Sunday, September 14, 2025
HomeUncategorizedRCB ಅಭಿಮಾನಿಗಳಿಗೆ ಮತ್ತೊಂದು ಆಘಾತ : ಮ್ಯಾನೇಜ್​ಮೆಂಟ್​ನಿಂದ ಹಿಂದಿ ಭಾಷೆಯಲ್ಲಿ X​ ಅಕೌಂಟ್​ ಓಪನ್​

RCB ಅಭಿಮಾನಿಗಳಿಗೆ ಮತ್ತೊಂದು ಆಘಾತ : ಮ್ಯಾನೇಜ್​ಮೆಂಟ್​ನಿಂದ ಹಿಂದಿ ಭಾಷೆಯಲ್ಲಿ X​ ಅಕೌಂಟ್​ ಓಪನ್​

ಬೆಂಗಳೂರು: ಕನ್ನಡದ ಆಟಗಾರರನ್ನು ನಿರ್ಲಕ್ಷಿಸಿದ RCB ತಂಡ ಈಗ ಮತ್ತೊಂದು ಎಡವಟ್ಟು ಮಾಡಿಕೊಂಡಿದ್ದು. ಹಿಂದಿ ಭಾಷೆಯಲ್ಲಿ ಟ್ಟಿಟರ್​(x) ಅಕೌಂಟ್​ ಓಪನ್​ ಮಾಡಿದೆ. ಇದರಿಂದ Rcb ಅಭಿಮಾನಿಗಳು ಅಕ್ರೋಶ ವ್ಯಕ್ತ ಪಡಿಸಿದ್ದು. ತಕ್ಷಣವೇ ಹಿಂದಿ ಭಾಷೆಯಲ್ಲಿನ ಅಕೌಂಟ್​ನ್ನು ಡಿಲಿಟ್​ ಮಾಡುವಂತೆ ಒತ್ತಾಯಿಸಿದ್ದಾರೆ.

ಕೆಎಲ್ ರಾಹುಲ್, ಪ್ರಸಿದ್ಧ ಕೃಷ್ಣ, ಶ್ರೇಯಸ್ ಗೋಪಾಲ್, ಅಭಿನವ್ ಮನೋಹರ್, ಮಾಯಾಂಕ್ ಅಗರ್ವಾಲ್ ಹೀಗೆ ಸಾಲು ಸಾಲು ಕನ್ನಡಿಗ ಆಟಗಾರರನ್ನು ಹರಾಜಿನ ವೇಳೆ ನಿರ್ಲಕ್ಷಿಸಿದ್ದಕ್ಕಾಗಿ ಆರ್ ಸಿಬಿ ವಿರುದ್ಧ ಈಗಾಗಲೇ ಕನ್ನಡಿಗರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಂಥದ್ದರಲ್ಲಿ ಫ್ರಾಂಟೈಸಿ ಮತ್ತೊಂದು ಎಡವಟ್ಟು ಮಾಡಿಕೊಂಡಿದೆ.

ಈಗಾಗಲೇ ಇಂಗ್ಲಿಷ್ ಮತ್ತು ಕನ್ನಡಗಳಲ್ಲಿ ಎಕ್ಸ್ ಖಾತೆ ಹೊಂದಿರುವ ಆರ್​ಸಿಬಿಯು ಭಾನುವಾರ ಹೊಸದಾಗಿ ಹಿಂದಿಯಲ್ಲಿ ಖಾತೆ ತೆರೆದಿದ್ದು. ಈಗಾಗಲೇ 2600 ಫಾಲೋವರ್ಸ್ ಇದಕ್ಕಿದ್ದಾರೆ. ಇದು ಈಗ ಭಾರೀ ಚರ್ಚೆಯ ವಸ್ತುವಾಗಿ ಬಿಟ್ಟಿದೆ. ಇದು ಕನ್ನಡಿಗರ ಮೇಲೆ ಹಿಂದಿ ಹೇರಿಕೆ ಎಂಬ ಅಭಿಪ್ರಾಯ ಕೇಳಿ ಬಂದಿದೆ.

ವಿವಾದದ ಬೆನ್ನಲ್ಲೆ ಸ್ಪಷ್ಟನೆ ನೀಡಿದ RCB ಮ್ಯಾನೇಜ್ ಮೆಂಟ್​ 

RCB ಮ್ಯಾನೇಜ್​​ಮೆಂಟ್​ ವಿರುದ್ದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿಯೆ ಎಚ್ಚೆತ್ತುಕೊಂಡಿರು ಆರ್​ಸಿಬಿ ಮ್ಯಾನೇಜ್​ಮೆಂಟ್​ ‘ಕೇವಲ ಹಿಂದಿ ಮಾತ್ರವಲ್ಲದೆ ಮತ್ತಷ್ಟು ಭಾಷೆಗಳಲ್ಲಿ ಎಕ್ಷ್​ ಅಕೌಂಟ್​ ತೆರೆಯುವುದಾಗಿ ಸ್ಪಷ್ಟನೆ ನೀಡಿದೆ. ಆದರೆ ಇದರಿಂದ ಮತ್ತಷ್ಟು ಕೆರೆಳಿದ ಆರ್​ಸಿಬಿ ಅಭಿಮಾನಿಗಳು, RCB ಮೇಲೆ ಮತ್ತಷ್ಟು ಕಿಡಿಕಾರಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments