Monday, September 8, 2025
HomeUncategorized7.04 ಅಡಿ ಎತ್ತರದ ಕಂಚಿನ ಅಪ್ಪು ಪುತ್ಥಳಿ ಪ್ರತಿಷ್ಠಾಪನೆ

7.04 ಅಡಿ ಎತ್ತರದ ಕಂಚಿನ ಅಪ್ಪು ಪುತ್ಥಳಿ ಪ್ರತಿಷ್ಠಾಪನೆ

ವಿಜಯನಗರ : ಹೊಸಪೇಟೆಯಲ್ಲಿಂದು ನಟ ದಿವಂಗತ ಪುನೀತ್‌ ರಾಜಕುಮಾರ್‌ ಅವರ ಸವಿನೆನಪಿನಲ್ಲಿ ಕಂಚಿನ ಪುತ್ಥಳಿಯನ್ನು ನಗರದ ಹೃದಯಭಾಗದಲ್ಲಿ ಸ್ಥಾಪಿಸಿ ಅಭಿಮಾನ ಮೆರೆದಿದ್ದಾರೆ.

ಇಂದು ಸಂಜೆ ಪುತ್ಥಳಿ ಅನಾವರಣ ಸಮಾರಂಭ ಸಂಜೆ 5ಕ್ಕೆ ನಗರದ ಪುನೀತ್‌ ರಾಜಕುಮಾರ್‌ ವೃತ್ತದಲ್ಲಿ ಜರುಗಲಿದೆ. ಡಾ. ರಾಜಕುಮಾರ್‌ ಕುಟುಂಬ ಸದಸ್ಯರಾದ ನಟರಾದ ಶಿವರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌, ಪುನೀತ್‌ ಪತ್ನಿ ಅಶ್ವಿನಿ ಅವರು ಪುತ್ಥಳಿ ಅನಾವರಣಗೊಳಿಸಲಿದ್ದಾರೆ.

ಈ ವೇಳೆ ದೊಡ್ಮನೆ ಕುಟುಂಬದವರಾದ ವಿನಯ್‌ ರಾಜಕುಮಾರ್‌, ಯುವ ರಾಜಕುಮಾರ್‌, ಧಿರೇನ್‌ ರಾಮಕುಮಾರ್‌, ನಟರಾದ ಶ್ರೀಮುರಳಿ, ಅಜಯರಾವ್‌, ನಿರ್ದೇಶಕರಾದ ಸಂತೋಷ್‌ ಆನಂದ್‌ರಾಮ್‌, ಚೇತನ್‌ಕುಮಾರ್‌, ಪ್ರವಾಸೋದ್ಯಮ ಸಚಿವ ಆನಂದ್‌ ಸಿಂಗ್‌ ಪಾಲ್ಗೊಳ್ಳುವರು. ನಂತರ ಗುರುಕಿರಣ್‌ ಸಂಗೀತ್ ಕಾರ್ಯಕ್ರಮ ನಡೆಸಿಕೊಡುವರು.

ಕಾರ್ಯಕ್ರಮಕ್ಕಾಗಿ ಭವ್ಯ ವೇದಿಕೆಯನ್ನು ನಿರ್ಮಿಸಲಾಗಿದೆ. 7.4 ಅಡಿ ಎತ್ತರದ ಕಂಚಿನ ಪುತ್ಥಳಿಯನ್ನು ಆಂಧ್ರ ಪ್ರದೇಶದ ಗುಂಟೂರಿನ ತೆನಾಲಿಯಲ್ಲಿ ನಿರ್ಮಿಸಲಾಗಿದೆ. ಈಗಾಗಲೇ ಪುತ್ಥಳಿಯನ್ನು ಪುನೀತ್‌ ರಾಜಕುಮಾರ್‌ ವೃತ್ತದಲ್ಲಿ ಪ್ರತಿಷ್ಠಾಪಿಸಿ, ಅಭಿವೃದ್ಧಿ ಪಡಿಸಲಾಗಿದೆ. ಇಂದು ಅಧಿಕೃತವಾಗಿ ಅನಾವರಣ ಸಮಾರಂಭ ಜರುಗಲಿದೆ.

ಪುನೀತ್ ಅಭಿಮಾನಿ ಬಳಗದವರು ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಯುವ ಮುಖಂಡ ಸಿದ್ಧಾರ್ಥ ಸಿಂಗ್‌ ನೇತೃತ್ವದಲ್ಲಿ ಇತ್ತೀಚೆಗೆ ಬೆಂಗಳೂರಿಗೆ ತೆರಳಿ, ಡಾ. ರಾಜಕುಮಾರ್‌ ಕುಟುಂಬ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು.

RELATED ARTICLES
- Advertisment -
Google search engine

Most Popular

Recent Comments