Saturday, September 13, 2025
HomeUncategorizedಕೊರೊನಾ ಗೆದ್ದ ರಾಜ್ಯದ ಶತಾಯುಷಿ ಅಜ್ಜಿ

ಕೊರೊನಾ ಗೆದ್ದ ರಾಜ್ಯದ ಶತಾಯುಷಿ ಅಜ್ಜಿ

ಬಳ್ಳಾರಿ : ಕೊರೊನಾಗೆ ಜಗತ್ತು ತಲ್ಲಣಗೊಂಡಿದೆ. ಜನರ ಸಾವು ನೋವಿನ ಸುದ್ದಿ ಕೇಳಿ ಜನ್ರು ಭೀತಿಗೆ ಒಳಗಾಗಿದಾರೆ..ಇದರ ನಡುವೆ ರಾಜ್ಯದಲ್ಲಿ ಮೊದಲ ಬಾರಿಗೆ ಶತಾಯುಷಿ ಅಜ್ಜಿಯೊಬ್ಬರು ಕೊರೊನಾ ಗೆದ್ದು ಬಂದಿದಾರೆ..ಕೊರೊನಾ ಮುಕ್ತಳಾದ ಅಜ್ಜಿ ಈಗ ಎಲ್ರಿಗೂ ಡೋಂಟ್ ವರಿ ಅನ್ನೋ ಸಂದೇಶ ಕೊಟ್ಟಿದಾರೆ..

ದಿನದಿಂದ ದಿನಕ್ಕೆ ಬಳ್ಳಾರಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ತಾನೇ ಇದೆ. ಈಗಾಗಲೇ ಮೂರು ಸಾವಿರ ಗಡಿ ಮುಟ್ಟಿರುವ ಸೋಂಕಿತರ ಸಂಖ್ಯೆಯಲ್ಲಿ 67 ಕ್ಕು ಹೆಚ್ಚು ಜನ ಮೃತಪಟ್ಡಿದ್ದಾರೆ.. ಇದರ ನಡುವೆ ರಾಜ್ಯದಲ್ಲಿಯೇ ಶತಾಯುಷಿ ಅಜ್ಜಿಯೊಬ್ಬರು ಗುಣಮುಖರಾಗಿದ್ದು..ಕೊರೊನಾಗೆ ಸೆಡ್ಡು ಹೊಡೆದು ಗೆಲುವಿನ ನಗೆ ಬೀರಿದ್ದಾರೆ..

101 ವರ್ಷದ ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ನಿವಾಸಿ ಈ ಅಜ್ಜಿಯೇ ಕೊರೊನಾ ಮಣಿಸಿರೋದು..ಮೊದಲಿಗೆ ಮಗನಾದ ರಾಮಪ್ಪನಿಗೆ ಪಾಸಿಟಿವ್ ಅಗಿತ್ತು ಈ ಮೂಲಕ ಅಜ್ಜಿ ಸೇರಿದಂತೆ ಕುಟುಂಬದ ನಾಲ್ವರಿಗೂ ಪಾಸಿಟಿವ್ ಆಗಿತ್ತು.. ನಂತ್ರ ರಾಮಪ್ಪನನ್ನ ಕೊವಿಡ್ ಆಸ್ಪತ್ರೆಗೆ ಶಿಪ್ಟ್ ಮಾಡಿ ಅಜ್ಜಿಯನ್ನು ಹೋಂ ಐಸೋಲೇಷನ್ ನಲ್ಲಿ ಇಡಲಾಗಿತ್ತು..ಹತ್ತು ದಿನಗಳ ಚಿಕಿತ್ಸೆಯ ನಂತರ ಅಜ್ಜಿ ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ..

ಇನ್ನು ಅಜ್ಜಿ ಸಹಿತ ಕುಟುಂಬದ ನಾಲ್ವರು ಸಹ ಗುಣಮುಖರಾಗಿದ್ದಾರೆ..ಜುಲೈ ಒಂದರಂದು ರಾಮಪ್ಪನಿಗೆ ಪಾಸಿಟವ್ ಬಂದ ನಂತರ ಸಾಲಾಗಿ ಕುಟುಂಬದ ನಾಲ್ವರಿಗೂ ಪಾಸಿಟಿವ್ ಆಗಿದೆ..ಈಗ ವೈದ್ಯರ ಚಿಕಿತ್ಸೆಯ ನಂತರ ಎಲ್ಲರೂ ಕೊರೊನಾ ಮುಕ್ತರಾಗಿದ್ದಾರೆ…

ರಾಜ್ಯದಲ್ಲಿ ಎಲ್ಲರೂ  ಕೊವಿಡ್ ಆತಂಕದಲ್ಲಿ ಭೀತಿಯ ಛಾಯೆಯನ್ನೇ ಹೊದ್ದು ಮಲಗಿರುವಾಗ ನೂರು ವಯಸ್ಸಿನ ಅಜ್ಜಿ ಕೊರೊನಾ ಗೆದ್ದು ಬಂದಿರೋದು ಎಲ್ಲರಿಗು ಸ್ಪೂರ್ತಿ ತುಂಬುವಂತಿದೆ..ಜೊತೆಗೆ ಕೊರೊನಾ ಸೋಂಕಿತರು ಆತ್ಮಸ್ಥೈರ್ಯ ತಂದುಕೊಳ್ಳಲು ಈ ಕೊರೊನಾ ಗೆದ್ದ ಅಜ್ಜಿ ಕತೆಯೇ ಸಾಕು..

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments