Thursday, September 11, 2025
HomeUncategorizedಈ ದೇಶ ಗಾಂಧಿ ಕುಟುಂಬ ಹೇಳಿದಂತೆ ನಡೆಯೋದಿಲ್ಲ : ತೇಜಸ್ವಿ ಸೂರ್ಯ

ಈ ದೇಶ ಗಾಂಧಿ ಕುಟುಂಬ ಹೇಳಿದಂತೆ ನಡೆಯೋದಿಲ್ಲ : ತೇಜಸ್ವಿ ಸೂರ್ಯ

ದಾವಣಗೆರೆ : ಒಂದು ಕಾಲದಲ್ಲಿ ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯಕ್ಕಾಗಿ ಕಾಂಗ್ರೆಸ್ ಹೋರಾಡಿತ್ತು ಎಂದು ಕಾಂಗ್ರೆಸ್‌ ವಿರುದ್ಧ ಸಂಸದ ತೇಜಸ್ವಿ ಸೂರ್ಯ ವಾಗ್ಧಾಳಿ ಮಾಡಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಂದು ಕಾಲದಲ್ಲಿ ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯ ಕ್ಕಾಗಿ ಕಾಂಗ್ರೆಸ್ ಹೋರಾಡಿತ್ತು. ಇದೀಗ ಯುವರಾಜನ ರಕ್ಷಣೆಗಾಗಿ ಕಾಂಗ್ರೆಡ್ ಹೋರಾಟ ನಡೆಸುತ್ತಿರುವುದು ದೌರ್ಭಾಗ್ಯ. ತನಿಖೆ ಆಗಬಾರದು ಅಂತಾ ಇಡಿ ಅಧಿಕಾರಿಗಳ ಮೇಲೆ ಬ್ಲಾಕ್ ಮೇಲ್ ಮಾಡೋದಕ್ಕೆ ಕಾಂಗ್ರೆಸ್‌ ಹೋರಾಟಕ್ಕೆ ಇಳಿದಿದೆ. ನ್ಯಾಯಾಂಗ ವ್ಯವಸ್ಥೆ ಮೇಲೆ ಭರವಸೆ ಇದ್ದಿದ್ದರೆ ಕಾಂಗ್ರೆಸ್‌ ತನಿಖೆ ಎದುರಿಸಬೇಕಿತ್ತು. ರಾಜಕೀಯ ಪ್ರೇರಿತ ಪ್ರಕರಣಗಳನ್ನ ಹಿಂದೆ ಕಾಂಗ್ರೆಸ್‌ ಬಿಜೆಪಿ ಮೇಲೆ ದಾಖಲಿಸುತ್ತಿತ್ತು ಎಂದರು.

ಅದಲ್ಲದೇ, ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಒಬ್ಬರೆ ಹೋಗಿ ಸತತ 10 ಗಂಟೆ ಕಾಲ ವಿಚಾರಣೆ ಎದುರಿಸಿದ್ದರು. ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಭ್ರಷ್ಟಾಚಾರ ಆಗಿರೋದು ಪ್ರಾಥಮಿಕ ಹಂತದಲ್ಲೆ ಕಂಡು ಬರ್ತಾ ಇದೆ. ಭ್ರಷ್ಟಾಚಾರ ಮಾಡಿಲ್ಲ ಅಂದ್ರೆ ತನಿಖೆಗೆ ಒಳಗಾಗಿ ಭ್ರಷ್ಟಾಚಾರ ಮಾಡಿಲ್ಲ ಅಂದ್ರೆ ಹೊರ ಬರಲಿ. ಭ್ರಷ್ಟಾಚಾರ ಮಾಡಿದ್ರೆ ಸಾಮಾನ್ಯರಂತೆ ಶಿಕ್ಷೆ ಅನುಭವಿಸಲಿ. ಈ ದೇಶ ಗಾಂಧಿ ಕುಟುಂಬ ಹೇಳಿದಂತೆ ನಡೆಯೋದಿಲ್ಲ. ಸಂವಿಧಾನದ ಪ್ರಕಾರ ನಡೆಯುತ್ತಿದೆ, ಸಂವಿಧಾನದ ಮುಂದೆ ಎಲ್ಲ ಸಮಾನರು ಈ ತನಿಖೆ ದಿಕ್ಕು ತಪ್ಪಿಸಲು ಸಾವಿರಾರು ಜನರನ್ನ ಬೀದಿಗೆ ಇಳಿಸಿ ಪ್ರತಿಭಟನೆ ಮಾಡಿಸುತ್ತಿದೆ ಎಂದು ದಾವಣಗೆರೆಯಲ್ಲಿ ರಾಷ್ಟ್ರೀಯ ಯುವಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.

RELATED ARTICLES
- Advertisment -
Google search engine

Most Popular

Recent Comments