Wednesday, September 10, 2025
HomeUncategorizedಕೊರೊನ ನಡುವೆಯೇ ನಾಳೆಯಿಂದ ರಾಜ್ಯಾದ್ಯಂತ ಕೆ-ಸಿಇಟಿ ಪರೀಕ್ಷೆ , ಕೊರೊನ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು

ಕೊರೊನ ನಡುವೆಯೇ ನಾಳೆಯಿಂದ ರಾಜ್ಯಾದ್ಯಂತ ಕೆ-ಸಿಇಟಿ ಪರೀಕ್ಷೆ , ಕೊರೊನ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬಹುದು

ಬೆಂಗಳೂರು : ಕೊರೋನಾ ಆತಂಕದ ನಡುವೆಯೇ ಈಗಾಗಲೇ ದ್ವಿತೀಯ ಪಿಯು ಹಾಗೂ ಎಸ್ಸೆಸ್ಸೆಲ್ಸಿ ಪರೀಕ್ಷೆಗಳು ಯಶಸ್ವಿಯಾಗಿ ನಡೆದಿವೆ ..ಹೀಗಾಗಿ ನಾಳೆ ನಾಳಿದ್ದು ರಾಜ್ಯಾದ್ಯಂತ ಸಿಇಟಿ ನಡೆಸಲು ಭರದಿಂದ ಸಿದ್ಧತೆ ನಡಿಯುತ್ತಿದೆ ..

ಹೌದು ನಾಳೆ ಪರೀಕ್ಷೆ ಇರುವ ಹಿನ್ನೆಲೆ ಇಂದು ಉನ್ನತ ಶಿಕ್ಷಣ ಖಾತೆ ಸಚಿವ, ಡಿಸಿಎಂ ಡಾ. ಸಿ.ಎನ್.ಅಶ್ವತ್ಥನಾರಾಯಣ ಪರೀಕ್ಷಾ ಕೇಂದ್ರ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು .. ನಗರದ ಮಲ್ಲೇಶ್ವರಂ ನ ಅಮ್ಮಣ್ಣಿ ಕಾಲೇಜಿಗೆ ಭೇಟಿ ನೀಡಿದ ಅಶ್ವಥ್ ನಾರಾಯಣ್ ಸಿದ್ಧತೆ ಯಾವ ರೀತಿ ನಡೆದಿದೆ ಅಂತ ಪರಿಶೀಲಿಸಿದ್ರು ರಾಜ್ಯದಲ್ಲಿ ನಾಳೆಯಿಂದ 1,94,356 ವಿದ್ಯಾರ್ಥಿಗಳು ಪರೀಕ್ಷೆ ಬರಿಯಲಿದ್ದಾರೆ ..
120 ಸ್ಥಳಗಳ ಒಟ್ಟು 497 ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ .. ಇನ್ನೂ ಇದರಲ್ಲಿ 83 ಕೇಂದ್ರಗಳು ಬೆಂಗಳೂರಿನಲ್ಲಿದ್ದು 40,200 ವಿದ್ಯಾರ್ಥಿ ಗಳು ಪರೀಕ್ಷೆ ಬರೆಯುತ್ತಾರೆ .. ಒಟ್ಟು ವಿದ್ಯಾರ್ಥಿಗಳಲ್ಲಿ 30 ಮಂದಿ ವಿದೇಶಿಯರೂ ಇದರೋದು ವಿಶೇಷ ವಾಗಿದೆ ..

ಬೆಳಗ್ಗೆ 10.30ರಿಂದ 11.50 ಹಾಗೂ ಮಧ್ಯಾಹ್ನ 2.30 ರಿಂದ 3.30 ರ ವರೆಗೆ ಪರೀಕ್ಷೆ ನಡೆಯುತ್ತೆ .. ಸದ್ಯ ಕೊರೋನಾ ಪಾಸಿಟಿವ್ ಬಂದಿರುವ ವಿದ್ಯಾರ್ಥಿಗಳಿಗೂ ಸಿಇಟಿ ಬರೆಯಲು ಅವಕಾಶ ನೀಡಲಾಗಿದೆ. ನಗರದ ಜ್ಞಾನ ಭಾರತಿ ಹಾಗೂ ಜಿಕೆವಿಕೆ ಕೇಂದ್ರದಲ್ಲಿ ಈ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಾರೆ .. ನೆಗಡಿ, ಕೆಮ್ಮು, ಶೀತ ಇರುವ ವಿದ್ಯಾರ್ಥಿಗಳನ್ನೂ ಪ್ರತ್ಯೇಕ ಕೊಠಡಿಗಳ ವ್ಯವಸ್ಥೆ ಮಾಡಲಾಗಿದೆ ..

ಸ್ವಾತಿ ಪುಲಗಂಟಿ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments