Sunday, August 24, 2025
Google search engine
HomeUncategorizedಜೈನಮುನಿ ಭೀಕರ ಹತ್ಯೆಗೆ ಖಂಡನೆ: ಜೈನ ಸಮುದಾಯ ಮೌನ ಪ್ರತಿಭಟನೆ

ಜೈನಮುನಿ ಭೀಕರ ಹತ್ಯೆಗೆ ಖಂಡನೆ: ಜೈನ ಸಮುದಾಯ ಮೌನ ಪ್ರತಿಭಟನೆ

ಬಾಗಲಕೋಟೆ : ಜೈನಮುನಿ ಹತ್ಯೆಯನ್ನು ಖಂಡಿಸಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಜೈನ ಸಮುದಾಯದ ವತಿಯಿಂದ ಮೌನ ಪ್ರತಿಭಟನೆ ನಡೆಸಲಾಯಿತು.

ಇದನ್ನೂ ಓದಿ: ರಾಹುಲ್​ ಗಾಂಧಿ ಅನರ್ಹ : ಫ್ರೀಡಂ ಪಾರ್ಕ್​​ನಲ್ಲಿ ಕಾಂಗ್ರೆಸ್​ ನಾಯಕರ ಪ್ರತಿಭಟನೆ

ಆಶ್ರಮದಿಂದ ಕಾಣೆಯಾಗಿದ್ದ ಜೈನಮುನಿಗಳನ್ನು ಭೀಕರವಾಗಿ ಕೊಲೆ ಮಾಡಿದ ಆರೋಪಿಗಳು ದೇಹವನ್ನು 9 ಭಾಗಗಳಾಗಿ ತುಂಡರಿಸಿ ಕೊಳವೆ ಬಾವಿಯಲ್ಲಿ ಹಾಕಿದ್ದರು. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಜೈನ ಮುನಿಗಳನ್ನು ಇಷ್ಟು ಭೀಕರವಾಗಿ ಕೊಲೆಮಾಡಿರುವುದನ್ನು ಖಂಡಿಸಿದ ಬಾಗಲಕೋಟೆ ಜೈನ ಸಮುದಾಯ ಇಂದು ನಗರದ ನವನಗರದಿಂದ ಜಿಲ್ಲಾಧಿಕಾರಿಗಳ  ಕಚೇರಿ ವರೆಗೆ ಮೌನ ಮೆರವಣಿಗೆ ನಡೆಸಿ ಪ್ರತಿಭಟಿಸಿದರು.

ಹತ್ಯೆಗೆ ಕಾರಣರಾದ ತಪ್ಪಿತಸ್ಥರಿಗೆ ಕಾನೂನು ರೀತಿಯಲ್ಲಿ ಕಠಿಣ ಶಿಕ್ಷೆ ನೀಡುವಂತೆ ಒತ್ತಾಯ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ‌‌ ಮನವಿ ಸಲ್ಲಿಕೆ ಮಾಡಲಾಯಿತು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments