Site icon PowerTV

ಕ್ಯಾಶ್ ಪಡೆಯಲು ಎಟಿಎಂ ಬೇಡ, UPI ಬಳಸಿ ಹಣ ಡ್ರಾ ಮಾಡಿ

ಬೆಂಗಳೂರು : ಮೊದಲ ಬಾರಿಗೆ ATM ಕಾರ್ಡ್‌ ಇಲ್ಲದೆ ಯುಪಿಐ ಬಳಸಿ ಹಣ ಪಡೆಯುವ ಪ್ರಯತ್ನ ಯಶಸ್ವಿಯಾಗಿದೆ. ಗ್ಲೋಬಲ್ ಫಿಂಟೆಕ್‌ಫೆಸ್‌ ಪ್ರಯತ್ನ ಸಕ್ಸಸ್​ ಆಗಿದ್ದು, ಇದನ್ನು ದೇಶದ ಮೊದಲ ಯುಪಿಐ ಎಟಿಎಂ ಎಂದು ಕರೆಯಲಾಗಿದೆ.

ಇನ್ನೂ, ಈ ತಂತ್ರಜ್ಞಾನದಿಂದಾಗಿ ಬೌದ್ಧಿಕ ಎಟಿಎಂ ಕಾರ್ಡ್‌ ತೆಗೆದುಕೊಂಡು ಹೋಗುವ ಅವಶ್ಯಕತೆಲ್ಲ. ಈ ನೂತನ ಸಾಧನದ ವಿಡಿಯೊ ತುಣಕನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಮೊದಲು ಪರದೆ ಮೇಲೆ ಮೂಡುವ ‘ಯುಪಿಐ ಕಾರ್ಡ್‌ ರಹಿತ ನಗದು ಪಡೆಯುವ ಪ್ರಕ್ರಿಯೆ’ಯನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ನಮಗೆ ಅಗತ್ಯವಿರುವ ನಗದು ಎಷ್ಟು ಎಂಬುದನ್ನು ನಮೂದಿಸಬೇಕು. ನಂತರ ಪರದೆ ಮೇಲೆ ಕ್ಯೂಆರ್ ಕೋಡ್ ಬರಲಿದ್ದು ಆ ಮೂಲಕ ನೀವು ಹಣ ಪಡೆಯಬಹುದಾಗಿದೆ.

ಹಣ ಡ್ರಾ ಮಾಡಲು ಹೀಗೆ ಮಾಡಿ

Exit mobile version