Monday, September 1, 2025
HomeUncategorizedಭಿಕ್ಷುಕನ ವೇಷ ತೊಟ್ಟು ಮುಂಬೈ ಬೀದಿಗಳಲ್ಲಿ ಭಿಕ್ಷೆ ಬೇಡಿದ ಬಾಲಿವುಡ್​​ ಸೂಪರ್​ ಸ್ಟಾರ್​​​

ಭಿಕ್ಷುಕನ ವೇಷ ತೊಟ್ಟು ಮುಂಬೈ ಬೀದಿಗಳಲ್ಲಿ ಭಿಕ್ಷೆ ಬೇಡಿದ ಬಾಲಿವುಡ್​​ ಸೂಪರ್​ ಸ್ಟಾರ್​​​

ಉದ್ದನೆಯ ಗಡ್ಡ, ಉದ್ದನೆಯ ಕೂದಲು ಬಿಟ್ಟುಕೊಂಡು ಮೈಗೆ ಪ್ರಾಣಿಗಳ ಚರ್ಮದಂಥಹಾ ವಸ್ತು ಸುತ್ತಿಕೊಂಡು, ಕಾಲಿಗೆ ಬೂಟು ಧರಿಸಿ ವ್ಯಕ್ತಿಯೊಬ್ಬ ಮುಂಬೈನ ಬ್ಯುಸಿ ರಸ್ತೆಗಳಲ್ಲಿ ಓಡಾಡಿದ್ದಾರೆ. ಕೈಗಾಡಿ ತಳ್ಳಿದ್ದಾನೆ, ರಸ್ತೆ ಬದಿ ಅಂಗಡಿಗಳ ಬಳಿ ಹೋಗಿ ಊಟ ಕೇಳಿದ್ದಾನೆ, ಕೆಲವೆಡೆ ತರ್ಲೆ, ತಮಾಷೆ ಮಾಡಿದ್ದಾನೆ. ಈತ ಯಾರೋ ಹುಚ್ಚನಲ್ಲ, ಭಿಕ್ಷುಕನೂ ಅಲ್ಲ ಬದಲಿಗೆ ಭಾರತದ ಸೂಪರ್ ಸ್ಟಾರ್.

ಹೌದು..ಕೆಲ ಸೆಲೆಬ್ರಿಟಿಗಳು ಆಗೊಮ್ಮೆ ಈಗೊಮ್ಮೆ ತಮ್ಮ ವೇಷ ಬದಲಿಸಿಕೊಂಡು ಸಾರ್ವಜನಿಕರ ಮಧ್ಯೆ ಓಡಾಡುತ್ತಾರೆ. ಜನರಿಗೆ ಶಾಕ್ ಕೊಡುತ್ತಾರೆ. ಜನರನ್ನು ಹತ್ತಿರದಿಂದ ನೋಡುವ, ಮಾತನಾಡುವ ಅವಕಾಶ ಪಡೆಯುತ್ತಾರೆ. ಇತ್ತೀಚೆಗೆ ಮುಂಬೈ ಬೀದಿಗಳಲ್ಲಿ ದೊಡ್ಡ ಸೂಪರ್ ಸ್ಟಾರ್ ಒಬ್ಬರು ಯಾವುದೋ ಶಿಲಾಯುಗದ ವ್ಯಕ್ತಿಯಂತೆ ವೇಷ ಬದಲಿಸಿಕೊಂಡು ಓಡಾಡಿದ್ದಾರೆ, ಅದರ ವಿಡಿಯೋ ವೈರಲ್ ಆಗಿದೆ. ಆದರೆ ಅವರು ಯಾರೆಂಬುದನ್ನು ಯಾರೂ ಸಹ ಗುರುತಿಸಿಲ್ಲ.

ಅಸಲಿಗೆ ಹೀಗೆ ವೇಷ ಬದಲಿಸಿಕೊಂಡು ಓಡಾಡಿದ ಸೂಪರ್ ಸ್ಟಾರ್ ಬೇರೆ ಯಾರೂ ಅಲ್ಲ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಟ್ ಅಮೀರ್ ಖಾನ್.. ಅಮಿರ್ ಖಾನ್ ಹೀಗೆ ಭಿಕ್ಷುಕನಂತೆ ವೇಷ ಧರಿಸಿ ಮುಂಬೈನ ಗಲ್ಲಿಗಳಲ್ಲಿ ಓಡಾಡಿದ್ದಾರೆ. ಮೊದಲಿಗೆ ವಿಡಿಯೋ ವೈರಲ್ ಆದಾಗ ಯಾರೋ ವಿಚಿತ್ರ ವ್ಯಕ್ತಿ ಮುಂಬೈ ಬೀದಿಗಳಲ್ಲಿ ಓಡಾಡಿದ್ದಾರೆ ಎಂದುಕೊಳ್ಳಲಾಗಿತ್ತು. ಆದರೆ ಅಮಿರ್ ಖಾನ್, ಮೇಕಪ್ ಮಾಡಿಕೊಳ್ಳುತ್ತಿರುವ ವಿಡಿಯೋ ಮತ್ತು ಫೋಟೋಗಳು ರಿವೀಲ್ ಆದ ಬಳಿಕವಷ್ಟೆ ಹಾಗೆ ಮುಂಬೈ ಬೀದಿಗಳಲ್ಲಿ ಓಡಾಡಿದ ವ್ಯಕ್ತಿ ಅಮಿರ್ ಖಾನ್ ಎಂದು ತಿಳಿದಿದ್ದು.

ಇದನ್ನೂ ಓದಿ :ಕುಂಭಮೇಳ ಕಾಲ್ತುಳಿತ ಪ್ರಕರಣ: ಸ್ವಗ್ರಾಮದಲ್ಲಿ ನೆರವೇರಿದ ತಾಯಿ-ಮಗಳ ಅಂತ್ಯಸಂಸ್ಕಾರ !

ಆದರೆ ಆಮಿರ್ ಖಾನ್ ಹೀಗೆ ಅಚಾನಕ್ಕಾಗಿ ವಿಚಿತ್ರ ವೇಷ ತೊಟ್ಟು ಮುಂಬೈ ಬೀದಿಗಳಲ್ಲಿ ಓಡಾಡಿದ್ದು ಏಕೆ ಎಂಬುದು ಯಾರಿಗೂ ತಿಳಿದಿಲ್ಲ. ಕೆಲವರೇನೋ ಯಾವುದೋ ಸಿನಿಮಾಕ್ಕಾಗಿ ಇರಬಹುದು ಎಂದಿದ್ದಾರೆ. ಇನ್ನು ಕೆಲವರು ಇದು ಯಾವುದೋ ಜಾಹೀರಾತಿಗಾಗಿ ಆಗಿರಬಹುದು ಎಂದಿದ್ದಾರೆ. ಹೀಗೆ ಓಡಾಡುವಾಗ ಅಮೀರ್ ಖಾನ್ ಜೊತೆ ಗನ್ ಮ್ಯಾನ್ ಅಥ್ವಾ ಬಾಡಿಗಾರ್ಡ್ ಯಾರೂ ಇರಲಿಲ್ಲ ಅನ್ನೋದು ವಿಶೇಷ..

ಈ ಹಿಂದೆ ಸಹ ಆಮಿರ್ ಖಾನ್ ಹೀಗೆ ವೇಷ ಮರೆಸಿ ನಗರಗಳ ಬೀದಿಯಲ್ಲಿ ಓಡಾಡಿದ್ದಿದೆ. ಈ ಹಿಂದೆ ವೇಷಗಳನ್ನು ಬದಲಾಯಿಸಿ ಕೆಲವು ಸೆಲೆಬ್ರಿಟಿಗಳನ್ನು ಸಹ ಫೂಲ್ ಮಾಡಿದ್ದರು. ವೇಷ ಬದಲಿಸಿಕೊಂಡು ಸೌರವ್ ಗಂಗೂಲಿಯ ಮನೆಗೆ ಆಮಿರ್ ಖಾನ್ ಭೇಟಿ ನೀಡಿದ್ದರು. ಈಗ್ಲೂ ಸಹ ಅಂತಹದ್ದೇ ಯಾವುದಾದರೂ ಶೋ ಇರಬಹುದಾ ಅನ್ನೋ ಅನುಮಾನಗಳು ಕಾಡ್ತಿವೆ.. ಒಟ್ಟಾರೆಯಾಗಿ ಅಮೀರ್ ಖಾನ್ ಯಾಕೆ ಈ ರೀತಿ ವೇಷ ಬದಲಾಯಿಸಿದ್ದು ಅನ್ನೋದು ಮಾತ್ರ ಇನ್ನೂ ಗುಟ್ಟಾಗಿಯೇ ಉಳಿದಿದೆ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments