Tuesday, August 26, 2025
Google search engine
HomeUncategorizedತೋತಾಪುರಿ ಪ್ರೀ ರಿಲೀಸ್ ಕೂಟದಲ್ಲಿ ಜಗ್ಗಣ್ಣ ಗೆಳಯರ ಬಳಗ 

ತೋತಾಪುರಿ ಪ್ರೀ ರಿಲೀಸ್ ಕೂಟದಲ್ಲಿ ಜಗ್ಗಣ್ಣ ಗೆಳಯರ ಬಳಗ 

ನವರಸ ನಾಯಕ ಜಗ್ಗೇಶ್ ರಾಜ್ಯಸಭಾ ಸದಸ್ಯರಾದ ಬಳಿಕ ತೋತಾಪುರಿ  ತೆರೆಗಪ್ಪಳಿಸುತ್ತಿದೆ. ಸಂವಿಧಾನದಡಿ ಬದುಕೋ ಎಲ್ರೂ ಅಣ್ಣ ತಮ್ಮಂದಿರು, ಬಂಧು ಬಾಂಧವರು ಎಂದ ಜಗ್ಗಣ್ಣನಿಗೆ ಡಾಲಿ, ಸುಮನ್ ರಂಗನಾಥ್, ಅದಿತಿ ಸಾಥ್ ನೀಡಿದ್ರು. ಅವ್ರೆಲ್ಲಾ ಏನು ಹೇಳಿದ್ರು ಅನ್ನೋ ನಿಮ್ಮ ಕ್ಯೂರಿಯಾಸಿಟಿಗೆ ಉತ್ತರ ಇಲ್ಲಿದೆ ಓದಿ.

  • ಒಂದ್ಕಡೆ ಜಗ್ಗು- ಅದಿತಿ.. ಮತ್ತೊಂದ್ಕಡೆ ಡಾಲಿ- ಸುಮನ್
  • ನಿರ್ಮಾಪಕ ಸುರೇಶ್ ಪರ ನಿಂತ ಜಗ್ಗೇಶ್ ಖಡಕ್ ಮಾತು
  • ವಿಜಯ್ ಪ್ರಸಾದ್- ಸುಮನ್ ರಂಗನಾಥ್ ಜುಗಲ್​​​​​​ಬಂದಿ

ಸಿದ್ಲಿಂಗು, ನೀರ್ ದೋಸೆ ಡೈರೆಕ್ಟರ್ ವಿಜಯ್ ಪ್ರಸಾದ್ ನಿರ್ದೇಶನದ ತೋತಾಪುರಿ ಮಸ್ತ್ ಮನರಂಜನೆ ನೀಡೋಕೆ ಇದೇ ಸೆಪ್ಟೆಂಬರ್ 30ಕ್ಕೆ ತೆರೆಗಪ್ಪಳಿಸುತ್ತಿದೆ. ಜಗ್ಗೇಶ್, ಡಾಲಿ ಲೀಡ್ ನಲ್ಲಿ ಕಾಣಸಿಗೋ ಈ ಸಿನಿಮಾ ಬರೀ ಸಿನಿಮಾ ಅಲ್ಲ. ಭಾವೈಕ್ಯತೆಯ ಸಂದೇಶ ಸಾರುವ ಕಾದಂಬರಿ. ಕಾರಣ ಇಲ್ಲಿ ಪ್ರಸ್ತುತ ಸಮಾಜದ ಎಲ್ಲಾ ಮಜಲುಗಳನ್ನ ಪ್ರೇಕ್ಷಕರಿಗೆ ಮುಟ್ಟಿಸೋ ಮಹಾನ್ ಕಾರ್ಯ ಮಾಡಿದ್ದಾರೆ ಡೈರೆಕ್ಟರ್.

ಶಿವಲಿಂಗ, ಶ್ರಾವಣಿ ಸುಬ್ರಮಣ್ಯದಂತಹ ಹಿಟ್ ಸಿನಿಮಾಗಳನ್ನ ನೀಡಿರೋ ಕೆಎ ಸುರೇಶ್ ನಿರ್ಮಾಣದ ಈ ಚಿತ್ರ ಸಮಾಜಕ್ಕೆ ಗಟ್ಟಿ ಸಂದೇಶ ನೀಡಲಿದೆ. ಸಂಬಂಧಗಳು ಹಾಗೂ ಭಾವನೆಗಳ ಉತ್ಸವ ನಡೆಸಲಿರೋ ತೋತಾಪುರಿ, ಒಂದಷ್ಟು ಪೋಲಿ ಜೋಕ್ಸ್ ಜೊತೆ ಜನರ ತಲೆಗೆ ಕಲಿಕೆಯ ಬೀಜ ಬಿತ್ತಲಿದೆ. ಹಿಂದೂ, ಕ್ರೈಸ್ತ, ಮುಸಲ್ಮಾನ ನಾವೆಲ್ಲರೂ ಒಂದೇ. ಭಾರತೀಯರು ಅನ್ನೋದನ್ನ ಮನದಟ್ಟು ಮಾಡಲಿದೆ.

ಸಿನಿಮಾ ರಿಲೀಸ್ ಗೆ ದಿನಗಣನೆ ಶುರುವಾಗಿದ್ದು ಚಿತ್ರತಂಡ ಮಾಧ್ಯಮಗಳ ಮಜಂದೆ ಸಾಕಷ್ಟು ಮಾಹಿತಿ ಹಂಚಿಕೊಂಡಿತು.

ಒಟ್ಟಾರೆ.. ಕೆಜಿಎಫ್ ರೀತಿ ಎರಡೆರಡು ಭಾಗಗಳಲ್ಲಿ ರಂಜಿಸಲು ಬರ್ತಿರೋ ತೋತಾಪುರಿ ಬದುಕಿನ ಸಾರವನ್ನು ಸಾರಲಿದೆ. ಮೊದಲ ಭಾಗ ಇವ್ರ ಮಾತುಗಳಂತೆ ಸಖತ್ ಫನ್ ವಿತ್ ಎಮೋಷನ್ಸ್ ನಿಂದ ಕೂಡಿರಲಿದ್ದು, ಸೆಪ್ಟೆಂಬರ್ 30ಕ್ಕೆ ಬಾಕ್ಸ್ ಆಫೀಸ್ ಬ್ಯಾಂಗ್ ಮಾಡಲಿದೆ.

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಫಿಲ್ಮ್ ಬ್ಯೂರೋ ಹೆಡ್, ಪವರ್ ಟಿವಿ

RELATED ARTICLES
- Advertisment -
Google search engine

Most Popular

Recent Comments