ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಸಂವಿಧಾನದ 370 ಹಾಗೂ 35 (ಎ ) ವಿಧಿಯನ್ನು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ರದ್ದು ಮಾಡಲಾಗಿದೆ. ಹಾಗಾದ್ರೆ ಈ ಕಲಂ 370 ವಿಶೇಷತೆ ಏನು?. ಇದರ ಹಿಂದಿನ ಇತಿಹಾಸವೇನು ಅನ್ನೋದರ ಬಗ್ಗೆ ತಿಳಿದುಕೊಳ್ಳೋ ಅಗತ್ಯವಿದೆ. ಆ ಬಗ್ಗೆ ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್.
ಎಲ್ರಿಗೂ ಗೊತ್ತಿರುವಂತೆ 1947ರಲ್ಲಿ ಭಾರತ ಹಾಗೂ ಪಾಕಿಸ್ತಾನ ಸ್ವತಂತ್ರ ರಾಷ್ಟ್ರಗಳಾಗಿ ವಿಭಜನೆಯಾದ್ವು. ಆಗ ಕಾಶ್ಮೀರದ ರಾಜ ಹರಿಸಿಂಗ್ ಯಾವ ರಾಷ್ಟ್ರದ ಜೊತೆಗೂ ಸೇರದೆ ಸ್ವತಂತ್ರವಾಗಿ ಉಳಿಯುವ ನಿರ್ಧಾರವನ್ನು ಮಾಡ್ತಾರೆ. ನಂತರ ಪಾಕಿಸ್ತಾನ ಕಣಿವೆ ರಾಜ್ಯದ ಮೇಲೆ ಅಪ್ರಚೋದಿತ ದಾಳಿ ನಡೆಸಿತು. ಆ ವೇಳೆ ರಾಜ ಹರಿಸಿಂಗ್ ತಮ್ಮ ನೆರವಿಗೆ ಬನ್ನಿ ಅಂತ ಭಾರತ ಸರ್ಕಾರವನ್ನು ಕೇಳಿಕೊಳ್ತಾರೆ. ಆಮೇಲೆ ಭಾರತದೊಂದಿಗೆ ವಿಲೀನವಾಗಲು ಒಪ್ಪಿಕೊಳ್ತಾರೆ. ಆದರೆ, ಕೆಲವೊಂದು ಷರತ್ತುಗಳನ್ನು ಸರ್ಕಾರದ ಮುಂದಿಡ್ತಾರೆ.. ಆಗ ಜನ್ಮತಾಳಿದ್ದೇ ಈ ಕಲಂ 370..! ತದನಂತರ ಕಲಂ35ಎ ಅನ್ನು ಸೇರ್ಪಡೆ ಮಾಡಲಾಗುತ್ತೆ.
ಕಲಂ 370ರ ಪ್ರಕಾರ ಜಮ್ಮು-ಕಾಶ್ಮೀರಕ್ಕೆ ಸಿಕ್ಕಿದ್ದ ವಿಶೇಷ ಸವಲತ್ತುಗಳೇನು?
* ಈ ಕಲಂ 370ರ ಪ್ರಕಾರ ಜಮ್ಮು-ಕಾಶ್ಮೀರ ಭಾರತ ಗಣರಾಜ್ಯದ ಭಾಗವಾಗಿತ್ತು. ಆದ್ರೆ, ಭಾರತದ ಬೇರೆ ಯಾವುದೇ ರಾಜ್ಯಕ್ಕಿಲ್ಲದ ವಿಶೇಷ ಸ್ಥಾನಮಾನಗಳನ್ನ ಹೊಂದಿತ್ತು.
* ಕೇವಲ ರಕ್ಷಣೆ, ಹಣಕಾಸು, ವಿದೇಶಾಂಗ ವ್ಯವಹಾರ ಮತ್ತು ಸಂಪರ್ಕ ಈ ಖಾತೆಗಳಿಗೆ ಸಂಬಂಧಿಸಿದಂತೆ ಮಾತ್ರವೇ ಕಣಿವೆ ರಾಜ್ಯಕ್ಕೆ ನಮ್ಮ ದೇಶದ ಕಾನೂನು ಮತ್ತು ಸಂವಿಧಾನ ಅನ್ವಯವಾಗ್ತಿತ್ತು. ಸಂವಿಧಾನದ ಎಲ್ಲಾ ವಿಧಿ-ವಿಧಾನಗಳನ್ನು ಅನುಷ್ಠಾನ ಮಾಡ್ಬೇಕು ಅಂದ್ರೆ ಜಮ್ಮು-ಕಾಶ್ಮೀರದ ಒಪ್ಪಿಗೆ ಬೇಕಿತ್ತು.
* ಜಮ್ಮು-ಕಾಶ್ಮೀರ ಭಾರತದೊಂದಿಗೆ ವಿಲೀನಗೊಳಿಸಬೇಕಂತ ರಾಜ್ಯ ಸರ್ಕಾರ ನಿರ್ಧರಿಸಿದ್ರೆ ಸಂವಿಧಾನಕ್ಕೆ ತಿದ್ದುಪಡಿ ಮಾಡಿ ವಿಧಾನಸಭೆ ಮುಂದೆ ಮಂಡಿಸ್ಬೇಕು. ವಿಧಾನಸಭೆ ಅನುಮೋದನೆ ನೀಡಿದ್ರೆ ಅದನ್ನು ಮಧ್ಯಂತರ ಅಧಿಕಾರ ಅಂತ ಪರಿಗಣಿಸಲಾಗುವುದು. ಅಂದ್ರೆ ವಿಲೀನಗೊಳಿಸೋ ಅಧಿಕಾರ ಆ ವಿಧಾನಸಭೆಗೂ ಇಲ್ಲ..!
* ರಾಷ್ಟ್ರಪತಿಗಳು 370 ವಿಧಿಯನ್ನು ರದ್ದುಗೊಳಿಸಿ ಭಾರತದೊಳಗೆ ಜಮ್ಮು-ಕಾಶ್ಮೀರವನ್ನು ವಿಲೀನಗೊಳಿಸೋದಕ್ಕೆ ಮುಂದಾದಾದರೂ ರಾಜ್ಯ ಸರ್ಕಾರದ ಶಿಫಾರಸ್ಸು ಅವಶ್ಯಕವಾಗಿತ್ತು.
ಈ ಎಲ್ಲಾ ಸವಲತ್ತುಗಳನ್ನು ಕಲಂ 370ರ ಅಡಿಯಲ್ಲಿ ನೀಡಲಾಗಿತ್ತು. ಈ ಸವಲತ್ತುಗಳಲ್ಲದೆ ಕಲಂ 35 (ಎ) ಅಡಿಯಲ್ಲೂ ವಿಶೇಷ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು.
35ಎ ಏನು?
* 35 (ಎ) ಪ್ರಕಾರ ಭಾರತ ಸರ್ಕಾರದ ಕೆಲ ಕಾಯ್ದೆಗಳು ಕಣಿವೆ ರಾಜ್ಯಕ್ಕೆ ಸಂಬಂಧಿಸಿರಲಿಲ್ಲ.
* ಕಾಶ್ಮೀರದ ಮೂಲ ನಿವಾಸಿಗಳ ಹೊರತಾಗಿ ಬೇರೆ ಯಾರೂ ಈ ಕಣಿವೆ ರಾಜ್ಯದಲ್ಲಿ ಸ್ಥಿರಾಸ್ತಿ, ಚರಾಸ್ತಿಗಳನ್ನು ಹೊಂದುವ ಹಕ್ಕಿರಲಿಲ್ಲ. ಅಷ್ಟೇ ಅಲ್ಲದೆ ಹೊರ ರಾಜ್ಯದವರು ಕಾಶ್ಮೀರದಲ್ಲಿ ಶಾಶ್ವತವಾಗಿ ನೆಲೆಸುವಂತಿರಲಿಲ್ಲ.
* ಅಷ್ಟೇ ಅಲ್ದೆ ಹೊರ ರಾಜ್ಯದ ವಿದ್ಯಾರ್ಥಿಗಳು ಜಮ್ಮು-ಕಾಶ್ಮೀರ ಸರ್ಕಾರ ನಡೆಸೋ ವೃತ್ತಿಪರ ಕೋರ್ಸ್ ಮತ್ತು ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುವಂತಿರ್ಲಿಲ್ಲ. ಅದಲ್ಲದೆ ಸರ್ಕಾರದ ವಿದ್ಯಾರ್ಥಿ ವೇತನ ಪಡೆಯುವಂತಿರಲಿಲ್ಲ.
* ರಾಜ್ಯ ಸರ್ಕಾರದ ಹುದ್ದೆಗಳಲ್ಲಿ ಬೇರೆ ರಾಜ್ಯದವರಿಗೆ ಅವಕಾಶವಿರ್ಲಿಲ್ಲ.
* ಬೇರೆ ರಾಜ್ಯದವರು ಅಲ್ಲಿ ಚುನಾವಣೆಗೆ ಸ್ಪರ್ಧಿಸುವಂತಿಲ್ಲ.
ಹೀಗೆ ಕಲಂ 370 ಮತ್ತು 35 (ಎ) ಅನ್ವಯ ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಲಾಗಿತ್ತು. ಕಾಶ್ಮೀರ ಮಾತ್ರವಲ್ಲದೆ 371(ಎ) ವಿಧಿಯ ಅಡಿಯಲ್ಲಿ ನಾಗಾಲ್ಯಾಂಡ್, 371 (ಜಿ) ವಿಧಿಯಡಿಯಲ್ಲಿ ಮಿಜೋರಾಂಗಳಿಗೂ ಇಂಥಾ ವಿಶೇಷ ಸ್ಥಾನಮಾನಗಳನ್ನು ನೀಡಲಾಗಿದೆ. ಆ ರಾಜ್ಯಗಳಿಗಿರೋ ಇತಿಹಾಸವೇ ವಿಶೇಷ ಸೌಲಭ್ಯಗಳಿಗೆ ಕಾರಣ. ಆದರೆ, ಜಮ್ಮು-ಕಾಶ್ಮೀರದಲ್ಲಿ ಪದೇ ಪದೇ ಜನಸಾಮಾನ್ಯರು ಮತ್ತು ಗಡಿ ಭದ್ರತಾಪಡೆಗಳ ನಡುವೆ ಚಕಮಕಿ ಆಗ್ತಾನೇ ಇರುತ್ತೆ. ಈ ಹಿನ್ನೆಲೆಯಲ್ಲಿ ಕಲಂ 370, 35 (ಎ)ಗೆ ತಿದ್ದುಪಡಿ ತರ್ಬೇಕು ಅನ್ನೋ ಕೂಗು ಕೇಳಿ ಬರ್ತಾ ಇತ್ತು



N?u b?n dang tìm ki?m m?t tr?i nghi?m massage d?ng c?p và khác bi?t, MASSAGE HK G?N ÐÂY là l?a ch?n không th? b? qua. D?ch v? t?i dây mang phong cách Trung Hoa sang tr?ng, k?t h?p k? thu?t massage tinh t? và không gian phòng ?c cao c?p. T? phòng Eco tho?i mái d?n phòng VVIP ti?n nghi, t?t c? d?u du?c cham chút t? m?, mang l?i c?m giác thu giãn t?i da. Ðây th?c s? là noi hoàn h?o d? v?a cham sóc s?c kh?e v?a t?n hu?ng tr?i nghi?m sang tr?ng.