Monday, August 25, 2025
Google search engine
HomeUncategorizedಮೋದಿ ಅವ್ರು ಜನರ ಕನಸು ನನಸಾಗಿಸುತ್ತಿದ್ದಾರೆ : ನಿರ್ಮಲಾ ಸೀತಾರಾಮನ್

ಮೋದಿ ಅವ್ರು ಜನರ ಕನಸು ನನಸಾಗಿಸುತ್ತಿದ್ದಾರೆ : ನಿರ್ಮಲಾ ಸೀತಾರಾಮನ್

ನವದೆಹಲಿ : ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರ ಕನಸುಗಳನ್ನು ನನಸಾಗಿಸುತ್ತಿದ್ದಾರೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

ಅವಿಶ್ವಾಸ ನಿರ್ಣಯದ ಮೇಲೆ ಲೋಕಸಭೆಯಲ್ಲಿ ಮಾತನಾಡಿದ ಅವರು, ಯುಪಿಎ ಅವಧಿಯಲ್ಲಿ ಭಾರತವನ್ನು ದುರ್ಬಲ ಆರ್ಥಿಕತೆ ಎಂದು ಘೋಷಿಸಲಾಗಿತ್ತು. ಇಂದು ಕೊರೊನಾದಂತಹ ಸಂಕಷ್ಟದ ನಡುವೆಯೂ ಭಾರತ ವಿಶ್ವದ ಐದನೇ ಬಲಿಷ್ಠ ಆರ್ಥಿಕತೆಯಾಗಿ ಹೊರ ಹೊಮ್ಮಿದೆ. ಇದಕ್ಕೆ ಮೋದಿ ಸರ್ಕಾರದ ನೀತಿಗಳೇ ಕಾರಣ ಎಂದು ತಿಳಿಸಿದರು.

ನಮ್ಮ ಸರ್ಕಾರದ ನೀತಿಗಳಿಂದಾಗಿ ಆರ್ಥಿಕತೆ ಏರಿಕೆಯಾಗಿ ಅಭಿವೃದ್ಧಿಯಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ಯೋಜನೆಗಳನ್ನು ನೀಡಲಾಗುವುದು, ಮಾಡಲಾಗುವುದು ಎನ್ನಲಾಗುತ್ತಿತ್ತು. ನಮ್ಮ ಸರ್ಕಾರದ ಅವಧಿಯಲ್ಲಿ ಯೋಜನೆಗಳನ್ನು ನೀಡಿದೆ, ಮಾಡಿದೆ ಎನ್ನಲಾಗುತ್ತಿದೆ. ನೀವು ಜನರಿಗೆ ಕನಸುಗಳನ್ನು ತೋರಿಸುತ್ತೀರಿ. ನಾವು ಅವರ ಕನಸುಗಳನ್ನು ನನಸಾಗಿಸುತ್ತಿದ್ದೇವೆ ಎಂದು ಹೇಳಿದರು.

ಯುಪಿಎ ಹೆಸರು ಬದಲಾಯಿಸುವ ಅಗತ್ಯ ಏನಿತ್ತು?

2014 ಮತ್ತು 2019ರಲ್ಲಿ ಯುಪಿಎ ವಿರುದ್ಧ ಜನರು ಅವಿಶ್ವಾಸ ಮಂಡಿಸಿ ಯುಪಿಎ ಸೋಲಿಸಿದರು. 2024ರಲ್ಲೂ ಇದೇ ಪರಿಸ್ಥಿತಿ ಇರಲಿದೆ. ಯುಪಿಎ ಹೆಸರನ್ನು ಬದಲಾಯಿಸುವ ಅಗತ್ಯ ಏನಿತ್ತು? ಅದು ಒಂದು ಅದ್ಭುತವಾದ ಏಕತೆ. ಅವರು ಪರಸ್ಪರ ವಿರುದ್ಧ ಅಥವಾ ಒಟ್ಟಿಗೆ ಹೋರಾಡುತ್ತಿದ್ದಾರೆ ಅವರನ್ನು ಅರ್ಥಮಾಡಿಕೊಳ್ಳುವುದು ಕಷ್ಟ ಎಂದು ನಿರ್ಮಲಾ ಸೀತಾರಾಮನ್ ಕುಟುಕಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments