Saturday, September 13, 2025
HomeUncategorizedನನಗೆ ಮಂಡ್ಯವೇ ಸಿಂಗಾಪೂರ್​: ಸುಮಲತಾ

ನನಗೆ ಮಂಡ್ಯವೇ ಸಿಂಗಾಪೂರ್​: ಸುಮಲತಾ

ಮಂಡ್ಯ: ನನಗೆ ಮಂಡ್ಯವೇ ಸಿಂಗಾಪೂರ್ ಅಂತ ಸುಮಲತಾ ಅಂಬರೀಶ್ ಹೇಳಿದ್ದಾರೆ. ಮಂಡ್ಯದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ತಮ್ಮ ಬೆಂಬಲಕ್ಕೆ ನಿಂತ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

“ಅಂಬರೀಶ್ ಹೆಸರು ಚುನಾವಣೆಗೆ ಸಂಬಂಧಿಸಿದ್ದಲ್ಲ. ಅದು ಜನರೊಂದಿಗೆ ಬೆರೆತುಕೊಂಡಿದೆ. ನನಗೆ ರಾಜಕೀಯ ಬೇಕಿಲ್ಲ. ರಾಜಕೀಯಕ್ಕೆ ಬರಲ್ಲ, ಜನರೊಂದಿಗೆ ನನ್ನ ಬಾಂಧವ್ಯ ಹೀಗೇ ಇರುತ್ತದೆ ಎಂದು ನಾನು ಹೇಳಿದ್ದೆ. ಆ ಸಂದರ್ಭ ಜನರೇ ನನ್ನ ಕೈಯಲ್ಲಿ ಅಧಿಕಾರವಿದ್ದರೆ ಇನ್ನಷ್ಟು ಕೆಲಸ ಮಾಡೋಕೆ ಸಾಧ್ಯ ಅಂದ್ರು. ಜನರೊಂದಿಗೆ ಇರೋದಕ್ಕೆ ರಾಜಕೀಯ ಒಂದು ದಾರಿ ಅಂತ ಹೇಳಿದ್ರು” ಎಂದು ಸುಮಲತಾ ಹೇಳಿದ್ದಾರೆ.

ಕ್ಷೇತ್ರದಲ್ಲಿ ಮಾಡುವ ಕೆಲಸಗಳ ಬಗ್ಗೆ ಮಾತನಾಡಿ, “ಮೈತ್ರಿ ಅಭ್ಯರ್ಥಿ ಜೊತೆ ಮಾತನಾಡಲು ಸಿದ್ಧಳಿದ್ದೆ. ಆದರೆ ಅವರು ಮಾತಾಡಲು ಸಿದ್ಧರಿರಲಿಲ್ಲ. ಚುನಾವಣೆಗಾಗಿ ಯಾರನ್ನೂ ಕನ್ವಿನ್ಸ್​ ಮಾಡೋದಿಲ್ಲ. ನಮ್ಮ ವಿಷನ್ ಏನಿದೆ ಅದನ್ನಿಟ್ಟುಕೊಂಡು ಕೆಲಸ ಮಾಡ್ತೀವಿ. ಇವರಾಗ್ಲೇ ಗೆದ್ದುಬಿಟ್ಟಿದ್ದಾರೆ ಅನ್ನೋ ದರ್ಪದಲ್ಲಿ ಮಾತಾಡ್ತಿದ್ದಾರೆ ಅನ್ನೋ ಮಾತು ನನಗೆ ಕೇಳಿಸ್ಬಾರ್ದು. ಅದಕ್ಕಾಗಿ ಎಲ್ಲವನ್ನೂ ನಿಧಾನವಾಗಿ ಮಾಡ್ತಿದ್ದೀವಿ. ನನಗೆ ಮಂಡ್ಯವೇ ಸಿಂಗಾಪೂರ್” ಎಂದಿದ್ದಾರೆ.

“ಚುನಾವಣೆಯ ಆರಂಭದಿಂದಲೂ ಹೇಳಿದ ಒಂದೂ ಮಾತನ್ನೂ ನಿಜ ಅಂತ ಸಾಬೀತುಪಡಿಸೋಕೆ ಅವರಿಗೆ ಸಾಧ್ಯವಾಗಿಲ್ಲ. ನನ್ನ ಹೆಸರಲ್ಲಿ ಮೂರು ಜನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ರು. ಅಭಿವೃದ್ಧಿ ವಿಚಾರ ಮಾತಾಡೋಕೆ ಅವಕಾಶವೇ ಸಿಗಲಿಲ್ಲ. ಅವರು ಆರಂಭದಿಂದ ಇಲ್ಲಿ ತನಕ ಬರೀ ಅಂಬರೀಶ್ ಅಂತ್ಯಕ್ರಿಯೆ ವಿಚಾರವನ್ನೇ ಮಾತಾಡಿದ್ರು. ಆಮೇಲೆ ಅವರೇ ಸುದ್ದಿಗೋಷ್ಠಿ ಮಾಡಿ ಸ್ಪಷ್ಟನೆ ಕೊಟ್ರು. ಯಾವಾಗ ಇಂಥ ವಿಚಾರವನ್ನೇ ಸುಳ್ಳು ಹೇಳಿದ್ರೋ ನಿವೇ ಆಲೋಚನೆ ಮಾಡಬೇಕು ಅವರ ಮಾತನ್ನು ನಂಬಬೇಕೋ ಬೇಡ್ವೋ” ಅಂತ ಪ್ರಶ್ನಿಸಿದ್ರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments