Monday, September 15, 2025
HomeUncategorizedಸಂಕಲ್ಪ ಸಮಾವೇಶ ಬ್ಯಾನರ್ ನಲ್ಲಿ ವಿನಯ ಕುಲಕರ್ಣಿ ಫೋಟೋ ಮಾಯ..!

ಸಂಕಲ್ಪ ಸಮಾವೇಶ ಬ್ಯಾನರ್ ನಲ್ಲಿ ವಿನಯ ಕುಲಕರ್ಣಿ ಫೋಟೋ ಮಾಯ..!

ಹುಬ್ಬಳ್ಳಿ: ಕೈ ಪಾಳೆಯದಲ್ಲಿ ಒಂದಿಲ್ಲೊಂದು ರೀತಿಯಲ್ಲಿ ಹಗ್ಗಜಗ್ಗಾಟ, ಮುಸುಕಿನ ಗುದ್ದಾಟಗಳು ನಡೆಯುತ್ತಿವೆ. ಈಗ ಬೆಳಗಾವಿ ವಿಭಾಗದ ಸಂಕಲ್ಪ ಸಮಾವೇಶದಲ್ಲಿ ಅಂತಹುದೇ ಒಂದು ಸನ್ನಿವೇಶ ಬೆಳಕಿಗೆ ಬಂದಿದೆ.

ಕೈ ಪಾಳೆಯದಲ್ಲಿ ಸಕ್ರಿಯ ರಾಜಕಾರಣ ಮಾಡುವ ಮೂಲಕ ಶಾಸಕರಾಗಿ ಸಚಿವರಾಗಿದ್ದ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನೇ ಕಾಂಗ್ರೆಸ್ ಪಕ್ಷ ಮರೆತಿದ್ದು, ವಿನಯ ಕುಲಕರ್ಣಿ ಬೆಂಬಲಿಗರಲ್ಲಿ ಸಾಕಷ್ಟು ಅಸಮಾಧಾನಕ್ಕೆ ಕಾರಣವಾಗಿದೆ.

ಹುಬ್ಬಳ್ಳಿಯ ಖಾಸಗಿ ಹೊಟೇಲನಲ್ಲಿ ನಡೆಯುತ್ತಿರುವ ಬೆಳಗಾವಿ ವಿಭಾಗಮಟ್ಟದ ಸಂಕಲ್ಪ ಸಮಾವೇಶದ ಭಿತ್ತಿ ಪತ್ರಗಳಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿಯವರ ಭಾವಚಿತ್ರ ಕಡೆಗಣನೆಯಾಗಿದೆ. ಧಾರವಾಡ ಗ್ರಾಮೀಣ ಕ್ಷೇತ್ರದ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿದೆ.

ಕಳೆದ ನಾಲ್ಕೈದು ದಿನಗಳಿಂದ ಸಂಕಲ್ಪ ಸಮಾವೇಶಕ್ಕೆ ತಯಾರಿ ನಡೆಸಲಾಗುತ್ತಿದ್ದು, ಬಹುತೇಕ ಬ್ಯಾನರ್ ಬಂಟಿಂಗ್ಸ್ ಗಳಲ್ಲಿ ವಿನಯ ಕುಲಕರ್ಣಿಯವರ ಭಾವಚಿತ್ರವನ್ನ ಕೈ ಬಿಡಲಾಗಿದೆ. ಬಿಜೆಪಿ ಜಿಲ್ಲಾ ಪಂಚಾಯತಿ ಸದಸ್ಯ ಯೋಗೇಶಗೌಡ  ಕೊಲೆ ಪ್ರಕರಣದಲ್ಲಿ ನವೆಂಬರ್ ಐದರಂದು ಬಂಧಿತರಾಗಿರುವ ಮಾಜಿ ಸಚಿವ ವಿನಯ್ ಕುಲಕರ್ಣಿ ಭಾವಚಿತ್ರ ಕಡೆಗಣನೆಗೆ ಅವರ ಅಭಿಮಾನಿಗಳು ತೀವ್ರ ಅಸಮಾಧಾನ ಉಂಟಾಗಿದೆ. ವಿನಯ ಕುಲಕರ್ಣಿ  ಜೈಲುಪಾಲಾಗಿರುವರಿಂದ ಫೋಟೋ ಹಾಕಿದ್ರೆ ಪಕ್ಷದ ಸಂಘಟನೆ ಮೇಲೆ ಪ್ರಭಾವ ಬೀರುವ ಕಾರಣದಿಂದ ಕೈಬಿಡಲಾಗಿದೆ ಎನ್ನಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments