Sunday, August 24, 2025
Google search engine
HomeUncategorizedಏಳೇಳು ಜನ್ಮ ಕಳೆದರೂ ಮರೆಯದಂತ ಪಾಠ ಕಲಿಸಬೇಕೂ: ಅನುಪಮ್​ ಖೇರ್​ ಆಕ್ರೋಶ

ಏಳೇಳು ಜನ್ಮ ಕಳೆದರೂ ಮರೆಯದಂತ ಪಾಠ ಕಲಿಸಬೇಕೂ: ಅನುಪಮ್​ ಖೇರ್​ ಆಕ್ರೋಶ

ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ 26 ಮಂದಿ ಮೃತಪಟ್ಟಿರೋ ಬಗ್ಗೆ ಬಾಲಿವುಡ್ ಹಿರಿಯ ನಟ ಅನುಪಮ್ ಖೇರ್ ವಿಷಾದ ವ್ಯಕ್ತಪಡಿಸಿದ್ದಾರೆ. ಏಳೇಳು ಜನ್ಮ ಕಳೆದರೂ ಮರೆಯದಂತ ಪಾಠವನ್ನು ಉಗ್ರರಿಗೆ ಕಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾತನಾಡಿರುವ ಅನುಪಮ್​ ಖೇರ್​ “ಇಂದು ಪಹಲ್ಗಾಮ್‌ನಲ್ಲಿ ಹಿಂದೂಗಳ ನರಮೇಧ ಆಗಿದೆ. 27 ಹಿಂದೂಗಳನ್ನು ಹುಡುಕಿ ಹುಡುಕಿ ಕೊಲ್ಲಲಾಗಿದೆ. ದುಃಖದ ಜೊತೆ ಕ್ರೋಧ, ಸಿಟ್ಟು ಬರುತ್ತದೆ. ನಾನು ಇದನ್ನು ಜೀವನದಲ್ಲಿ ಬಹಳಷ್ಟು ನೋಡಿದ್ದೇನೆ. ಇಂತಹ ಘಟನೆಗಳು ಕಾಶ್ಮೀರದಲ್ಲಿ ನಡೆಯುತ್ತಲೆ ಇದೆ. ರಜಾ ದಿನಗಳನ್ನು ಕಳೆಯಲು ದೇಶದ ಅನೇಕ ಭಾಗಗಳಿಂದ ಜನರು ಬಂದಿದ್ದರು. ಆದರೆ ಅವರನ್ನು ಧರ್ಮದ ಆಧಾರದ ಮೇಲೆ ಕೊಲ್ಲಲಾಗಿದೆ. ಇಂತಹ ಕೃತ್ಯವನ್ನು ಖಂಡಿಸುತ್ತೇವೆ ಎಂದು ಹೇಳಿದರು.

ಇದನ್ನೂ ಓದಿ :ಪಹಲ್ಗಾಮ್​ನಲ್ಲಿ ದಾಳಿ ನಡೆಸಿದ ಉಗ್ರರ ಪೋಟೊ ಬಿಡುಗಡೆ ಮಾಡಿದ NIA

ಗುಂಡೇಟಿಗೆ ಬಲಿಯಾಗಿರುವ ವೈರಲ್​ ಪೋಟೊ ಬಗ್ಗೆ ಮಾತನಾಡಿರುವ ಅನುಪಮ್​ ಖೇರ್​ ‘ ಪತಿಯ ಮೃತ ದೇಹದ ಜೊತೆಗಿದ್ದ ಮಹಿಳೆಯನ್ನು ನಾನು ಮರೆಯಲು ಸಾಧ್ಯವಿಲ್ಲ. ನಾನು ಪಲ್ಲವಿ ಜಿ ಅವರ ಸಂದರ್ಶನ ನೋಡಿದೆ. ಪತಿಯನ್ನ ಕಣ್ಣೆದುರೇ ಸಾಯಿಸಿದಾಗ ನನ್ನನ್ನು ನನ್ನ ಮಗನನ್ನು ಸಾಯಿಸಿ ಅಂದಾಗ, ನಿಮ್ಮನ್ನು ಸಾಯಿಸಲ್ಲ ಮೋದಿಗೆ ಹೋಗಿ ಹೇಳಿ ಅಂದ್ರಲ್ಲ. ಬಹುಶಃ ಅವನು ಒಂದು ಸಂದೇಶವನ್ನು ನೀಡಲು ಬಯಸಿದ್ದಿರಬಹುದು ಎಂದಿದ್ದಾರೆ.

ಇದನ್ನೂ ಓದಿ :ಮೆಹಂದಿ ಮಾಸುವ ಮುನ್ನವೇ ಕುಂಕುಮ ಅಳಿಸಿದ ಉಗ್ರರು: ಉಗ್ರ ದಾಳಿಯಲ್ಲಿ ನೌಕಪಡೆ ಅಧಿಕಾರಿ ಸಾವು

ಮೋದಿಯವರು ಹಾಗೂ ಅಮಿತ್ ಶಾ ಅವರ ಬಳಿ ನಾನು ಕೇಳಿಕೊಳ್ಳುವುದೇನಂದರೆ ಉಗ್ರರಿಗೆ ನಾವು ಎಂಥಹ ಪಾಠ ಕಲಿಸಬೇಕು ಅಂದರೆ ಇನ್ನೂ ಏಳು ಜನ್ಮ ಎತ್ತಿ ಬಂದ್ರೂ ಇಂಥಹ ದುಷ್ಟ ಕೆಲಸ ಮಾಡುವ ಯೋಚನೆನೇ ಅವರಿಗೆ ಬರಬಾರದು ಎಂದು ಹಿಂದೂ ಕಾಶ್ಮೀರಿ ಪಂಡಿತ್‌ ಕುಟುಂಬದಲ್ಲಿ ಹುಟ್ಟಿ ಬೆಳೆದಿರುವ ಅನುಪಮ್‌ ಖೇರ್‌ ಅವರು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments