Monday, September 8, 2025
HomeUncategorizedಫ್ಯಾಷನ್, ಸಿನಿಮಾ ಎರಡರಲ್ಲೂ ಮಾಸ್ಟರ್​ ಓಂ ಬ್ಯುಸಿ..!

ಫ್ಯಾಷನ್, ಸಿನಿಮಾ ಎರಡರಲ್ಲೂ ಮಾಸ್ಟರ್​ ಓಂ ಬ್ಯುಸಿ..!

ಸೌತ್ ಇಂಡಿಯಾ ಸೂಪರ್ ಕಿಡ್ ಮಾಡೆಲ್ ಮಾಸ್ಟರ್ ಓಂ ಇಂಟರ್​​ನ್ಯಾಷನಲ್​​ ಮಾಡೆಲಿಂಗ್ ಕ್ಷೇತ್ರದಲ್ಲಿ ತನ್ನ ಛಾಪು ಮೂಡಿಸಿ ನಂಬರ್ ಒನ್ ಸ್ಥಾನ ಗಿಟ್ಟಿಸಿಕೊಂಡ ಮೊದಲ ಕನ್ನಡದ ಹುಡುಗ ಎಂಬ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ನಾರ್ತ್ ಇಂಡಿಯನ್ಸ್ ಹೆಚ್ಚಾಗಿ ಇರುವ ಫ್ಯಾಷನ್ ಕ್ಷೇತ್ರದಲ್ಲಿ ಅಪ್ಪಟ ಕನ್ನಡದ ಹುಡುಗ ನಂಬರ್ ವನ್ ಸ್ಥಾನದಲ್ಲಿರುವುದು ಸಂತಸದ ವಿಚಾರ. ಜೊತೆಯಲ್ಲೇ ಕನ್ನಡ-ತಮಿಳು ಸಿನಿಮಾಗಳಲ್ಲೂ ಬಿಝಿಯಾಗಿದ್ದಾನೆ. ಅಂತರಾಷ್ಟ್ರೀಯ ಮಟ್ಟದ ಮಾಡೆಲಿಂಗ್ ಕ್ಷೇತ್ರದಲ್ಲಿ ಅತಿ ಚಿಕ್ಕ ವಯಸ್ಸಿನಲ್ಲಿಯೇ ಛಾಪು ಮೂಡಿಸಿ, ಕಡಿಮೆ ಸಮಯದಲ್ಲಿ ಹೆಚ್ಚು ಜಾಹೀರಾತುಗಳಲ್ಲಿ ನಟಿಸಿ ಸೈ ಎನಿಸಿಕೊಂಡಂತಹ ಮೊದಲ ಕನ್ನಡದ ಹುಡುಗ.

ಓಂ ಸಿನಿಮಾ ಜರ್ನಿ : ಅಷ್ಟು ಮಾತ್ರವಲ್ಲ, ಮದುವೆಯ ಮಮತೆಯ ಕರೆಯೋಲೆ, ಫಸ್ಟ್ ಲವ್, ಲೀ, ವೇಷಧಾರಿ, ಪ್ರೇಮಂ ಸೇರಿದಂತೆ ಸುಮಾರು 8 ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿರುವ ಮಾಸ್ಟರ್ ಓಂ ಇದೀಗ ಕವಿರಾಜ್ ನಿರ್ದೇಶನದ ಕಾಳಿದಾಸ ಕನ್ನಡ ಮೇಷ್ಟ್ರು ಸಿನಿಮಾದಲ್ಲಿ ಜಗ್ಗೇಶ್ ಅವರ ಮಗನಾಗಿ ಅಭಿನಯಿಸಿದ್ದು, ಚಿತ್ರ ಸದ್ಯದಲ್ಲೇ ತೆರೆ ಕಾಣಲಿದೆ. ಶಿಕ್ಷಣ ವ್ಯವಸ್ಥೆ ಕುರಿತಂತೆ ಸಾಮಾಜಿಕ ಸಂದೇಶ ಹೊಂದಿರುವ ಈ ಚಿತ್ರದಲ್ಲಿ ಮಾಸ್ಟರ್ ಓಂ ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾನೆ. ತಮಿಳಿಗೂ ಎಂಟ್ರಿ : ನಟಿ ಇನಿಯಾ ಜತೆ ತಮಿಳಿನ ಕಾಫಿ ಸಿನಿಮಾದಲ್ಲೂ ನಟಿಸುತ್ತಿದ್ದಾನೆ. ಈ ಮುಖಾಂತರ ಬಹುಭಾಷಾ ಬಾಲ ನಟ ಎಂದೆನಿಸಿಕೊಂಡಿದ್ದಾನೆ. ಕನ್ನಡದೊಂದಿಗೆ ಪರ ಭಾಷೆಗಳಲ್ಲೂ ಬಾಲನಟನಾಗಿ ಮುಂದುವರೆಯುವ ಎಲ್ಲಾ ಭರವಸೆ ಮೂಡಿಸಿದ್ದಾನೆ. ಮುಂದೊಮ್ಮೆ ಸುದೀಪ್ ಹಾಗೂ ಪುನೀತ್ ರಾಜ್‍ಕುಮಾರ್ ಹಾಗೂ ಯಶ್ ಜತೆ ನಟಿಸುವ ಆಸೆಯೂ ಈತನಿಗಿದೆ.

ಬ್ರಾಂಡ್​ ಮಾಡೆಲ್​ : ಪ್ರತಿಷ್ಠಿತ ಕಂಪನಿಗಳಾದ ಬಾಷ್, ಬ್ರಿಗೇಡ್ ಗ್ರೂಪ್ಸ್, ಡ್ರೆಸ್‍ಬೆರ್ರಿ, ಈಬೇ, ಈಸಿ ಬೈ, ಮ್ಯಾಕ್ಸ್, ಹಲೊ ಫಿಟ್ನೆಸ್ ಬ್ಯಾಂಡ್, ಹೆಚ್‍ಎಲ್‍ಡಿ ಮಾತ್ರವಲ್ಲ, ಮುಂಬಯಿ, ಜೈಪುರ್, ದಿಲ್ಲಿ ಕಿಡ್ಸ್ ಫ್ಯಾಷನ್ ಉಡುಪುಗಳ ಬ್ರಾಂಡ್ ಮಾಡೆಲ್ ಆಗಿದ್ದಾನೆ. ಜತೆಗೆ ಸ್ಥಳೀಯ ಕಂಪನಿಗಳಾದ ಕಣ್ವಾ, ಕಿಡ್ಸ್ ಅಪರೆಲ್ಸ್, ಗುಕೋವಿಟಾ ಸೇರಿದಂತೆ, 50 ಕ್ಕೂ ಹೆಚ್ಚು ಆ್ಯಡ್‍ಗಳಲ್ಲಿ ಕಾಣಿಸಿಕೊಂಡಿದ್ದಾನೆ. ಕೇವಲ ಉತ್ತರ ಭಾರತದವರೇ ಆಕ್ರಮಿಸಿಕೊಂಡಿರುವ ಜಾಹೀರಾತು ಹಾಗೂ ಮಾಡೆಲಿಂಗ್ ಕ್ಷೇತ್ರದಲ್ಲಿ ಸವಾಲೆಂಬಂತೆ, ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಸ್ಪರ್ಧೆಯಲ್ಲಿ  ಫ್ರೆಶ್ ಫೇಸ್ ಇನ್ ಸೋಷಿಯಲ್ ಮೀಡಿಯಾ 2017 ಕಿಡ್ಸ್ ಕೆಟಗರಿಯಲ್ಲಿ ಮೊದಲ ಸ್ಥಾನ ಗಳಿಸಿದ್ದಾನೆ. ಕ್ರಮವಾಗಿ ಕರ್ನಾಟಕ ಸೂಪರ್ ಕಿಡ್ ಮಾಡೆಲ್,ಸೌತ್ ಇಂಡಿಯಾ ಸೂಪರ್ ಕಿಡ್ ಮಾಡೆಲ್ ಅತ್ಯುನ್ನತ ಟೈಟಲ್‍ಗಳನ್ನು ತನ್ನದಾಗಿಸಿಕೊಂಡಿದ್ದಾನೆ. ಈ ಎಲ್ಲಾ ಆವಾರ್ಡ್ ಹಾಗೂ ಟೈಟಲ್‍ಗಳನ್ನು ಪಡೆದ ಮೊದಲ ಕನ್ನಡದ ಬಾಲ ನಟ ಇವನು.

ರ‍್ಯಾಂಪ್​ ವಾಕ್​ : ಬೆಂಗಳೂರಿನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕಿಡ್ಸ್ ಫ್ಯಾಷನ್ ಫೆಸ್ಟಿವಲ್ ವೀಕ್‍ನಲ್ಲಿ ನೂರು ಮಕ್ಕಳ ಮಧ್ಯೆ ಸೆಲೆಬ್ರಿಟಿ ಶೋ ಸ್ಟಾಪರ್ ಆಗಿ ಮಿಂಚಿದ್ದಾನೆ. ಇನ್ನುಳಿದಂತೆ ಸುದರ್ಶನ್ ಸಿಲ್ಕ್ಸ್, ಜಿಎಫ್‍ಡಬ್ಲ್ಯೂ, ಕಿಡ್ಸ್ ಶೋ, ,ಮಾಮ್ ಆ್ಯಂಡ್ ಕಿಡ್ಸ್, ಮದರ್ಸ್ ಡೇ ರ್ಯಾಂಪ್, ಕೆಎಫ್‍ಎಫ್‍ಡಬ್ಲ್ಯೂ, ಕಿಡ್ಸ್ ಅಪರೆಲ್ಸ್, ಮ್ಯಾಕ್ಸ್, ಸಾಮುದ್ರಿಕಾ, ಟೆಲಿವಿಷನ್ ನ್ಯೂ ಯಿಯರ್ ರ‍್ಯಾಂಪ್ ವಾಕ್ ಸೇರಿದಂತೆ ನಾನಾ ಕಡೆ ಕಾಣಿಸಿಕೊಂಡಿರುವ ಓಂಗೆ ಕ್ಯಾಮಾರಾಗೆ ಪೋಸ್​​ ನೀಡುವುದೆಂದರೇ ಸಖತ್ ಖುಷಿಯಂತೆ.

ಆಚಾರ್ಯ ಪಾಠಶಾಲಾ ವಿದ್ಯಾರ್ಥಿ : ಇಷ್ಟೆಲ್ಲಾ ಬಿಝಿಯಾಗಿದ್ದರೂ ಓದಿನಲ್ಲಿ ಓಂ ಹಿಂದೆ ಉಳಿದಿಲ್ಲ. ಮ್ಯಾಥ್ಸ್ ಎಕ್ಸ್​ಪರ್ಟ್​​​. ಓದು ಹಾಗೂ ಇತರೇ ಚಟುವಟಿಕೆಗಳಲ್ಲೂ ಮುಂದಿದ್ದಾನೆ. ಈ ಎಲ್ಲದಕ್ಕೂ ತಾಯಿಯ ಸಾಥ್ ಇದೆ, ಸಪೋರ್ಟ್​​ ಇದೆ.`ನಾನು ಮಾಡೆಲಿಂಗ್ ಹಾಗೂ ಶೂಟಿಂಗ್ ಬಿಝಿಯಿದ್ದಾಗ ವೀಕೆಂಡ್‍ನಲ್ಲಿ ಸ್ಪೆಷಲ್ ಕ್ಲಾಸ್ ಕೊಡಿಸುವ ಜವಾಬ್ದಾರಿ ಅಮ್ಮನದ್ದು. ಸೋ ಹಾಗಾಗಿ ನನಗೆ ಆ್ಯಡ್‍ಗಳಲ್ಲಿ ಹಾಗೂ ಸಿನಿಮಾಗಳಲ್ಲಿ ನಟಿಸುವುದು ಒಂಥರ ಪಿಕ್‍ನಿಕ್‍ಗೆ ಹೋದಂತೆ ಎಂದನಿಸುತ್ತದೆ’ ಎನ್ನುವ ಓಂಗೆ ಎರಡು ಕ್ಷೇತ್ರವೂ ಇಷ್ಟವಂತೆ. ಇದಕ್ಕೆ ಪೂರಕ ಎಂಬಂತೆ, ಶಾಲೆಯ ಟೀಚರ್​ಗಳು ಹಾಗೂ ಪ್ರಾಂಶುಪಾಲರ ಪ್ರೋತ್ಸಾಹ ಸಿಗುತ್ತಿದೆ.

ಟ್ರಾವೆಲ್ ಪ್ರೇಮಿ : ಇತ್ತ ಮಾಡೆಲಿಂಗ್, ಅತ್ತ ಸಿನಿಮಾ, ಜೊತೆಗೆ ಓದು ಹೀಗೆ ಎಲ್ಲವನ್ನೂ ಬ್ಯಾಲೆನ್ಸ್ ಮಾಡುತ್ತಿರುವ ಓಂನ ಹವ್ಯಾಸಗಳಲ್ಲಿ ಟ್ರಾವೆಲಿಂಗ್, ಗಾರ್ಡೆನಿಂಗ್, ಪೇಟಿಂಗ್ ಹಾಗೂ ವಿದೇಶಿ ನಾಣ್ಯ ಸಂಗ್ರಹಣೆ ಸೇರಿದೆ. ಇನ್ನು, ಟ್ರಾವೆಲ್ಲಿಂಗ್ ಅಂದ್ರೆ ಸದಾ ಸಿದ್ಧವಾಗುವ ಓಂ ಈಗಾಗಲೇ ಗ್ರೀಸ್, ಹಾಂಕಾಂಗ್, ಇಟಲಿ, ಇಂಗ್ಲೇಡ್ ಸೇರಿದಂತೆ ಹದಿನೈದಕ್ಕೂ ಹೆಚ್ಚು ದೇಶಗಳನ್ನು ಸುತ್ತಿದ್ದಾನೆ. ತನ್ನ ಸೋಷಿಯಲ್ ಮೀಡಿಯಾ ಪೇಜ್‍ಗಳಲ್ಲಿ ಹಾಗೂ ಟ್ರಾವೆಲ್ ಬ್ಲಾಗ್‍ಗಳಲ್ಲಿ ಮಕ್ಕಳ ಶೈಲಿಯಲ್ಲಿ ಸ್ಥಳ ನಿರೂಪಣೆಯನ್ನು ಮಾಡಿದ್ದಾನೆ.ಸಂತಸದ ವಿಚಾರ ಎಂದರೆ, ಇತ್ತೀಚೆಗೆ ವಲ್ರ್ಡ್ ಕಿಡ್ಸ್ ಫ್ಯಾಷನ್ ಕಂಪನಿಯೊಂದು ನಡೆಸಿದ ಸಮೀಕ್ಷೆಯಲ್ಲಿ , ದಕ್ಷಿಣ ಭಾರತದ ಟಾಪ್ ಕಿಡ್ ಮಾಡೆಲ್‍ಗಳ ಪೈಕಿ ಸದ್ಯಕ್ಕೆ ಟಾಪ್‍ಲಿಸ್ಟ್​​​​​​ನಲ್ಲಿರುವ ಕನ್ನಡದ ಕಿಡ್ ಮಾಡೆಲ್ ಇವನು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments