Wednesday, September 17, 2025
HomeUncategorizedಎನ್.ಸಿ.ಪಿ, ಶಿವಸೇನೆ ಮತ್ತು ಕಾಂಗ್ರೆಸ್ ಸೇರಿ ಸರ್ಕಾರ ರಚನೆ ಮಾಡಿವೆ : ಜಿ ಪರಮೇಶ್ವರ್

ಎನ್.ಸಿ.ಪಿ, ಶಿವಸೇನೆ ಮತ್ತು ಕಾಂಗ್ರೆಸ್ ಸೇರಿ ಸರ್ಕಾರ ರಚನೆ ಮಾಡಿವೆ : ಜಿ ಪರಮೇಶ್ವರ್

ಕಲಬುರಗಿ : ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ಬೆಳವಣಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಒಳ್ಳೆಯದಲ್ಲ ಎಂದು ಕಲಬುರಗಿಯಲ್ಲಿ ಕೆಪಿಸಿಸಿ ಮಾಜಿ ಅಧ್ಯಕ್ಷ ಜಿ ಪರಮೇಶ್ವರ್ ಹೇಳಿದ್ದಾರೆ.

ಯಾವುದೇ ಪಕ್ಷಕ್ಕೆ ಬಹುಮತ ಬರದೇ ಇದ್ದ ಸಂದರ್ಭದಲ್ಲಿ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸುವುದು ಸಾಮಾನ್ಯ. ಇದಕ್ಕೆ ದೇಶದ ಸಂವಿಧಾನದಲ್ಲಿಯೇ ಅವಕಾಶ ಇದೆ. ಅದಕ್ಕಾಗಿ ಎನ್.ಸಿ.ಪಿ, ಶಿವಸೇನೆ ಮತ್ತು ಕಾಂಗ್ರೆಸ್ ಸೇರಿ ಸರ್ಕಾರ ರಚನೆ ಮಾಡಿವೆ. ಆದರೆ ಆಂತರಿಕವಾಗಿ ಇದಕ್ಕೆ ಪ್ರಚೋದನೆ ಮಾಡಿ ಸರಕಾರ ಬೀಳಿಸುವುದು ಬಿಜೆಪಿಯ ವ್ಯವಸ್ಥಿತವಾದ ಸಂಚು ಹೂಡಿದ್ದಾರೆ ಎಂದರು.

ಇನ್ನು, ಕರ್ನಾಟಕದಲ್ಲೂ ಇದನ್ನೇ ಮಾಡಿದ್ದಾರೆ. ಬೇರೆ ರಾಜ್ಯದಲ್ಲಿಯೂ ಇದನ್ನೇ ಮಾಡಿದ್ದಾರೆ, ಈಗ ಮಹಾರಾಷ್ಟ್ರದಲ್ಲಿಯೂ ಇದನ್ನೇ ಮಾಡುತ್ತಿದ್ದಾರೆ. ಇದು ಬಹಳ ದಿನ ನಡೆಯುವುದಿಲ್ಲ. ಇದು ಒಳ್ಳೆಯ ಬೆಳವಣಿಗೆ ಖಂಡಿತ ಅಲ್ಲ. ಇದನ್ನು ತಡೆಯಲು ಚುನಾವಣಾ ಕಾಯ್ದೆಗಳಲ್ಲಿ ತಿದ್ದುಪಡಿ ತರುವ ಅಗತ್ಯವಿದೆ. ಇಡೀ ದೇಶದಲ್ಲಿಯೇ ಇದನ್ನ ಚರ್ಚೆಮಾಡಿ ದೊಡ್ಡ ಬದಲಾವಣೆ ತರಬೇಕಾಗಿದೆ. ಇಲ್ಲದಿದ್ದಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಅಗೋದಿಲ್ಲ. ಇದು ಬಿಜೆಪಿಯವರೇ ಮಾಡಿಸುತ್ತಿದ್ದಾರೆ ಎನ್ನುವಂತದ್ದು ಇಡೀ ಜಗತ್ತಿಗೆ ಗೊತ್ತಾಗಿದೆ ಎಂದು ಹೇಳಿದರು.

ಅದಲ್ಲದೇ, ಸರ್ಕಾರ ಕೆಡವಿ ತಮ್ಮ ಸರಕಾರ ಅಧಿಕಾರಕ್ಕೆ ತರಬೇಕು ಎಂದು ಬಿಜೆಪಿ ಹವಣಿಸುತ್ತಿದೆ. ರಾಜಕಾರಣದಲ್ಲಿರುವವರು ಯಾರೂ ಸನ್ಯಾಸಿಗಳಲ್ಲ. ನಾವು ಸನ್ಯಾಸಿಗಳಲ್ಲ ಎನ್ನುವ ಸಚಿವ ಮುರುಗೇಶ್ ನಿರಾಣಿ ಹೇಳಿಕೆಗೆ ಪರಮೇಶ್ವರ್​ ತಿರುಗೇಟು ನೀಡಿದ್ದು, ಸನ್ಯಾಸಿಗಳೇ ಆದರೆ ಮಠಮಾನ್ಯಗಳಲ್ಲಿ ಕಾವಿ ಬಟ್ಟೆ ತೊಟ್ಟು ಇರಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುವುದನ್ನು ತಡೆಯುವುದಕ್ಕಾಗಿ ಅವರು ನಡೆಸಿರುವ ಪ್ರಯತ್ನ ಮಹಾರಾಷ್ಟ್ರದ ಜನ, ದೇಶದ ಜನ ಮರೆತಿಲ್ಲ ಎಂದರು.

RELATED ARTICLES
- Advertisment -
Google search engine

Most Popular

Recent Comments