ಬೆಂಗಳೂರು : ಬಿಬಿಎಂಪಿ ಅಧಿಕಾರ ಚುಕ್ಕಾಣಿ ಬಿಜೆಪಿಗೆ ಒಲಿದಿದೆ. ಬಿಜೆಪಿಯ ಗೌತಮ್ ಕುಮಾರ್ ಬಿಬಿಎಂಪಿ ನೂತನ ಮೇಯರ್ ಆಗಿ, ರಾಮ ಮೋಹನ್ ರಾಜು ಉಪಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಮೇಯರ್ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಕಾಂಗ್ರೆಸ್ನ ಆರ್.ಎಸ್ ಸತ್ಯನಾರಾಯಣ ಅವರನ್ನು ಸೋಲಿಸಿ ಗೌತಮ್ ಗೆಲುವು ಪಡೆದರು. ಸತ್ಯನಾರಯಣ್ ಅವರಿಗೆ 112 ಮತಗಳು, ಗೌತಮ್ರವರು 129 ಮತಗಳು ಬಂದಿವೆ.
ಇನ್ನು ಗೌತಮ್ ಅವರು ಜೋಗುಪಾಳ್ಯ ವಾರ್ಡ್ನ ಹಾಗೂ ರಾಮ ಮೋಹನ್ ರಾಜ್ ಬೊಮ್ಮನಹಳ್ಳಿ ವಾರ್ಡ್ನ ಸದಸ್ಯರಾಗಿದ್ದಾರೆ.
ಬಿಬಿಎಂಪಿ ಚುಕ್ಕಾಣಿ ಬಿಜೆಪಿ ತೆಕ್ಕೆಗೆ..!
RELATED ARTICLES