Saturday, August 23, 2025
Google search engine
HomeUncategorizedಖಾಸಗಿ ಬಸ್ ಮಾಲೀಕರಿಂದ KSRTC ವಿರುದ್ಧ ಪ್ರತಿಭಟನೆ !

ಖಾಸಗಿ ಬಸ್ ಮಾಲೀಕರಿಂದ KSRTC ವಿರುದ್ಧ ಪ್ರತಿಭಟನೆ !

ಶಿವಮೊಗ್ಗ : ಅನಧಿಕೃತವಾಗಿ ಪರವಾನಿಗೆಯಿಲ್ಲದೆ ಸಂಚರಿಸುತ್ತಿರುವ KSTRC ಬಸ್ಸುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಸಾಗರ ಪ್ರಾಂತ್ಯ ಖಾಸಗಿ ಬಸ್ ಮಾಲೀಕರು ಪ್ರತಿಭಟನೆ ನಡೆಸಿದ್ದಾರೆ. ಸಾಗರ ಪಟ್ಟಣದ ಹಳೆ ಬಸ್ ನಿಲ್ದಾಣದ ವೃತ್ತದಲ್ಲಿ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡಸಿದ ಬಳಿಕ ಮೆರವಣಿಗೆ ಮೂಲಕ ಉಪ ವಿಭಾಗಾಧಿಕಾರಿಗಳ ಕಛೇರಿಗೆ ತಲುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.

ಪರವಾನಗಿ ಇದ್ದ ಕಡೆ KSRTC ಬಸ್ ಓಡಾಡಲು ನಮ್ಮದೇನು ಅಭ್ಯಂತರ ಇಲ್ಲ. ಆದರೆ ಖಾಸಗಿ ಬಸ್ ಓಡಾಡುವ ಲೈನ್‌ನಲ್ಲೂ ಸರ್ಕಾರಿ ಬಸ್ ಓಡಿಸಲಾಗುತ್ತಿದೆ. ಸರ್ಕಾರಿ ಬಸ್ ಚಾಲಕರ ನಿರ್ವಾಹಕರ ಧೋರಣೆಯಿಂದ ನಾವು ಸಾಕಷ್ಟು ನಷ್ಟ ಅನುಭವಿಸುತ್ತಿದ್ದು, ನಾವು ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ ಎಂದು ಅಳಲು ತೋಡಿಕೊಂಡಿದ್ದರೆ.

ಇದನ್ನೂ ಓದಿ : ಪುಟ್ಟಕಂದಮ್ಮಗಳ ಜೊತೆ ಕಾಲುವೆಗೆ ಹಾರಿದ ತಾಯಿ : ಮಕ್ಕಳಿಬ್ಬರ ಸಾ*ವು, ತಾಯಿಯ ರಕ್ಷಣೆ !

ಇಂದು ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಮನವಿ ಮಾಡಲಾಗಿದೆ, 15 ದಿನಗಳ ಬಳಿಕ ನಮ್ಮ ಸಮಸ್ಯೆ ಸರಿಪಡಿಸದೆ ಹೋದಲ್ಲಿ ಕುಟುಂಬ ಸಮೇತ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗ ಅಹೋರಾತ್ರಿ ಧರಣಿ ಸತ್ಯಾಗ್ರಹ ನಡೆಸುವ ಮೂಲಕ ರಾಷ್ಟ್ರಪತಿಗಳಿಗೆ ದಯಾಮರಣಕ್ಕೆ ಅವಕಾಶ ಕೇಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments