Saturday, August 23, 2025
Google search engine
HomeUncategorizedಕಜ್ಜಾಯ ರುಚಿಗೆ ಚೆಫ್ ವಿಕಾಸ್ ಖನ್ನಾ ಪುಲ್ ಫಿದಾ!

ಕಜ್ಜಾಯ ರುಚಿಗೆ ಚೆಫ್ ವಿಕಾಸ್ ಖನ್ನಾ ಪುಲ್ ಫಿದಾ!

ಉಡುಪಿ : ಶ್ರೀ ವೆಂಕಟರಮಣ ದೇವಸ್ಥಾನದ ಪಂಚಕಜ್ಜಾಯ ರುಚಿಗೆ ಚೆಫ್ ವಿಕಾಸ್ ಖನ್ನಾ ಅವರು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಅಂತರಾಷ್ಟ್ರೀಯ ಚೆಫ್ ವಿಕಾಸ್ ಖನ್ನಾ ಅವರು  ಮಾಸ್ಟರ್ ಚೆಫ್ ಇಂಡಿಯಾ ಸ್ಪರ್ಧೆಗೆ ತೀರ್ಪುಗಾರರಾಗಿದ್ದಾರೆ. ಇದರ ಬೆನ್ನಲ್ಲೆ ವಿಕಾಸ್ ಖನ್ನಾ ಅವರು ಕಾರ್ಕಳದ ಶ್ರೀ ವೆಂಕಟರಮಣದೇವಸ್ಥಾನದಲ್ಲಿ ಪ್ರಸಾದವಾಗಿ ದೊರೆಯುತ್ತಿದ್ದ ಸಿಹಿ ಕಜ್ಜಾಯ (ಪಂಚ ಕಜ್ಜಾಯದ) ರುಚಿಗೆ ಪುಲ್ ಫಿದಾ ಅಗಿರುವುದಾಗಿ ಹೇಳಿದ್ದಾರೆ.

ಇದನ್ನು ಓದಿ : ರಸ್ತೆ ಬದಿ ನಿಂತಿದ್ದ ಲಾರಿಗೆ ಬಸ್ ಡಿಕ್ಕಿ ; ಇಬ್ಬರು ಸಾವು

ವಿಕಾಸ್ ಖನ್ನಾ ಅವರು ಉಡುಪಿ ಮಣಿಪಾಲದಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿ, ಬೇರೆ ಬೇರೆ ಪ್ರದೇಶಗಳ ಖಾದ್ಯ ವೈವಿದ್ಯಗಳ ತಿಳಿದು, ಅದನ್ನು ಕಲಿತುಕೊಳ್ಳುವ ಸಲುವಾಗಿ ಇಡೀ ಕರ್ನಾಟಕ ರಾಜ್ಯವನ್ನು ಸುತ್ತುವ ಮೂಲಕ ಅಧ್ಯಯನವನ್ನು ನಡೆಸಿದ್ದಾರೆ. ಬಳಿಕ ಭಾರತದ ಸ್ಟಾರ್ ಹೊಟೇಲ್​ಗಳಾದ ತಾಜ್, ವೆಲ್ ಕಮ್ ಗ್ರೂಪ್ ಹಾಗೂ ಲೀಲಾ ಗ್ರೂಪ್ ಜೊತೆಗೆ ಕೆಲಸ ನಿರ್ವಹಿಸುತ್ತಿದ್ದು, ಅಮೆರಿಕಾದಲ್ಲಿ ನೆಲೆಸಿರುವ ವಿಕಾಸ್ ಖನ್ನಾ.

ವಿಕಾಸ್ ಖನ್ನಾ ಅವರು ಹಲವು ರಾಷ್ಟ್ರಗಳಲ್ಲಿ ಸರಣಿ ಹೊಟೇಲ್ ಆರಂಭಿಸಿ, ಯಶಸ್ಸು ಕಂಡು ಪ್ರಖ್ಯಾತಿ ಪಡೆದು ಕೊಂಡಿದ್ದಾರೆ. ಕಾರ್ಕಳ ಪಡು ತಿರುಪತಿ ಖ್ಯಾತಿಯ ವೆಂಕಟರಮಣ ದೇವಸ್ಥಾನ ಪ್ರಸಾದ ರೂಪದ ಪಂಚಕಜ್ಜಾಯ ವಿಚಾರ ಇದೀಗ ದೇಶದಲ್ಲೆಡೆ ಸಂಚಲನಗೊಂಡಿದ್ದು, ಅಂತಾರಾಷ್ಟ್ರೀಯ ಕೀರ್ತಿ ಪಡೆದ ಬಳಿಕ ಮತ್ತೆ ಆ ಪಂಚ ಕಜ್ಜಾಯವನ್ನು ಚೀಫ್ ಚೆಫ್ ವಿಕಾಸ್ ಖನ್ನಾ ನೆನಪಿಸಿಕೊಂಡಿದ್ದಾರೆ.

ಈ ಹಿನ್ನೆಲೆ ವಿಕಾಸ್ ಖನ್ನಾ ಅವರು ಅವಲಕ್ಕಿ, ತುಪ್ಪ, ಗೇರುಬೀಜ, ಏಲಕ್ಕಿ, ಬೆಲ್ಲ, ಒಣ ದ್ರಾಕ್ಷಿ, ತೆಂಗಿನ‌ ತುರಿ ಇವುಗಳನ್ನು ಹದವಾಗಿ ಬೆರೆಸಿ ಆ ಸಿಹಿಕಜ್ಜಾಯವನ್ನು ಮಾಡುವುದನ್ನು ವಿಡಿಯೋದಲ್ಲಿ ಪ್ರಾತ್ಯಕ್ಷಿಕೆ ಮೂಲಕ ಪ್ರಯತ್ನ ಮಾಡಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments