Wednesday, August 27, 2025
Google search engine
HomeUncategorizedಕೆರೆಯಲ್ಲಿ ನಾಪತ್ತೆಯಾಗಿದ್ದ ಮಕ್ಕಳಿಬ್ಬರ ಶವ ಪತ್ತೆ: ಸ್ಥಳದಲ್ಲಿ ಮುಗಿಲು ಮುಟ್ಟಿದ ತಾಯಿಯ ಆಕ್ರಂದನ

ಕೆರೆಯಲ್ಲಿ ನಾಪತ್ತೆಯಾಗಿದ್ದ ಮಕ್ಕಳಿಬ್ಬರ ಶವ ಪತ್ತೆ: ಸ್ಥಳದಲ್ಲಿ ಮುಗಿಲು ಮುಟ್ಟಿದ ತಾಯಿಯ ಆಕ್ರಂದನ

ಬೆಂಗಳೂರು: ನೆನ್ನೆ ಸಂಜೆ ಕೆರೆಯಲ್ಲಿ ನೀರು ತರಲು ಹೋಗಿ ಕಾಣೆಯಾಗಿದ್ದ ಮಕ್ಕಳಿಬ್ಬರ ಶವ ಪತ್ತೆಯಾಗಿದೆ ಎಂದು  ಮಾಹಿತಿ ದೊರೆತಿದ್ದು. ಕೆಂಗೇರಿ ಬಳಿಯಲ್ಲಿರುವ ಗೊರುರು ಕೆರೆಯಿಂದ ಮಕ್ಕಳ ಮೃತದೇಹವನ್ನು ಹೊರತೆಗೆಯಲಾಗಿದೆ.

ಇಂದು ಬೆಳಿಗ್ಗೆ 8 ಗಂಟೆಯಿಂದ ಶೋಧಕಾರ್ಯ ಆರಂಭಿಸಿದ್ದ ರಕ್ಷಣಾ ಸಿಬ್ದಂದಿ ಬೆಳಿಗ್ಗೆ 11 ಗಂಟೆ ಸಮಯಕ್ಕೆ13 ವರ್ಷದ  ಜಾನ್ ಸೀನನ ದೇಹವನ್ನು ಹೊರತೆಗೆದಿದ್ದರು. ತಂಗಿ ಮಹಲಕ್ಷ್ಮಿಯ ದೇಹಕ್ಕಾಗಿ ನಿರಂತರವಾಗಿ ಶೋಧಕಾರ್ಯ ನಡೆಸಿದ ಸಿಬ್ಬಂದಿಗೆ ಮಧ್ಯಾಹ್ನ 4 ಗಂಟೆಗೆ ಮಹಲಕ್ಷ್ಮಿಯ ದೇಹವು ಪತ್ತೆಯಾಗಿದೆ.

ಮಕ್ಕಳ ಮೃತ ದೇಹವನ್ನು ನೋಡಿದ ತಾಯಿಯ ಆಕ್ರಂದನ ಮುಗಿಲು ಮುಟ್ಟಿದ್ದು. ತಾನು ಹೆತ್ತು ಹೊತ್ತು ಸಾಕಿದ ಮಕ್ಕಳ ಮೃತದೇಹವನ್ನು ನೋಡಲಾಗದೆ ಗೋಳಾಡುತ್ತಿರುವ ತಾಯಿಯನ್ನು ನೋಡಿದವರ ಕರುಳು ಚುರ್ ಎನ್ನುವಂತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments