ಬೆಂಗಳೂರು : ಮೇ 10 ಮೇ 10ರಂದು ಕರ್ನಾಟಕ ಸಾರ್ವತ್ರಿಕ ಚುನಾವಣೆ (Karnataka Assembly Election) ಯಶಸ್ವಿಯಾಗಿ ನಡೆದಿದ್ದು, 2,600ಕ್ಕೂ ಅಭ್ಯರ್ಥಿಗಳ ಭವಿಷ್ಯ ಮತಯಂತ್ರಗಳಲ್ಲಿ ಭದ್ರವಾಗಿದೆ. ಇನ್ನು ಈ ಬಾರಿ ರಾಜ್ಯದಲ್ಲಿ ರಾಜ್ಯದ ಗದ್ದುಗೆ ಏರಲು ಎಲ್ಲಾ ರಾಜಕೀಯ ಪಕ್ಷಗಳು (Political Parties) ತಮ್ಮ ಶಕ್ತಿ ಮೀರಿ ಕೆಲಸ ಮಾಡಿದ್ದಾರೆ.
ಹೌದು, ಇನ್ನು ಇಂದು ರಾಜ್ಯ ರಾಜಕಾರಣ ಭವಿಷ್ಯ ನಿರ್ಧಾರವಾಗಲಿದೆ.ಈಗಾಗಲೇ ಎಕ್ಸಿಟ್ ಪೋಲ್ಗಳು ಕಾಂಗ್ರೆಸ್ (Congress) ಪಕ್ಷ ಹೆಚ್ಚು ಸ್ಥಾನ ಗಳಿಸುವ ಸಾಧ್ಯತೆ ಇದೆ ಎಂದು ತಿಳಿಸಿದ್ದು, ಇನ್ನೂ ಕೆಲ ಸಮೀಕ್ಷೆಗಳನ್ನು (Exit Poll) ನೋಡಿದರೆ ಅತ್ರಂತ ಸ್ಥಿತಿ ಬರುವ ಸಾಧ್ಯತೆಯನ್ನು ಇದೆ.
ಎಷ್ಟಾಗಿತ್ತು ಮತದಾನ..?
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಈ ಬಾರಿ ದಾಖಲೆಯ ಮತದಾನವಾಗಿದ್ದು, ಶೇಕಡಾ 73.19 ರಷ್ಟು ಮತದಾನದೊಂದಿಗೆ ಸಾರ್ವಕಾಲಿಕ ದಾಖಲೆಯನ್ನು ನಿರ್ಮಾಣ ಮಾಡಿದೆ. ವಿಶೇಷ ಎಂದರೆ ಶೇಕಡಾ 85.56 ಮತದಾನದೊಂದಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದು, ಬೆಂಗಳೂರು ದಕ್ಷಿಣದಲ್ಲಿ ಅತಿ ಕಡಿಮೆ ಅಂದರೆ ಶೇಕಡಾ 52.33 ರಷ್ಟು ಮತದಾನ ನಡೆದಿದೆ. ಇನ್ನು ರಾಜ್ಯದಲ್ಲಿರುವ 5.30 ಕೋಟಿ ಮತದಾರರಲ್ಲಿ 3.88 ಕೋಟಿ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಎಷ್ಟು ಅಭ್ಯರ್ಥಿಗಳ ಸ್ಪರ್ಧೆ..?
ಇನ್ನು ಪಕ್ಷವಾರು ನೋಡುವುದಾದರೆ ಬಿಜೆಪಿಯಿಂದ 224, ಕಾಂಗ್ರೆಸ್ನಿಂದ 223, ಜೆಡಿಎಸ್ನಿಂದ 209 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದಾರೆ. ಉಳಿದಂತೆ 918 ಮಂದಿ ಪಕ್ಷೇತರ ಅಭ್ಯರ್ಥಿಗಳಿದ್ದಾರೆ. ಇನ್ನು ಎಎಪಿಯಿಂದ 209, ಸಿಪಿಐಎಂನಿಂದ 4, ಬಿಎಸ್ಪಿಯಿಂದ 133 ಹಾಗೂ ಎನ್ಸಿಪಿಯಿಂದ ಇಬ್ಬರು ಅಭ್ಯರ್ಥಿಗಳು ಕಣದಲ್ಲಿದ್ದಾರೆ.
.



Pinco oyunçular üçün təhlükəsiz sistemdir. Qazanmaq istəyirsənsə, indi bu linkdən başla — https://pinkoaz.website.yandexcloud.net/. Pinco oyunçular üçün fərqli təcrübə yaradır.
Pinco oyunları yüksək keyfiyyətlidir.