Sunday, August 24, 2025
Google search engine
HomeUncategorizedಆಂಧ್ರ ಮೂಲದ ಕತರ್ನಾಕ್​ ಸೀರೆ ಕಳ್ಳರ ಬಂಧನ! ಲಕ್ಷಾಂತರ ಮೌಲ್ಯದ ಸೀರೆ ವಶಕ್ಕೆ

ಆಂಧ್ರ ಮೂಲದ ಕತರ್ನಾಕ್​ ಸೀರೆ ಕಳ್ಳರ ಬಂಧನ! ಲಕ್ಷಾಂತರ ಮೌಲ್ಯದ ಸೀರೆ ವಶಕ್ಕೆ

ಬೆಂಗಳೂರು : ಮದುವೆ, ಸಮಾರಂಭಗಳ ನೆಪದಲ್ಲಿ ಶೋರೂಂಗಳಲ್ಲಿ ಲಕ್ಷಾಂತರ ಮೌಲ್ಯದ  ಸೀರೆಗಳನ್ನು ಕದಿಯುತ್ತಿದ್ದ ಆಂದ್ರ ಮೂಲದ ಕತರ್ನಾಕ್​ ಗ್ಯಾಂಗ್​ನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುನೀತಾ, ಮಟ್ಟಪತಿ ರಾಣಿ, ರತ್ನವೇಲು, ತಣ್ಣೀರ್ ಶಿವಕುಮಾರ್, ಶಿವರಾಮ್ ಪ್ರಸಾದ್, ವೆಂಕಟೇಶ್ ಮತ್ತು ಭರತ್ ಬಂಧಿತ ಆರೋಪಿಗಳು. ನಗರದಲ್ಲಿರುವ ದೊಡ್ಡ ದೊಡ್ಡ ಸ್ಯಾರಿ ಶೋರೂಂಗಳನ್ನು  ಟಾರ್ಗೆಟ್​ ಮಾಡಿಕೊಂಡು ಎಂಟ್ರಿ ಕೊಡುತ್ತಿದ್ದ ಇವರು ಮದುವೆ ಸಮಾರಂಭಗಳ ನೆಪದಲ್ಲಿ ಸೀರೆಗಳನ್ನು ಎಗರಿಸಿ ಕ್ಷಣಮಾತ್ರದಲ್ಲಿ ಪರಾರಿಯಾಗುತ್ತಿದ್ದರು.

ಇದನ್ನೂ ಓದಿ: ನೆಹರು ತಾರಾಲಯದಲ್ಲಿ ಚಂದ್ರಯಾನ 3 ವೀಕ್ಷಣೆಗೆ ಅವಕಾಶ!

ಗ್ರಾಹಕರ ಸೋಗಿನಲ್ಲಿ ಶೋರೂಂಗೆ ಹೋಗುತ್ತಿದ್ದ ಮೂವರು ಮಹಿಳೆಯರು, ಮೂವರು ಪುರುಷರು. ಮನೆಯಲ್ಲಿ ಮದುವೆ ಕಾರ್ಯ ಇದೆ ಗ್ರ್ಯಾಂಡ್​ ರಿಚ್ ಸ್ಯಾರಿ ತೋರಿಸಿ ಎಂದು ಹೇಳಿ ಸುಮಾರು ಒಂದು ಒಂದೂವರೆ ಲಕ್ಷ ಬೆಲೆಬಾಳುವ ಸೀರೆಗಳನ್ನ ತೆಗೆಸುತ್ತಿದ್ದರು  ಜೊತೆಗೆ ಸುಮಾರು 50-60 ಸೀರೆಗಳನ್ನ ಒಮ್ಮೆಲೆ ತೆಗೆಸಿ ನೋಡಲು ಯತ್ನಿಸುತ್ತಿದ್ದರು.

ಈ ವೇಳೆ ಗುಂಪು ಗುಂಪಾಗಿ ನಿಂತುಕೊಂಡು ಲಕ್ಷ ಲಕ್ಷ ಬೆಲೆಬಾಳುವ ಸೀರೆಗಳನ್ನ ಎಗರಿಸುತ್ತಿದ್ದರು. ಆಂಧ್ರದ ಗುಂಟೂರು ಮೂಲದ ಸೀರೆಕಳ್ಳರ ವಿರುದ್ದ ನಗರದ ಆಶೋಕನಗರ ಮತ್ತು ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಎರಡು ಪ್ರಕರಣ ದಾಖಲಾಗಿದ್ದವು.

ಪ್ರಕರಣ ದಾಖಲಿಸಿ ಆರೋಪಿಗಳಿಗೆ ಬಲೆ ಬೀಸಿದ ಹೈಗ್ರೌಂಡ್ಸ್  ಪೊಲೀಸರು ಸೀರೆ ಶೋರೂಂ ಸಿಸಿಟಿವಿ ಪರಿಶೀಲನೆ ನಡೆಸಿ ಏಳು ಮಂದಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳಿಂದ ಲಕ್ಷಾಂತರ ಮೌಲ್ಯದ ಸಿಲ್ಕ್ ಸೀರೆಗಳು ಜಪ್ತಿ ಮಾಡಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ವಿಚಾರಣೆ ಮುಂದುವರೆಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments