Saturday, August 30, 2025
HomeUncategorizedದತ್ತಜಯಂತಿಗೆ ಚಾಲನೆ : ಸಿಟಿ. ರವಿ ಸೇರಿದಂತೆ ಅನೇಕ ಭಕ್ತಾಧಿಗಳಿಂದ ಮಾಲಾಧಾರಣೆ !

ದತ್ತಜಯಂತಿಗೆ ಚಾಲನೆ : ಸಿಟಿ. ರವಿ ಸೇರಿದಂತೆ ಅನೇಕ ಭಕ್ತಾಧಿಗಳಿಂದ ಮಾಲಾಧಾರಣೆ !

ಚಿಕ್ಕಮಗಳೂರು: ಇಂದಿನಿಂದ 9 ದಿನ ಕಾಫಿ ನಾಡಿನಲ್ಲಿ ಕೇಸರಿ ಕಲರವ ಕಾಣಬಹುದಾಗಿದ್ದು. ಇನಾಂ ದತ್ತಾತ್ರೇಯ ಪೀಠದಲ್ಲಿ ನಡೆಯಲಿರೋ ದತ್ತಜಯಂತಿಗೆ ಇಂದು ವಿಧ್ಯುಕ್ತವಾಗಿ ಚಾಲನೆ ಸಿಕ್ಕಿದೆ. ಮಾಲಾಧಾರಣೆ ಮಾಡೋ ಮೂಲಕ ದತ್ತ ಜಯಂತಿ ಚಾಲನೆ ದೊರಕಿದ್ದು. ಮಾಲೆ ಧಾರಣೆಯಾಗುತ್ತಿದ್ದಂತೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹೈಅಲರ್ಟ್​ ಘೋಷಿಸಿದ್ದಾರೆ ಎಂದು ತಿಳಿದು ಬಂದಿದೆ.

ಹೌದು ಕಾಫಿ ನಾಡು ಚಿಕ್ಕಮಗಳೂರು ತಾಲೂಕಿನ ಇನಾಂ ದತ್ತಾತ್ರೇಯ ಬಾಬಬುಡನ್ ಸ್ವಾಮಿ ದರ್ಗಾದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದಿಂದ ಡಿಸೆಂಬರ್ 12,13,14ರಂದು ದತ್ತಜಯಂತಿ ನಡೆಯಲಿದೆ. ಈ ದತ್ತಜಯಂತಿಗೆ ಇಂದು ವಿಧ್ಯುಕ್ತವಾಗಿ ಚಾಲನೆ ಸಿಕ್ಕಿದೆ. ನಗರ ಕಾಮಧೇನು ಮಹಾಗಣಪತಿ ದೇವಸ್ಥಾನದಲ್ಲಿ ದತ್ತಾತ್ರೇಯ ದೇವರ ಉತ್ಸವ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿ ನಂತ್ರ ಮಾಲಾಧಾರಣೆ ನಡೆಸಲಾಯ್ತು. ಎಂಎಲ್ಸಿ ಸಿ.ಟಿ.ರವಿ, ವಿಶ್ವಹಿಂದೂ ಪರಿಷತ್ ರಾಜ್ಯ ಕಾರ್ಯಕಾರಣಿ ಸಮಿತಿ ಸದಸ್ಯ ರಘು ಸಕಲೇಶಪುರ ಸೇರಿ ನೂರಾರು ಕಾರ್ಯಕರ್ತರು ಮಾಲಾಧಾರಣೆ ಮಾಡಿದ್ರು.

ದತ್ತ ಜಯಂತಿ ಹಿನ್ನಲೆ ಚಿಕ್ಕಮಗಳೂರಿನಲ್ಲಿ ಪೋಲಿಸ್​​ ಇಲಾಖೆ ಬಂದೋಬಸ್ತ್​ ಕೈಗೊಂಡಿದ್ದು. ಕೇರಳದಿಂದ ಕೂಡ ರ‍್ಯಾಪಿಡ್ ಆ್ಯಕ್ಷನ್​ ಪೋರ್ಸ್​ ಕರೆಸಿ ನಗರದಲ್ಲಿ ಬಂದೋಬಸ್ತ್​ ಕೈಗೊಳ್ಳಲಾಗಿದೆ ಎಂದು ಮಾಹಿತಿ ದೊರೆತಿದೆ. ಭದ್ರತಾ ಸಿಬ್ಬಂದಿಗಳು ನಗರದಲ್ಲಿ ಆಧುನಿಕ ಶಸ್ತ್ರಾಸ್ತವನ್ನು ಹಿಡಿದುಕೊಂಡು ನಗರದಲ್ಲಿ ಪಥಸಂಚಲನ ನಡೆಸಿದ್ದಾರೆ ಎಂದು ಮಾಹಿತಿ ದೊರೆತಿದೆ.

 

 

 

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments