Wednesday, August 27, 2025
HomeUncategorizedನಡೆಯಲಾಗದ ತಾಯಿಯನ್ನು ತಳ್ಳುವ ಬಂಡಿಯಲ್ಲಿ ಕುಂಭಮೇಳಕ್ಕೆ ಕರೆತಂದ ಮಗ !

ನಡೆಯಲಾಗದ ತಾಯಿಯನ್ನು ತಳ್ಳುವ ಬಂಡಿಯಲ್ಲಿ ಕುಂಭಮೇಳಕ್ಕೆ ಕರೆತಂದ ಮಗ !

ಉತ್ರರ ಪ್ರದೇಶದ ಪ್ರಯಾಗ್​ನಲ್ಲಿ ನಡೆಯುತ್ತಿರುವ ಕುಂಭಮೇಳ ಅನೇಕ ಭಾವನಾತ್ಮಕ ಕ್ಷಣಗಳಿಗೂ ಸಾಕ್ಷಿಯಾಗುತ್ತಿದೆ. ಆಧುನಿಕ ಶ್ರವಣ ಕುಮಾರನೋರ್ವ ತನ್ನ ತಾಯಿಯನ್ನು ತಳ್ಳುವ ಬಂಡಿಯಲ್ಲಿ ಕೂರಿಸಿಕೊಂಡು ಪ್ರಯಾಗ್​ರಾಜ್​ ಹೋಗುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ.

ನಾವೆಲ್ಲಾ ಶ್ರವಣ ಕುಮಾರನ ಕಥೆಯನ್ನು ಕೇಳಿರುತ್ತೇವೆ. ನಡೆಯಲು ಸಾಧ್ಯವಾಗದ ವೃದ್ದ ತಂದೆ-ತಾಯಿಯರನ್ನು ಶ್ರವಣ ಕುಮಾರ ತನ್ನ ಹೆಗಲ ಮೇಲೆ ಹೊತ್ತುಕೊಂಡು ತೀರ್ಥಯಾತ್ರೆಗೆ ಕರೆದೊಯ್ದಿದ್ದ, ಅದೇ ರೀತಿಯಾಗಿ ಉತ್ತರ ಪ್ರದೇಶದಲ್ಲಿ ಮತ್ತೊಬ್ಬ ಆಧುನಿಕ ಶ್ರವಣ ಕುಮಾರ ತನ್ನ 92 ವರ್ಷದ ತಾಯಿಯನ್ನು ಮರದ ಗಾಡಿಯಲ್ಲಿ ಕೂರಿಸಿ ತಾನೇ ಎಳೆದುಕೊಂಡು ಕುಂಭಮೇಳಕ್ಕೆ ಹೊರಟ್ಟಿದ್ದಾನೆ.

ಇದನ್ನೂ ಓದಿ:ಮಹಾಕುಂಭ ಮೇಳದಲ್ಲಿ ಮತ್ತೆ ಅಗ್ನಿ ಅವಘಡ: ಹಲವು ಟೆಂಟ್​ಗಳು ಬೆಂಕಿಗಾಹುತಿ !

ಮರದ ಗಾಡಿಯನ್ನು ಎಳೆಯುತ್ತಿರುವ ವ್ಯಕ್ತಿಯನ್ನು ಚೌಧರಿ ಸುದೇಶ್​ ಪಾಲ್​ ಮಲಿಕ್​ ಎಂದು ತಿಳಿದು ಬಂದಿದ್ದು. ಈತನಿಗೆ 25 ವರ್ಷಗಳ ಹಿಂದೆ ಮೊಣಕಾಲು ಸಮಸ್ಯೆ ಇತ್ತು. ಇದರಿಂದಾಗಿ ಅವರು ನಡೆಯಲು ಕಷ್ಟ ಪಡುತ್ತಿದ್ದರು. ಆದರೆ ಅವರ ತಾಯಿಯ ಆಶೀರ್ವಾದದಿಂದ ಅವರು ಚೇತರಿಸಿಕೊಂಡಿದ್ದರು ಎಂಬ ನಮಬಿಕೆ ಇತ್ತು.

ಇದೀಗ ತಾಯಿಗೆ ಕೃತಜ್ಙತೆ ಸಲ್ಲಿಸಲು ವ್ಯಕ್ತಿ ಕುಂಭಮೇಳಕ್ಕೆ ಕರೆದೊಯ್ಯಲು ನಿರ್ಧರಿಸಿದ್ದು. ಕುಂಭದಲ್ಲಿ ತನ್ನ ತಾಯಿಗೆ ಪುಣ್ಯಸ್ನಾನಕ್ಕೆ ಕರೆದೊಯ್ಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments