Monday, September 15, 2025
HomeUncategorizedಸಿದ್ಧರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ: ವಿ. ಸೋಮಣ್ಣ

ಸಿದ್ಧರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ: ವಿ. ಸೋಮಣ್ಣ

ಗದಗ: ಮಾಜಿ ಸಿಎಂ ಸಿದ್ಧರಾಮಯ್ಯ ಹಗಲುಗನಸು ಕಾಣುತ್ತಿದ್ದಾರೆ ಎಂದು ವಸತಿ ಸಚಿವ ವಿ. ಸೋಮಣ್ಣ ಟಾಂಗ್ ನೀಡಿದ್ದಾರೆ. ಬಿಜೆಪಿಯ ಜನಸೇವಕ ಯಾತ್ರೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಅವರು, ತಮ್ಮನ್ನು ಭೇಟಿ ಮಾಡಿದ ಮಾಧ್ಯಮದವರೊಂದಿಗೆ ಮಾತಾನಾಡಿದರು.

ಸಿಎಂ ಬದಲಾವಣೆಯಾಗುತ್ತಾರೆ ಎನ್ನುವ ಸಿದ್ಧರಾಮಯ್ಯ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿದ ಸೋಮಣ್ಣ, ಎಲ್ಲರಿಗೂ ರಾತ್ರಿ ಕನಸು ಬೀಳುತ್ತೆ, ಆದರೆ ಸಿದ್ದರಾಮಯ್ಯಗೆ ಹಗಲು ಕನಸು ಬೀಳುತ್ತೆ. ಸಿದ್ದರಾಮಯ್ಯ ಹಗಲು ಕನಸು ಕಾಣುತ್ತಿದ್ದಾರೆ ಅಂತ ವಾಗ್ದಾಳಿ ನಡೆಸಿದರು. ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಇಲ್ಲ ಎಂದು ಸ್ಪಷ್ಟ ಪಡಿಸಿದರು.

ಇನ್ನೂ ಶಾಸಕ ಯತ್ನಾಳ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ ನಮ್ಮ ಪಕ್ಷದ ಹಿರಿಯ ಶಾಸಕರು ಮಾಜಿ ಕೇಂದ್ರ ಮಂತ್ರಿಯಾಗಿದ್ದವರು. ಹೈಕಮಾಂಡ್ ಈ ಕುರಿತು ಮಾತನಾಡುತ್ತಿದ್ದಾರೆ. ಎಲ್ಲದಕ್ಕೂ ಒಂದು ಕೊನೆ ಅಂತ ಇದ್ದೇ ಇರುತ್ತೆ. ಈ ಸಮಾಜದಿಂದ ಬಂದ ಸಿಎಂ ಗಳು ಎಲ್ಲ ವರ್ಗದ ಜನರ ಭಾವನೆಗಳಿಗೆ ಸ್ಪಂದಿಸುವ ಕೆಲಸ ಮಾಡಿದ್ದಾರೆ. ಯತ್ನಾಳ ಬುದ್ದಿವಂತ ಇದ್ದಾರೆ ನಾಳೆ ವಿಜಯಪುರಕ್ಕೆ ಹೋಗಿ ಮಾತಾಡುತ್ತೇನೆ ಎಂದರು. ಎಲ್ಲವನ್ನೂ ಹೈಕಮಾಂಡ ನೋಡ್ತಾಯಿದೆ. ಸಾವಿರ ಬಾರಿ ಸುಳ್ಳು ಹೇಳಿದ್ರೇ ಸುಳ್ಳೇ ಒಂದು ಬಾರಿ ಹೇಳಿದರೂ ಸುಳ್ಳೇ. ಲಿಂಗಾಯತ ಸಮಾಜದ ಸಿಎಂ ಬದಲಾವಣೆ ಸಾಧ್ಯವಿಲ್ಲ ಎಂದರು.

ಮಹಲಿಂಗೇಶ್ ಹಿರೇಮಠ. ಗದಗ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments