಖೆ ಸಾಧ್ಯವಿಲ್ಲ: ಗೃಹಸಚಿವ ಜಿ.ಪರಮೇಶ್ವರ

ಕರ್ನಾಟಕ ವಿಜ್ಞಾನ, ತಂತ್ರಜ್ಞಾನ ಕೃಷಿ ಸೇರಿದಂತೆ ಎಲ್ಲ ರಂಗಗಳಲ್ಲೂ ಮುಂಚೂಣಿಯಲ್ಲಿದ್ದು, ನಮ್ಮ ಸರ್ಕಾರ ಅಗತ್ಯ ನೆರವು ನೀಡಿತ್ತು ಎಂದು ಹೇಳಿದರು.

ನಮ್ಮ‌ ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯ ನಾಯಕತ್ವ ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಮನ್ವಯತೆಯಿಂದ ರಾಜ್ಯದಲ್ಲಿ ಸಂಶೋಧನೆ ಮತ್ತು ಅಭಿವೃದ್ದಿಗೆ ಹೆಚ್ಚಿನ ಆದ್ಯತೆ ದೊರೆಯುವಂತಾಯಿತು ಎಂದರು.

ಇಸ್ರೋ ವಿಜ್ಞಾನಿಗಳ ಒಗ್ಗಟ್ಟಿನ ಶ್ರಮದ ಫಲವಾಗಿ ಚಂದ್ರಯಾನ 3 ಯಶಸ್ವಿಯಾಗಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಘನತೆ ಹೆಚ್ಚಾಗುವಂತೆ ಮಾಡಿದ್ದಲ್ಲದೇ ವಿಜ್ಞಾನ ಮತ್ತು ಆಧ್ಯಾತ್ಮವನ್ನೂ ಬೆಸೆಯುವಂತೆ ಮಾಡಿದೆ ಎಂದರು ಹೇಳಿದರು.

ಈ ಸಂದರ್ಭದಲ್ಲಿ ದಾಸರಹಳ್ಳಿ ಶಾಸಕ ಮುನಿರಾಜು, ಶುಭ ನಾಗಸಂದ್ರ ಅಪಾರ್ಟ್ಮೆಂಟ್ ಅಧ್ಯಕ್ಷ  ಚಂದ್ರಶೇಖರ ಬೆಳಗೆರೆ ಹಾಗು ಮತ್ತಿತರರು  ಹಾಜರಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments