Tuesday, August 26, 2025
Google search engine
HomeUncategorizedಕ್ಯಾಶ್ ಪಡೆಯಲು ಎಟಿಎಂ ಬೇಡ, UPI ಬಳಸಿ ಹಣ ಡ್ರಾ ಮಾಡಿ

ಕ್ಯಾಶ್ ಪಡೆಯಲು ಎಟಿಎಂ ಬೇಡ, UPI ಬಳಸಿ ಹಣ ಡ್ರಾ ಮಾಡಿ

ಬೆಂಗಳೂರು : ಮೊದಲ ಬಾರಿಗೆ ATM ಕಾರ್ಡ್‌ ಇಲ್ಲದೆ ಯುಪಿಐ ಬಳಸಿ ಹಣ ಪಡೆಯುವ ಪ್ರಯತ್ನ ಯಶಸ್ವಿಯಾಗಿದೆ. ಗ್ಲೋಬಲ್ ಫಿಂಟೆಕ್‌ಫೆಸ್‌ ಪ್ರಯತ್ನ ಸಕ್ಸಸ್​ ಆಗಿದ್ದು, ಇದನ್ನು ದೇಶದ ಮೊದಲ ಯುಪಿಐ ಎಟಿಎಂ ಎಂದು ಕರೆಯಲಾಗಿದೆ.

ಇನ್ನೂ, ಈ ತಂತ್ರಜ್ಞಾನದಿಂದಾಗಿ ಬೌದ್ಧಿಕ ಎಟಿಎಂ ಕಾರ್ಡ್‌ ತೆಗೆದುಕೊಂಡು ಹೋಗುವ ಅವಶ್ಯಕತೆಲ್ಲ. ಈ ನೂತನ ಸಾಧನದ ವಿಡಿಯೊ ತುಣಕನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮೊದಲು ಪರದೆ ಮೇಲೆ ಮೂಡುವ ‘ಯುಪಿಐ ಕಾರ್ಡ್‌ ರಹಿತ ನಗದು ಪಡೆಯುವ ಪ್ರಕ್ರಿಯೆ’ಯನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ನಮಗೆ ಅಗತ್ಯವಿರುವ ನಗದು ಎಷ್ಟು ಎಂಬುದನ್ನು ನಮೂದಿಸಬೇಕು. ನಂತರ ಪರದೆ ಮೇಲೆ ಕ್ಯೂಆರ್ ಕೋಡ್ ಬರಲಿದ್ದು ಆ ಮೂಲಕ ನೀವು ಹಣ ಪಡೆಯಬಹುದಾಗಿದೆ.

ಹಣ ಡ್ರಾ ಮಾಡಲು ಹೀಗೆ ಮಾಡಿ

  • ಮೊದಲು ನೀವು ಎಷ್ಟು ಹಣವನ್ನು ಹಿಂಪಡೆಯಲು ಬಯಸುತ್ತೀರಿ ಎಂಬುದನ್ನು ನಿರ್ಧರಿಸಬೇಕು.
  • ನಂತರ ATMನಲ್ಲಿ UPI ನಗದು ಹಿಂತೆಗೆದುಕೊಳ್ಳುವ ಆಯ್ಕೆಯನ್ನು ಆರಿಸಿ.
  • ಹಿಂಪಡೆದ ಹಣದ ಮೊತ್ತವನ್ನು ನಮೂದಿಸಿ.
  • QR ಕೋಡ್ ಸ್ಕ್ಯಾನರ್ ಆಯ್ಕೆಯನ್ನು ಆರಿಸಿ.
  • ನಂತರ ನಿಮ್ಮ ಫೋನ್‌ನಲ್ಲಿ UPI ಅಪ್ಲಿಕೇಶನ್ ತೆರೆಯಿರಿ
  • QR ಕೋಡ್ ಅನ್ನು ಸ್ಕ್ಯಾನ್ ಮಾಡಿ.
  • ನಂತರ ನೀವು UPI ಪಿನ್ ಅನ್ನು ನಮೂದಿಸಬೇಕು.
  • UPI ಪಿನ್ ಅನ್ನು ಸರಿಯಾಗಿ ನಮೂದಿಸಿದ ನಂತರ, ವಹಿವಾಟು ಪೂರ್ಣಗೊಳ್ಳುತ್ತದೆ.
  • ವಹಿವಾಟು ಪೂರ್ಣಗೊಂಡ ನಂತರ, ಎಟಿಎಂನಿಂದ ಹಣ ಬರುತ್ತದೆ.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments