Monday, September 1, 2025
HomeUncategorizedಆ.5ಕ್ಕೆ ಪ್ರಥಮ ‘ಡಿಜಿಟಲ್ ಕಲಿಕಾ ಬುಕ್’ : ಇದರ ವಿಶೇಷತೆಗಳೇನು?

ಆ.5ಕ್ಕೆ ಪ್ರಥಮ ‘ಡಿಜಿಟಲ್ ಕಲಿಕಾ ಬುಕ್’ : ಇದರ ವಿಶೇಷತೆಗಳೇನು?

ಬೆಂಗಳೂರು : ಇದೇ ಆಗಸ್ಟ್ 5ರಂದು ಭಾರತದ ಪ್ರಥಮ ಡಿಜಿಟಲ್ ಕಲಿಕಾ ಬುಕ್ (ಜಿಯೋ ಬುಕ್)​ ಮಾರುಕಟ್ಟೆಗೆ ಬರಲಿದೆ.

ಹೌದು, ಎಲ್ಲ ವಯೋಮಾನದವರ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ಈ ಬುಕ್​ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ಕ್ರಾಂತಿಕಾರಕ ಡಿಜಿಟಲ್ ಕಲಿಕಾ ಬುಕ್ (ಜಿಯೋ ಬುಕ್) ಅನ್ನು ರಿಲಯನ್ಸ್ ರೀಟೇಲ್ ಹೊರತಂದಿದೆ.

ಅತ್ಯಾಧುನಿಕ ಜಿಯೋ ಒಎಸ್ ಕಾರ್ಯಾಚರಣಾ ವ್ಯವಸ್ಥೆ, ಆಕರ್ಷಕ ವಿನ್ಯಾಸ, ಸದಾ ಸಂಪರ್ಕಿತವಾಗಿರುವ ವೈಶಿಷ್ಟ್ಯ, ಪ್ರತಿಯೊಬ್ಬರ ಕಲಿಕೆಯ ಅನುಭವವನ್ನೇ ಬದಲಾಯಿಸುವ ಭರವಸೆಯನ್ನು ಈ ಬುಕ್ ನೀಡಲಿದೆ. ಆನ್‌ಲೈನ್ ತರಗತಿಗಳಿಗೆ ಹಾಜರಾಗುವುದು, ಕೋಡ್ ಕಲಿಕೆ ಅಥವಾ ಯೋಗ ಸ್ಟುಡಿಯೋ ಆರಂಭಿಸುವುದು ಇಲ್ಲವೇ ಆನ್‌ಲೈನ್ ವ್ಯಾಪಾರ ಶುರು ಮಾಡುವುದು.ಈ ಎಲ್ಲ ಸಾಧ್ಯತೆಗಳಿಗೂ ಜಿಯೋಬುಕ್ ಸೂಕ್ತ ವೇದಿಕೆಯನ್ನು ಒದಗಿಸುತ್ತದೆ.

ಕಲಿಕೆಯ ಹಾದಿಯಲ್ಲಿರುವ ಎಲ್ಲರಿಗೂ ಪೂರಕವಾಗುವ ನವೀನ ಉತ್ಪನ್ನ ಪರಿಚಯಿಸಲು ನಾವು ಬದ್ಧ. ಜಿಯೋಬುಕ್ ನಮ್ಮ ಹೊಚ್ಚ ಹೊಸ ಉತ್ಪನ್ನ. ಅತ್ಯಾಧುನಿಕ ವೈಶಿಷ್ಟ್ಯ ಮತ್ತು ಸೀಮಾತೀತವಾದ ಸಂಪರ್ಕ ಸಂವಹನದ ಆಯ್ಕೆಗಳೊಂದಿಗೆ ಕಲಿಕಾರ್ಥಿಗಳ ಬೇಡಿಕೆಗೆ ಇದು ಸ್ಪಂದಿಸುತ್ತದೆ ಎಂದು ರಿಲಯನ್ಸ್ ರೀಟೇಲ್ ವಕ್ತಾರರು ತಿಳಿಸಿದ್ದಾರೆ.

ಜಿಯೋಬುಕ್ ವಿಶೇಷತೆಗಳು :

  • 4G-LTE ಹಾಗೂ ಡ್ಯುಯಲ್ ಬ್ಯಾಂಡ್ WiFi ಸಾಮರ್ಥ್ಯ
  • ಕಲ್ಪನೆಗೆ ಅನುಗುಣವಾಗಿ ವರ್ತಿಸುವ ಇಂಟರ್‌ಫೇಸ್
  • 75+ ಕೀಬೋರ್ಡ್ ಶಾರ್ಟ್‌ಕಟ್‌ಗಳು
  • ಟ್ರ್ಯಾಕ್‌ಪ್ಯಾಡ್ ಸನ್ನೆಗಳು
  • ಸ್ಕ್ರೀನ್ ವಿಸ್ತರಣೆ
  • ವೈರ್‌ಲೆಸ್ ಪ್ರಿಂಟಿಂಗ್
  • ಮಲ್ಟಿ-ಟಾಸ್ಕಿಂಗ್ ಸ್ಕ್ರೀನ್‌ಗಳು
  • ಏಕೀಕೃತ ಚಾಟ್‌ಬಾಟ್
  • ಜಿಯೋ ಟಿವಿ ಆ್ಯಪ್ ಮೂಲಕ ಶೈಕ್ಷಣಿಕ ವಿಷಯಗಳಿಗೆ ಪ್ರವೇಶಾವಕಾಶ
  • ಜಿಯೋ ಕ್ಲೌಡ್ ಗೇಮ್ಸ್ ಮೂಲಕ ಪ್ರಮುಖ ಗೇಮ್‌ಗಳು
  • JioBIAN ಎಂಬ ಸಿದ್ಧ ಕೋಡಿಂಗ್ ವಲಯ. C/C++, ಜಾವಾ, ಪೈಥಾನ್, ಮತ್ತು ಪರ್ಲ್ ಮುಂತಾದ ವಿಭಿನ್ನ ಭಾಷೆಯ ಕೋಡಿಂಗ್
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments