Sunday, September 14, 2025
HomeUncategorizedವಿರಾಟ್​ ಕೊಹ್ಲಿ ಹಾದಿಯೇ ಬೇರೆ ನನ್ನ ಹಾದಿಯೇ ಬೇರೆ ಎಂದಿದ್ದೇಕೆ ಉನ್ಮುಖ್ತ್​​ ಚಂದ್..?

ವಿರಾಟ್​ ಕೊಹ್ಲಿ ಹಾದಿಯೇ ಬೇರೆ ನನ್ನ ಹಾದಿಯೇ ಬೇರೆ ಎಂದಿದ್ದೇಕೆ ಉನ್ಮುಖ್ತ್​​ ಚಂದ್..?

ಟೀಮ್ ಇಂಡಿಯಾದಲ್ಲಿ ಸ್ಥಾನಗಿಟ್ಟಿಸಿಕೊಳ್ಳಲು ಯುವ ಕ್ರಿಕೆಟಿಗರ ನಡುವೆ ಭಾರೀ ಪೈಪೋಟಿ ನಡೀತಾ ಇದೆ. ಭಾರತದಲ್ಲಿ ಅನೇಕ ಪ್ರತಿಭಾವಂತ ಕ್ರಿಕೆಟಿಗರಿದ್ದು, ಎಲ್ಲರಿಗೂ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗುವುದು ಕಷ್ಟ ಸಾಧ್ಯವೇ..ದೇಶಿ ಕ್ರಿಕೆಟಿನಲ್ಲಿ, ಅಂಡರ್ 19 ಭಾರತ ತಂಡದಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರೂ ಟೀಮ್ ಇಂಡಿಯಾದಲ್ಲಿ ಸ್ಥಾನಗಿಟ್ಟಿಸಿಕೊಳ್ಳಲಾಗದೆ ನಿರಾಸೆ ಅನುಭವಿಸಿರುವ ಕ್ರಿಕೆಟಿಗರು ಅನೇಕ.
ಅಂಥಾ ಪ್ರತಿಭಾವಂತ ಯುವ ಕ್ರಿಕೆಟಿಗರಲ್ಲಿ ಉನ್ಮುಖ್ತ್​ ಚಂದ್ ಪ್ರಮುಖರು. ಅವರು 2012ರ ಅಂಡರ್ 19 ವರ್ಲ್ಡ್​​​​​ಕಪ್​​ನಲ್ಲಿ ಭಾರತ ತಂಡವನ್ನು ಮುನ್ನೆಡಿಸಿ ಕಪ್ ಗೆಲ್ಲಿಸಿಕೊಟ್ಟ ಕ್ಯಾಪ್ಟನ್. ಉನ್ಮುಖ್ತ್​​​ ಚಂದ್ ವಿಶ್ವಕಪ್ ಗೆಲ್ಲಿಸಿಕೊಟ್ಟಾಗ ಮುಂದಿನ ದಿನಗಳಲ್ಲಿ ಖಂಡಿತಾ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆಯುತ್ತಾರೆ. ವಿಶ್ವ ಕ್ರಿಕೆಟ್​ನಲ್ಲಿ ಕಮಾಲ್ ಮಾಡುತ್ತಾರೆ ಅಂತ ಕ್ರಿಕೆಟ್​ ದಿಗ್ಗಜರು ಭವಿಷ್ಯ ನುಡಿದಿದ್ದರು. ಆದರೆ ಉನ್ಮುಖ್ತ್ ಅಂಡರ್ 19​​ ವರ್ಲ್ಡ್​ಕಪ್​ ಗೆಲ್ಲಿಸಿಕೊಟ್ಟು 7 ವರ್ಷಗಳಾಗಿವೆ. ಇನ್ನೂ ಕೂಡ ಚಂದ್​ಗೆ ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಕ್ಕಿಲ್ಲ. ಈ ಬಗ್ಗೆ ಅವರೀಗ ಮೌನ ಮುರಿದಿದ್ದಾರೆ.
‘ನಾನು ಅಂಡರ್-19 ವಿಶ್ವಕಪ್ ಗೆದ್ದು ಏಳು ವರ್ಷಗಳಾಗಿವೆ. ಆ 7 ವರ್ಷದ ಹಿಂದಿನದು ನಂಗೆ ಇಂದಿಗೂ ಅದ್ಭುತ ಕ್ಷಣ. ಅಂತಃ ದೊಡ್ಡ ಟೂರ್ನಮೆಂಟ್​ನಲ್ಲಿ ನನಗೆ ಭಾರತ ತಂಡವನ್ನು ಮುನ್ನಡೆಸುವ ಅವಕಾಶ ಸಿಕ್ಕಿತ್ತು. ಅಲ್ಲದೆ ಕಪ್ ಗೆದ್ದಿದ್ದೆವು. ಆ ಕ್ಷಣ ನನ್ನ ಹೃದಯದಲ್ಲಿ ಹಚ್ಚ ಹಸಿರಾಗಿರುತ್ತದೆ. ಆದರೆ. ಈಗ ಕಾಲ ಬದಲಾಗಿದೆ, ನಾವು ಮುಂದುವರೆಯಬೇಕು. ನಾನು ನನ್ನ ತಂಡಕ್ಕಾಗಿ, ದೇಶಕ್ಕಾಗಿ ಆಡಬೇಕು. ನನಗಿನ್ನೂ ಕೇವಲ 26 ವರ್ಷ. ಶ್ರಮವಹಿಸಿ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದೇ ಪಡೆಯುತ್ತೇನೆ. ಇದೇ ನನ್ನ ಕೊನೇ ಕನಸು. ಕೆಲವ್ರಿಗೆ ಅವಕಾಶ ಕೂಡಲೇ ಬಂದು ಬಿಡುತ್ತದೆ. ಇನ್ನು ಕೆಲವರು ಅವಕಾಶಕ್ಕೆ ಕಾಯಬೇಕು” ಅಂದಿದ್ದಾರೆ.
ಹಾಗೆಯೇ ನನ್ನ ಕ್ರಿಕೆಟ್ ಹಾದಿಯನ್ನು ಬೇರೆಯವರಿಗೆ ಹೋಲಿಸುವುದು ತಪ್ಪು. ವಿರಾಟ್ ಕೊಹ್ಲಿ, ಪೃಥ್ವಿ ಶಾ ಅವರಿಗೆ ಬೇಗನೆ ಟೀಂ ಇಂಡಿಯಾ ಬಾಗಿಲು ತೆರೆಯಿತು. ಆದರೆ ನಂಗೆ ಬೇಗ ಸಿಕ್ಕಿಲ್ಲ. ನಂಗೆ ನನ್ದೇಯಾದ ವಿಭಿನ್ನ ಹಾದಿ ಮತ್ತು ಹೆಸರಿಗೆ. ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾವನ್ನು ಪ್ರತಿನಿಧಿಸ್ತೀನಿ ಅಂತ ವಿಶ್ವಾಸದ ನುಡಿಗಳನ್ನಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments