Wednesday, September 17, 2025
HomeUncategorizedಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಿಖಿಲ್ ಕುಮಾರ್ ಅನಿರೀಕ್ಷಿತ ಭೇಟಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ನಿಖಿಲ್ ಕುಮಾರ್ ಅನಿರೀಕ್ಷಿತ ಭೇಟಿ

ಬೆಂಗಳೂರು : ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಮೇರಿಕ ಪ್ರವಾಸ ಮುಗಿಸಿ ಇತ್ತೀಚಿಗಷ್ಟೇ ಬಂದಿದ್ದು ವಿದೇಶದಿಂದ ಬಂದ ನಂತರ ನಟ ನಿಖಿಲ್ ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ನಟ ನಿಖಿಲ್ ಕುಮಾರ್ ಅವರ ಹೊಸ ಸಿನಿಮಾದ ಚಿತ್ರೀಕರಣ ನೆಡೆಯುತ್ತಿದ್ದು, ಸಿನಿಮಾ ಸೆಟ್ ಗೆ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಭೇಟಿಕೊಟ್ಟಿದ್ದಾರೆ.

ಬಹಳ ದಿನಗಳ ನಂತ್ರ ನಿಖಿಲ್ ಹಾಗೂ ಶಿವಣ್ಣ ಭೇಟಿ ಮಾಡಿದ್ದು ಒಂದಿಷ್ಟು ಸಮಯ ಒಟ್ಟಿಗೆ ಕಾಲ ಕಳೆದಿದ್ದಾರೆ. ಸಿನಿಮಾ ವಿಚಾರ ಹೊರೆತುಪಡಿಸಿ ಒಂದಿಷ್ಟು ವಯಕ್ತಿಕ ವಿಚಾರವಾಗಿಯೂ ಶಿವಣ್ಣ ಹಾಗೂ ನಿಖಿಲ್ ಚರ್ಚೆ ಮಾಡಿದ್ರು. ಇದೇ ಸಮಯದಲ್ಲಿ ಲೈಕಾ ಸಂಸ್ಥೆ ನಿರ್ಮಾಣ ಮಾಡ್ತಿರೋ ಸಿನಿಮಾ ಬಗ್ಗೆಯೂ ಶಿವಣ್ಣ ಮಾಹಿತಿ ಪಡೆದುಕೊಂಡರು.

ಇದನ್ನೂ ಓದಿ: ಡೇಟ್​ ಗೆ ಸಹಕರಿಸಿದರೇ ಮಾತ್ರ ಸಾಲ ಬಿಡುಗಡೆ: ಸಿಬ್ಬಂದಿಗೆ ಮಹಿಳೆ ಚಪ್ಪಲಿ ಏಟು!

ನಿಖಿಲ್ ಅವ್ರ ಸಿನಿಮಾದ ಚಿತ್ರೀಕರಣ ಹಳೆ ಕಟ್ಟಡ ಒಂದರ ಮೂರನೇ ಮಹಡಿಯಲ್ಲಿ ನಡೆಯುತ್ತಿತ್ತು ಲಿಫ್ಟ್ ಇಲ್ಲದ ಕಾರಣ ನಿಖೀಲ್ ಭೇಟಿ ಮಾಡಲು ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ಮೆಟ್ಟಿಲು ಹತ್ತಿಕೊಂಡೇ ಹೋಗಿ ನಿಖಿಲ್ ಅವ್ರನ್ನ ಭೇಟಿ ಮಾಡಿ ಹೊಸ ಸಿನಿಮಾಗೆ ಶುಭಕೋರಿದರು. ಪ್ರೀತಿಯಿಂದ ತಮ್ಮನ್ನ ನೋಡಲು ಬಂದ ಶಿವಣ್ಣ ಹಾಗೂ ಗೀತಾ ಶಿವರಾಜ್ ಕುಮಾರ್ ಅವರನ್ನು ನಿಖಿಲ್ ಕೊನೆಯಲ್ಲಿ ಕಾರ್ ವರೆಗೂ ಹೋಗಿ ಬಿಟ್ಟುಬಂದರು.

 

ಅಣ್ಣಾವ್ರ ಕುಟುಂಬ ಹಾಗೂ ದೊಡ್ಡ ಗೌಡರ ಕುಟುಂಬ ಈಗಿನಿಂದ ಮಾತ್ರವಲ್ಲ ಹಿಂದಿನಿಂದಲೂ ಅನ್ಯೂನ್ಯವಾಗಿದ್ದಾರೆ. ಅದರಲ್ಲೂ ಪುನೀತ್ ರಾಜ್ ಕುಮಾರ್ ಅವ್ರಿಗೆ ನಿಖಿಲ್ ಡೆಡಿಕೇಷನ್ ಬಗ್ಗೆ ತುಂಬಾ ಪ್ರೀತಿ ಇತ್ತು. ಈಗ ಶಿವಣ್ಣ ಹಾಗೂ ನಿಖಿಲ್ ಭೇಟಿ ಎರಡೂ ಕುಟುಂಬದ ಬಾಂದವ್ಯವನ್ನ ನೆನಪಿಸುತ್ತಿದೆ.

ಇನ್ನು, ನಿಖಿಲ್ ಅಭಿನಯ ಮಾಡುತ್ತಿರೋ ಲೈಕಾ ಸಂಸ್ಥೆ ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಇನ್ನು ಟೈಟಲ್ ಫಿಕ್ಸ್ ಆಗಬೇಕಿದೆ. ಚಿತ್ರವನ್ನ ಲಕ್ಷ್ಮಣ್ ನಿರ್ದೇಶನ ಮಾಡುತ್ತಿದ್ದು ಚಿತ್ರೀಕರಣದ ಮೊದಲ ಶೆಡ್ಯೂಲ್ ಇತ್ತೀಚಿಗಷ್ಟೇ ಶುರುವಾಗಿದೆ. ಚಿತ್ರಕ್ಕೆ ಯುಕ್ತಿ ತರೇಜಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರದ ಮೂಲಕ ಲೈಕಾ ಸಂಸ್ಥೆ ಮೊದಲ ಬಾರಿಗೆ ಕನ್ನಡ ಇಂಡಸ್ಟ್ರಿಯಲ್ಲಿ ಮೊದಲ ಸಿನಿಮಾ ನಿರ್ಮಾಣ ಮಾಡುತ್ತಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments