Tuesday, September 2, 2025
HomeUncategorizedಮೋದಿ ವೀಕ್ಷಣೆಗೆ ಜನಸಾಮಾನ್ಯರಂತೆ ರಸ್ತೆಪಕ್ಕದಲ್ಲಿ ನಿಂತ ರಾಜ್ಯ ಬಿಜೆಪಿ ನಾಯಕರು!

ಮೋದಿ ವೀಕ್ಷಣೆಗೆ ಜನಸಾಮಾನ್ಯರಂತೆ ರಸ್ತೆಪಕ್ಕದಲ್ಲಿ ನಿಂತ ರಾಜ್ಯ ಬಿಜೆಪಿ ನಾಯಕರು!

ಬೆಂಗಳೂರು : ಮೋದಿಯನ್ನು ಕಾಣಲು ರಸ್ತೆಬದಿಯಲ್ಲಿ ರಾಜ್ಯ ಬಿಜೆಪಿ ನಾಯಕರು ಜನಸಾಮಾನ್ಯನಂತೆ ನಿಂತು ಮೋದಿಗೆ ಕೈಬೀಸಿದ ಘಟನೆ ಇಂದು ಬೆಳಗ್ಗೆ ನಡೆದಿದೆ.

ಚಂದ್ರಯಾನ ಯಶಸ್ಸಿನ ಹಿನ್ನೆಲೆ ವಿಜ್ಞಾನಿಗಳನ್ನು ಅಭಿನಂದಿಸಲು ಇಂದು ಬೆಳಗ್ಗೆ ನಗರಕ್ಕೆ ಆಗಮಿಸಿದ ಪ್ರಧಾನಿ ಮೋದಿ ನಗರದ ಹೆಚ್​ಎಲ್​ ನಿಂದ ಇಸ್ರೋ ನಿಯಂತ್ರಣ ಕೇಂದ್ರಕ್ಕೆ ತೆರಳಿವ ಮಾರ್ಗ ಮಧ್ಯೆ ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷರು ಸೇರಿದಂತೆ ಮಾಜಿ ಸಚಿವರು ಹಾಗು ಶಾಸಕರು ಜನಸಾಮಾನ್ಯರಂತೆ ನಿಂತು ಮೋದಿಗೆ ಕೈ ಬೀಸಿದ್ದಾರೆ.

ಇದನ್ನು ಓದಿ: ಆಗಸ್ಟ್​​ 23 ಇನ್ಮುಂದೆ ‘ರಾಷ್ಟ್ರೀಯ ಬಾಹ್ಯಾಕಾಶ ದಿನ’: ಮೋದಿ ಘೋಷಣೆ!

ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದ ಹಿನ್ನೆಲೆ  ನೂರುದಿನ ಕಳೆದರು ಮೋದಿ ಮುನಿಸು ಕಡಿಮೆಯಾಗಿಲ್ಲ ರಸ್ತೆಬದಿಯಲ್ಲಿ ಜನಸಾಮಾನ್ಯರಂತೆ ನಿಂತಿದ್ದ ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ನರೇಂದ್ರ ಮೋದಿ ಕಡೆಗಣನೆ ಮಾಡಿದ್ದಾರೆ.

ಮೋದಿ ಬೇಟಿಗಾಗಿ ಬೆಳಿಗ್ಗೆ 5 ಗಂಟೆಯಿಂದ  ಕ್ಯೂನಲ್ಲಿ ನಿಂತಿದ್ದ ಸಂಸದ ತೇಜಸ್ವಿ ಸೂರ್ಯ, ಮಾಜಿ ಸಚಿವ ಬೈರತಿ ಬಸವರಾಜ್ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್​ ಕಟೀಲ್, ಮಾಜಿ  ಡಿಸಿಎಂ ಡಾ. ಅಶ್ವಥ್ ನಾರಾಯಣ್, ಮಾಜಿ ಸಚಿವ ಕೆ, ಗೊಪಾಲಯ್ಯ, ಸಾಸಕ ಎಸ್,ಆರ್, ವಿಶ್ವನಾಥ್ ಸೇರಿದಂತೆ ಹಲವು ಮುಖಂಡರು ಜನಸಾಮ್ಯರಂತೆ ರಸ್ತೆಯಲ್ಲೇ ನಿಂತು ಮೋದಿಯನ್ನ ವೀಕ್ಷಿಸಿದ್ದಾರೆ. ಇದರೊಂದಿಗೆ ಮೋದಿ ಹೆಸರಲ್ಲಿ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದವರಿಗೆ  ಭಾರಿ ನಿರಾಸೆಯಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments