Tuesday, August 26, 2025
Google search engine
HomeUncategorizedಭಾರತ್ ಜೋಡೋ ಪಾದಯಾತ್ರೆ ಕುರಿತು ಸಂಸದ ತೇಜಸ್ವಿ ಸೂರ್ಯ ವ್ಯಂಗ್ಯ

ಭಾರತ್ ಜೋಡೋ ಪಾದಯಾತ್ರೆ ಕುರಿತು ಸಂಸದ ತೇಜಸ್ವಿ ಸೂರ್ಯ ವ್ಯಂಗ್ಯ

ಕೋಲಾರ; ಇಡೀ ದೇಶಾದ್ಯಂತ ರಾಹುಲ್ ಯಾತ್ರೆ ಆರಂಭವಾದಾಗಿನಿಂದ ದೇಶ ವಿಭಜನೆ‌ ಮಾಡುವ ಶಕ್ತಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ರಾಹುಲ್ ಗಾಂಧಿ ಭಾರತ್ ಜೋಡೋ‌ ಮಾಡುವುದಕ್ಕೂ ಮುನ್ನ ಕರ್ನಾಟಕದಲ್ಲಿ ಡಿಕೆಶಿ ಸಿದ್ದರಾಮಯ್ಯರನ್ನ ಜೋಡಿ ಮಾಡಿ ಎಂದು ಸಂಸದ ತೇಜಸ್ವಿ ಸೂರ್ಯ ಅವರು ವ್ಯಂಗ್ಯವಾಡಿದರು.

ಜಿಲ್ಲೆಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್​ ಪಾರ್ಟಿಯಲ್ಲಿ ಹುಳುಕು ಇಟ್ಟುಕೊಂಡು ದೇಶ ಒಂದು‌ ಮಾಡ್ತೀವಿ ಅನ್ನೋದು ನಗೆಪಾಟಲು. ಮೂರು ವರ್ಷಗಳಿಂದ ನಿಮ್ಮ ಪಕ್ಷಕ್ಕೆ ಒಬ್ಬ ಸಮರ್ಥ ಅಧ್ಯಕ್ಷನನ್ನ ಆಯ್ಕೆ ಮಾಡಿಲ್ಲ. ರಾಜಸ್ಥಾನದ ಮುಖ್ಯಮಂತ್ರಿಯನ್ನ ಅಧ್ಯಕ್ಷರನ್ನಾಗಿ ಮಾಡಲು ಹೋದರೆ ರಾಜಸ್ಥಾನ ಕೈತಪ್ಪುತ್ತದೆ ಎನ್ನುವ ಭಯದಿಂದ ಮಲ್ಲಿಕಾರ್ಜುನ್​ ಖರ್ಗೆ ಅವರನ್ನ ಕಾಂಗ್ರೆಸ್​ ಕಣಕ್ಕಿಳಿಸಿದೆ.

ಇನ್ನು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಬಲವಂತದಿಂದ ಅಧ್ಯಕ್ಷರನ್ನಾಗಿ ಮಾಡುತಿದ್ದಾರೆ. ಈಗ ನಿಮ್ಮ ಪಕ್ಷಕ್ಕೆ ಸಮರ್ಥ ಅಧ್ಯಕ್ಷರನ್ನ ಆಯ್ಕೆ ಮಾಡಲಾಗದವರು ದೇಶ ಹೇಗೆ ನಡೆಸುತ್ತೀರಿ. ಈ ಭಾರತ್ ಜೋಡೋ ಯಾತ್ರೆ ನಿಲ್ಲಿಸಿ, ದೇಶದ ಜನರಿಗೆ ಸಹಾಯವಾಗುವ ಸೇವಾ ಮನೋಭಾವನೆಯ ಕಾರ್ಯವನ್ನ ಮಾಡಿ ಎಂದು ತೇಜಸ್ವಿ ಸೂರ್ಯ ಅವರು ಕಿವಿಮಾತು ಹೇಳಿದರು.

RELATED ARTICLES
- Advertisment -
Google search engine

Most Popular

Recent Comments