Saturday, September 13, 2025
HomeUncategorizedಮಹಾರಾಷ್ಟ್ರ ಚುನಾವಣಾ ರ‍್ಯಾಲಿಯಲ್ಲಿ ಖಾಲಿ ಸಂವಿಧಾನದ ಪ್ರತಿಗಳನ್ನು ಹಂಚಿದ ಕಾಂಗ್ರೆಸ್

ಮಹಾರಾಷ್ಟ್ರ ಚುನಾವಣಾ ರ‍್ಯಾಲಿಯಲ್ಲಿ ಖಾಲಿ ಸಂವಿಧಾನದ ಪ್ರತಿಗಳನ್ನು ಹಂಚಿದ ಕಾಂಗ್ರೆಸ್

ಮುಂಬೈ : ಮಹರಾಷ್ಟ್ರದ ಲೋಕಸಭೆ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಪಾಲ್ಗೊಂಡಿದ್ದ ಚುನಾವಣಾ ರ‍್ಯಾಲಿಯಲ್ಲಿ ಖಾಲಿ ಹಾಳೆಗಳಿರುವ ಸಂವಿಧಾನದ ಪ್ರತಿಗಳನ್ನು ಹಂಚಲಾಗಿದೆ. ಮಹಾರಾಷ್ಟ್ರ ಬಿಜೆಪಿ ಘಟಕವು ಖಾಲಿಹಾಳೆಗಳ ಸಂವಿಧಾನ ಪ್ರತಿಗಳ ದೃಷ್ಯಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದು, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದಿರುವ ಸಂವಿಧಾನವನ್ನು ಕಾಂಗ್ರೆಸ್​ ಅಳಿಸಿ, ಹೊಸದಾಗಿ ಬರೆಯಲು ಹೊರಟಿದೆ. ಅದಕ್ಕಾಗಿ ಮಹಾರಾಷ್ಟ್ರದ ಜನರಿಗೆ ಖಾಲಿ ಹಾಳೆಗಳ ಸಂವಿಧಾನ ಪ್ರತಿಗಳನ್ನು ರಾಹುಲ್ ಗಾಂಧಿ ವಿತರಿಸುತ್ತಿದ್ದಾರೆ ಎಂದು ಟೀಕಿಸಿದೆ.

ಕಾಂಗ್ರೆಸ್​ನ ಈ ಕ್ರಮ ಆಪಕ್ವ, ಸುಳ್ಳು ಹೇಳುವುದರಲ್ಲಿ ನಿಸ್ಸೀಮ ಎಂದು ಮತ್ತೊಮ್ಮೆ ಸಾಬೀತಾಗಿದ ಎಂದು ಬಿಜೆಪಿ ವಕ್ತಾರ ಅಮಿತ್ ಮಾಳವೀಯ ಟೀಕಿಸಿದ್ದಾರೆ. ಇದೇ ವೇಳೆ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸಹ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ್ದು, ರಾಹುಲ್ ಗಾಂಧಿಯವರು ಕೈಯಲ್ಲಿ ಕೆಂಪು ಪುಸ್ತಕವನ್ನು ಹಿಡಿದುಕೊಂಡು ನಗರ ನಕ್ಸಲರ ಬೆಂಬಲ ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಆ ಮೂಲಕ ಮಹಾರಾಷ್ಟ್ರದಲ್ಲಿ ಅರಾಜಕತೆ ಸೃಷ್ಟಿಸಲು ಪ್ರಯತ್ನಿಸಿದ್ದಾರೆ, ತಾವು ಸಂವಿಧಾನ ರಕ್ಷಕರು ಎಂದು ತೋರಿಸಿಕೊಳ್ಳಲು ಹೋಗಿ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್​ ಪ್ರಮುಖರು ತಮ್ಮ ನೈಜ ಬಣ್ಣವನ್ನು ಅನಾವರಣ ಮಾಡಿಕೊಂಡಿದ್ದಾರೆ ಎಂದು ದೇವೇಂದ್ರ ಫಡ್ನವೀಸ್ ಆರೋಪಿಸಿದ್ದಾರೆ.

ಇದಕ್ಕೆ ತಿರುಗೇಟು ನೀಡಿರುವ ಮಹಾರಾಷ್ಟ್ರ ಕಾಂಗ್ರೆಸ್ ಘಟಕವು. ಕೇಸರಿ ಪಕ್ಷವು ಸಂವಿಧಾನ ವಿರೋಧಿಯಾಗಿದೆ. ಬಿಜೆಪಿ ಮತ್ತು ಆರ್ ಎಸ್ ಎಸ್ ಸಂವಿಧಾನದ ಪರಮ ಶತ್ರುಗಳು. ತಮ್ಮ ತಪ್ಪನ್ನು ಮರೆಮಾಚಲು ಬಿಜೆಪಿ ಈ ರೀತಿ ಅಪಪ್ರಚಾರ ಮಾಡುತ್ತಿದೆ ಎಂದು ಕಾಂಗ್ರೆಸ್ ವಕ್ತಾರರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments